– ನ್ಯೂಜಿಲೆಂಡಿನಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ
– ಸೂಪರ್ ಓವರಿನಲ್ಲಿ ಮತ್ತೆ ಕೀವಿಸ್‍ಗೆ ಸೋಲು
ಹ್ಯಾಮಿಲ್ಟನ್: ಸೂಪರ್ ಓವರಿನ ಕೊನೆಯ ಎರಡು ಎಸೆತದಲ್ಲಿ ರೋಹಿತ್ ಶರ್ಮಾ ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಮೂಲಕ ಭಾರತ ಮೂರನೇ ಟಿ20 ಪಂದ್ಯದೊಂದಿಗೆ ಸರಣಿ ಗೆದ್ದು ನ್ಯೂಜಿಲೆಂಡಿನಲ್ಲಿ ಇತಿಹಾಸ ನಿರ್ಮಿಸಿದೆ.
ಗೆಲ್ಲಲು 180 ರನ್ ಗಳ ಗುರಿಯನ್ನು ಪಡೆದ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 179 ರನ್ ಗಳಿಸಿದ ಪರಿಣಾಮ ಪಂದ್ಯ ಟೈ ಆಯ್ತು. ಹೀಗಾಗಿ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯ್ತು. ಇದನ್ನೂ ಓದಿ: 5 ಎಸೆತಗಳಲ್ಲಿ 26 ರನ್ ಚಚ್ಚಿದ ರೋ’ಹಿಟ್’
Advertisement
9 needed from the last over!
Williamson on 95* ???? #NZvIND pic.twitter.com/HuLo0BTlkj
— ICC (@ICC) January 29, 2020
Advertisement
ಬುಮ್ರಾ ಎಸೆದ ಸೂಪರ್ ಓವರಿನಲ್ಲಿ ಕೇನ್ ವಿಲಿಯಮ್ಸನ್ ಮತ್ತು ಮಾರ್ಟಿನ್ ಗಪ್ಟಿಲ್ 17 ರನ್ ಹೊಡೆದರು. ಈ ಓವರಿನಲ್ಲಿ ಬುಮ್ರಾ ಅನುಕ್ರಮವಾಗಿ 1,1,6,4,1,4 ರನ್ ಬಿಟ್ಟುಕೊಟ್ಟರು. ಇದನ್ನೂ ಓದಿ: ಸೂಪರ್‌ಮ್ಯಾನ್‌ನಂತೆ ಬದಲಾದ ಹಿಟ್‍ಮ್ಯಾನ್- ರೋಹಿತ್ ಬ್ರಿಲಿಯಂಟ್ ಕ್ಯಾಚ್‍ಗೆ ಅಭಿಮಾನಿಗಳು ಫಿದಾ
Advertisement
ಭಾರತದ ಪರ ಸೂಪರ್ ಓವರ್ ಆಡಲು ರೋಹಿತ್ ಶರ್ಮಾ ಮತ್ತು ರಾಹುಲ್ ಕ್ರೀಸ್‍ಗೆ ಆಗಮಿಸಿದರು. ಟಿಮ್ ಸೌಥಿ ಎಸೆದ ಮೊದಲ ಓವರಿನ ಮೊದಲ ಎಸೆತದಲ್ಲಿ ಎರಡು ರನ್ ಕದಿಯಲು ಹೋಗಿದ್ದ ವೇಳೆ ರೋಹಿತ್ ಶರ್ಮಾ ರನ್ ಔಟ್ ಆಗುವ ಸಾಧ್ಯತೆಯಿತ್ತು. ಕೀಪರ್ ಕೈ ಸೇರಿ ಬಾಲ್ ಕೆಳಗಡೆ ಬಿದ್ದ ಪರಿಣಾಮ ರೋಹಿತ್ ಶರ್ಮಾ ಪಾರಾದರು. ಎರಡನೇ ಎಸೆತದಲ್ಲಿ ಒಂದು ರನ್ ಬಂದರೆ ಮೂರನೇ ಎಸೆತವನ್ನು ರಾಹುಲ್ ಬೌಂಡರಿಗೆ ಅಟ್ಟಿದರು. ಕೊನೆಯ ಮೂರು ಎಸೆತದಲ್ಲಿ 11 ರನ್ ಬೇಕಿದ್ದಾಗ ನಾಲ್ಕನೇಯ ಎಸೆತದಲ್ಲಿ ರಾಹುಲ್ 1 ರನ್ ಓಡಿದರು. ಕೊನೆಯ ಎರಡು ಎಸೆತದಲ್ಲಿ 