ಕೋಲ್ಕತ್ತಾ: ಅಕ್ಷರ್ ಪಟೇಲ್ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ತಮ್ಮ ಭರ್ಜರಿ ಬೌಲಿಂಗ್ ಮೂಲಕ ಭಾರತ ತಂಡಕ್ಕೆ 73 ರನ್‌ಗಳ ಜಯ ತಂದು ಕೊಟ್ಟಿದ್ದಾರೆ.
Advertisement
ಭಾರತ ನೀಡಿದ 185 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಪಟೇಲ್ ಮಾರಕವಾಗಿ ಎರಗಿದರು. 4 ಓವರ್ ಎಸೆದು ಕೇವಲ 9 ರನ್ ನೀಡಿ ನ್ಯೂಜಿಲೆಂಡ್‍ನ ಪ್ರಮುಖ ಮೂರು ವಿಕೆಟ್ ಕಿತ್ತು ಮಿಂಚಿದರು. ಇದನ್ನೂ ಓದಿ: ನವಜೋತ್ ಸಿಧುರನ್ನು ತರಾಟೆಗೆ ತೆಗೆದುಕೊಂಡ ಗೌತಮ್ ಗಂಭೀರ್
Advertisement
Advertisement
ನ್ಯೂಜಿಲೆಂಡ್ ಪರ ಮಾರ್ಟಿನ್ ಗುಪ್ಟಿಲ್ 51 ರನ್ (36 ಎಸೆತ, 4 ಬೌಂಡರಿ, 4 ಸಿಕ್ಸ್) ಬಾರಿಸಿದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ನ್ಯೂಜಿಲೆಂಡ್ ಗೆಲುವಿಗೆ ಹೋರಾಡಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್ ತಂಡ 17.2 ಓವರ್‌ಗಳಲ್ಲಿ 111 ರನ್ ಗಳಿಗೆ ಆಲ್‌ಔಟ್ ಆಯಿತು. ಇದರೊಂದಿಗೆ ಭಾರತ ತಂಡ 73 ರನ್ ಗಳ ಜಯ ಸಾಧಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿ ಗೆದ್ದು ಬೀಗಿದೆ. ಇದನ್ನೂ ಓದಿ: ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್
Advertisement
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಭರ್ಜರಿ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್‍ಗೆ 69 ರನ್ (38 ಎಸೆತ) ಜೊತೆಯಾಟವಾಡಿದರು. ಇಶಾನ್ ಕಿಶನ್ 29 ರನ್ (21 ಎಸೆತ, 6 ಬೌಂಡರಿ) ಸಿಡಿಸಿ ಔಟ್ ಆದರೆ ನಂತರ ಬಂದ ಕಳೆದ ಪಂದ್ಯದ ಹೀರೋ ಸೂರ್ಯಕುಮಾರ್ ಯಾದವ್ ಶೂನ್ಯ ಸುತ್ತಿದರು. ರಿಷಬ್ ಪಂತ್ 4 ರನ್ (6 ಎಸೆತ) ಮಾಡಿ ಮಿಚೆಲ್ ಸ್ಯಾಂಟ್ನರ್ ಗೆ ವಿಕೆಟ್ ಒಪ್ಪಿಸಿದರು. ಸ್ಯಾಂಟ್ನರ್ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಿತ್ತು ಭಾರತಕ್ಕೆ ಕಾಡಿದರು. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ಜೊತೆ ಆರ್‌ಸಿಬಿಗೂ ವಿದಾಯ ಹೇಳಿದ ಎಬಿಡಿ
ರೋಹಿತ್ ಶರ್ಮಾ 53 ರನ್ (31 ಎಸೆತ, 5 ಬೌಂಡರಿ 3 ಸಿಕ್ಸ್) ಸಿಡಿಸಿ ತಂಡಕ್ಕೆ ಆಸರೆಯಾದರು. ರೋಹಿತ್ ಔಟ್ ಆದ ಬಳಿಕ ಶ್ರೇಯಸ್ ಅಯ್ಯರ್ 25 ರನ್ (20 ಎಸೆತ, 2 ಬೌಂಡರಿ), ವೆಂಕಟೇಶ್ ಅಯ್ಯರ್ 20 ರನ್ (15 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಹರ್ಷಲ್ ಪಟೇಲ್ 18 ರನ್ (11 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ರನ್ ಹೆಚ್ಚಿಸಿದರು. ಕಡೆಯಲ್ಲಿ ದೀಪಕ್ ಚಹರ್ ಸ್ಫೋಟಕ ಬ್ಯಾಟಿಂಗ್ ನಡೆಸಿ 21 (8 ಎಸೆತ, 2 ಬೌಂಡರಿ, 1 ಸಿಕ್ಸ್) ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತು.
ನ್ಯೂಜಿಲೆಂಡ್ ತಂಡದ ಪರ ಮಿಚೆಲ್ ಸ್ಯಾಂಟ್ನರ್ 3 ವಿಕೆಟ್ ಕಿತ್ತು ಮಿಂಚಿದರೆ, ಆಡಮ್ ಮಿಲ್ನೆ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್, ಐಶ್ ಸೋಧಿ ತಲಾ ಒಂದು ವಿಕೆಟ್ ಪಡೆದರು.