ಜೈಪುರ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಈ ನಡುವೆ ಪಂದ್ಯದ ವೇಳೆ ಭಾರತದ ವೇಗಿ ದೀಪಕ್ ಚಹರ್ ಮತ್ತು ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ನಡುವೆ ದೃಷ್ಟಿಯುದ್ಧ ನಡೆದಿದೆ. ಇದು ಅಭಿಮಾನಿಗಳಲ್ಲಿ ಕಿಚ್ಚು ಹೆಚ್ಚಿಸಿತು.
ರೋಚಕವಾಗಿ ಕಂಡುಬಂದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 165 ರನ್ ಗಳ ಗುರಿಯನ್ನು ಭಾರತ ತಂಡ 19.4 ಓವರ್‌ಗಳ ಅಂತ್ಯಕ್ಕೆ 166 ರನ್ ಸಿಡಿಸಿ ಗುರಿ ಮುಟ್ಟಿತ್ತು. ಕೊನೆಯವರೆಗೂ ಕ್ರಿಕೆಟ್ ಪ್ರೇಮಿಗಳ ಎದೆ ಬಡಿತ ಹೆಚ್ಚಿಸಿದ ಈ ಪಂದ್ಯದಲ್ಲಿ ಆಟಗಾರರ ನಡುವೆ ನೆಕ್ ಟು ನೆಕ್ ಫೈಟ್ ಕೂಡ ಜೋರಾಗಿತ್ತು. ಇದನ್ನೂ ಓದಿ: ಸೂರ್ಯ ಸ್ಫೋಟಕ ಅರ್ಧಶತಕ – ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ
ಕಿವೀಸ್ ತಂಡ ದೊಡ್ಡ ಮೊತ್ತ ಕಳೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ 70 ರನ್ (42 ಎಸೆತ, 3 ಬೌಂಡರಿ, 4 ಸಿಕ್ಸ್) ಸಿಡಿಸಿ 17 ನೇನಲ್ಲಿ ಓವರ್ ನಲ್ಲಿ ಔಟ್ ಆದರು. ಗುಪ್ಟಿಲ್ ಔಟ್ ಆಗುವ ಮೊದಲು 17 ನೇ ಓವರ್ ಎಸೆಯಲು ಬಂದ ದೀಪಕ್ ಚಹರ್ ಅವರ ಮೊದಲ ಎಸೆತವನ್ನು ಮಿಡ್ ವಿಕೆಟ್ ಮೇಲೆ ಭರ್ಜರಿ ಸಿಕ್ಸರ್‌ಗಟ್ಟಿ ಚಹರ್‌ರನ್ನು ದುರುಗುಟ್ಟಿ ನೋಡಿದರು. ಆಗ ಸುಮ್ಮನಿದ್ದ, ಚಹರ್ ಮರು ಎಸೆತದಲ್ಲೇ ಗುಪ್ಟಿಲ್ ವಿಕೆಟ್ ಪಡೆಯಲು ಯಶಸ್ವಿಯಾದರು. ಈ ವೇಳೆ ಚಹರ್ ಗುಪ್ಟಿಲ್‍ರನ್ನು ದುರುಗುಟ್ಟಿ ನೋಡಿ ಏಟಿಗೆ ಎದುರೇಟು ನೀಡಿದರು. ಇದನ್ನೂ ಓದಿ: ಐಸಿಸಿಯ 3 ಟೂರ್ನಿಗೆ ಭಾರತ ಆತಿಥ್ಯ, ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ
Yoho!
Haul together ..
Hoist the colours of high.@deepak_chahar9#IndiaVsNewZealand #whatsappforwardfromammavans#longliveammavans pic.twitter.com/tunLAto6ZV
— furball (@liverpolllll) November 17, 2021
ಚಹರ್ ಮತ್ತು ಗುಪ್ಟಿಲ್ ದೃಷ್ಟಿಯುದ್ಧ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಹಲವು ಕಾಮೆಂಟ್‍ನೊಂದಿಗೆ ಪೋಸ್ಟ್ ಮಾಡಿ ಕಿಕ್ ಹೆಚ್ಚಿಸಿದರೆ, ಕೊರೊನಾ ಬಳಿಕ ಮೈದಾನಕ್ಕೆ ಎಂಟ್ರಿಕೊಟ್ಟು ಪಂದ್ಯ ವೀಕ್ಷಿಸಿದ ಪ್ರೇಕ್ಷಕರು ಈ ಸನ್ನಿವೇಶವನ್ನು ಎಂಜಾಯ್ ಮಾಡಿದರು.