10 ರನ್ ಬೇಕಿತ್ತು. ಸಿಕ್ಸ್ ಹೊಡೆಯುವ ಅನಿವಾರ್ಯತೆ ಇದ್ದಾಗ ರೋಹಿತ್ ಶರ್ಮಾ 5ನೇ ಎಸೆತವನ್ನು ಬೌಂಡರಿ ಲೈನ್ ಆಚೆಗೆ ಬಾಲ್ ತಳ್ಳುವ ಮೂಲಕ ಪಂದ್ಯವನ್ನು ಜೀವಂತವಾಗಿಟ್ಟರು. ಕೊನೆಯ ಎಸೆತದಲ್ಲಿ 4 ರನ್ ಬೇಕಿತ್ತು. ಪಂದ್ಯ ಏನಾಗುತ್ತದೋ ಏನೋ ಎನ್ನುವ ಆತಂಕದಲ್ಲಿದ್ದಾಗ ರೋಹಿತ್ ಶರ್ಮಾ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಸ್ಮರಣೀಯ ಜಯವನ್ನು ತಂದುಕೊಟ್ಟರು. 65 ರನ್ ಜೊತೆಗೆ 15 ರನ್ ಹೊಡೆದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದನ್ನೂ ಓದಿ: ಫಿಟ್ನೆಸ್ ವಿಡಿಯೋ ಹಂಚಿಕೊಂಡು ಅಭಿಮಾನಿಗಳಿಗೆ ಪ್ರೇರಣೆಯಾದ ಕ್ಯಾಪ್ಟನ್ ಕೊಹ್ಲಿ
Advertisement
India win!
Rohit Sharma hits the final two balls for six to win the game ???? #NZvIND pic.twitter.com/CXFdI9chHl
— ICC (@ICC) January 29, 2020
ಟೀಂ ಇಂಡಿಯಾ ನೀಡಿದ್ದ 180 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಭಾರತದ ಯುವ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಗಪ್ಟಿಲ್ ವಿಕೆಟ್ ಕಿತ್ತರು. ಈ ಮೂಲಕ ಮೊದಲ ವಿಕೆಟ್‍ಗೆ 47 ರನ್‍ಗಳ ಜೊತೆಯಾಟ ಕಟ್ಟಿದ್ದ ಗಪ್ಟಿಲ್ ಹಾಗೂ ಮನ್ರೊ ಜೋಡಿಯನ್ನು ಶಾರ್ದೂಲ್ ಮುರಿದರು. ಈ ಬೆನ್ನಲ್ಲೇ 14 ರನ್ ಗಳಿಸಿದ್ದ ಮನ್ರೋ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.
ಬಳಿಕ ಮೈದಾಕ್ಕಿಳಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ತಂಡವನ್ನು ಗೆಲುವಿನ ದಡದತ್ತ ತಂದರು. ಆದರೆ ಮಿಚೆಲ್ ಸ್ಯಾಂಟ್ನರ್ 9 ರನ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ 5 ರನ್‍ಗೆ ವಿಕೆಟ್ ಒಪ್ಪಿಸಿದರು. ಕೇನ್ ವಿಲಿಯಮ್ಸನ್ ಮಾತ್ರ ಬೌಂಡರಿ ಹಾಗೂ ಸಿಕ್ಸರ್ ಸುರಿಮಳೆ ಸುರಿಸಿದರು. ವಿಲಿಯಮ್ಸನ್ 95 ರನ್(48 ಎಸೆತ, 8 ಬೌಂಡರಿ, 6 ಸಿಕ್ಸರ್) ಹೊಡೆದು ಕೊನೆಯ ಓವರಿನಲ್ಲಿ ಔಟಾಗಿದ್ದು ನ್ಯೂಜಿಲೆಂಡ್ ಸೋಲಿಗೆ ಕಾರಣವಾಯ್ತು.
