ಅಹಮದಾಬಾದ್: ನ್ಯೂಜಿಲೆಂಡ್ (New Zealand) ವಿರುದ್ಧದ 3ನೇ ಟಿ20 (3rd T20) ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಯುವ ಬ್ಯಾಟ್ಸ್‌ಮ್ಯಾನ್ ಶುಭಮನ್ ಗಿಲ್ (Shubman Gill) ಭರ್ಜರಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
Advertisement
ಗಿಲ್ ನ್ಯೂಜಿಲೆಂಡ್ ವಿರುದ್ಧ ಅಜೇಯ 126 ರನ್ (63 ಎಸೆತ, 12 ಬೌಂಡರಿ, 7 ಸಿಕ್ಸ್) ಚಚ್ಚಿ ಟಿ20 ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ಪರ ವೈಯಕ್ತಿಕ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ದಾಖಲೆ (Record) ಬರೆದರು. ಈ ಮೊದಲು ಈ ದಾಖಲೆ ವಿರಾಟ್ ಕೊಹ್ಲಿ (Virat Kohl) ಹೆಸರಲ್ಲಿತ್ತು. ಕೊಹ್ಲಿ ಸಿಡಿಸಿದ್ದ ಅಜೇಯ 122 ರನ್ ಭಾರತದ ಪರ ಬ್ಯಾಟ್ಸ್‌ಮ್ಯಾನ್ ಒಬ್ಬ ಸಿಡಿಸಿದ ವೈಯಕ್ತಿಕ ಹೆಚ್ಚು ರನ್ ಆಗಿತ್ತು. ಈ ದಾಖಲೆಯನ್ನು ಗಿಲ್ ಮುರಿದು ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇದನ್ನೂ ಓದಿ: Union Budget 2023: ಕ್ರೀಡೆಗೆ ದಾಖಲೆಯ 3,397.22 ಕೋಟಿ ರೂ. ಅನುದಾನ
Advertisement
Shubman Gill put up a sensational show to score a stunning 1⃣2⃣6⃣* & was our top performer from the first innings of the third & final #INDvNZ T20I ???? ???? #TeamIndia
Here's a summary of his superb knock ???? pic.twitter.com/hDHBvDuizO
— BCCI (@BCCI) February 1, 2023
Advertisement
ಇದಲ್ಲದೇ ಟೆಸ್ಟ್, ಏಕದಿನ ಮತ್ತು ಟಿ20 ಮೂರು ಮಾದರಿ ಕ್ರಿಕೆಟ್‍ನಲ್ಲಿ ಶತಕ ಸಿಡಿಸಿ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಗಿಲ್ ಅಬ್ಬರದ ಆಟದ ಪರಿಣಾಮ ಭಾರತ 20 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 234 ರನ್ ಸಿಡಿಸಿತು. ನ್ಯೂಜಿಲೆಂಡ್‍ಗೆ 235 ರನ್‍ಗಳ ಬೃಹತ್ ಟಾರ್ಗೆಟ್ ನೀಡಿತು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k