WHAT A MATCH! ????????#TeamIndia win in super over, take an unassailable lead of 3️⃣ – 0️⃣ in the 5-match series. ???????? #TeamIndia #NZvIND pic.twitter.com/4Lc1AdFZZg
— BCCI (@BCCI) January 29, 2020
ಶಮಿ ಶೈನ್:
ಜಸ್‍ಪ್ರೀತ್ ಬುಮ್ರಾ ಎಸೆದ ಇನ್ನಿಂಗ್ಸ್ ನ 19ನೇ ಓವರ್ ನಲ್ಲಿ ರಾಸ್ ಟೇಲರ್ ಹಾಗೂ ವಿಲಿಯಮ್ಸನ್ ಜೋಡಿ 11 ರನ್ ಬಾರಿಸಿ ತಂಡವನ್ನು ಗೆಲುವಿನ ಹತ್ತಿರ ತಂದರು. 6 ಎಸೆತಗಳಲ್ಲಿ 9 ರನ್ ಅಗತ್ಯವಿದ್ದಾಗ ರಾಸ್ ಟೇಲರ್ ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿ ಬಳಿಕ ಒಂಟಿ ರನ್ ಗಳಿಸಿದರು. ಆದರೆ 3ನೇ ಎಸೆತದಲ್ಲಿ ಮೊಹಮ್ಮದ್ ಶಮಿ ಕೇನ್ ವಿಲಿಯಮ್ಸನ್ ವಿಕೆಟ್ ಕಿತ್ತಿದ್ದು ಪಂದ್ಯಕ್ಕೆ ಭರ್ಜರಿ ಟ್ವಿಸ್ಟ್ ನೀಡಿತು. 4ನೇ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ಐದನೇ ಎಸೆತದಲ್ಲಿ ಸೀಫರ್ಟ್ ಓಡಿದ ಪರಿಣಾಮ ರೋಸ್ ಟೇಲರ್ ಕ್ರೀಸಿಗೆ ಬಂದರು. ಬೈ ಮೂಲಕ ಒಂದು ರನ್ ಬಂದ ಕಾರಣ ನ್ಯೂಜಿಲೆಂಡ್ ಗೆಲ್ಲಲು ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿತ್ತು. ಆದರೆ ಶಮಿ ಎಸೆದ ಬಾಲ್ ಟೇಲರ್ ಬ್ಯಾಟ್ ವಂಚಿಸಿ ನೇರವಾಗಿ ವಿಕೆಟಿಗೆ ಬಡಿದ ಪರಿಣಾಮ ಪಂದ್ಯ ಸೂಪರ್ ಓವರ್ ಕಡೆ ತಿರುಗಿತು.
ಧೋನಿಯ ದಾಖಲೆ ಮುರಿದ ಕೊಹ್ಲಿ:
ಪಂದ್ಯದಲ್ಲಿ 25 ರನ್ ಗಳಿಸಿದ ನಂತರ ಕೊಹ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಇದ್ದ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಕೊಹ್ಲಿ ಮುರಿದರು. ಧೋನಿ 72 ಪಂದ್ಯಗಳಲ್ಲಿ 37.06 ಸರಾಸರಿಯಲ್ಲಿ 1,112 ರನ್ ಗಳಿಸಿದ್ದಾರೆ. ಕೊಹ್ಲಿ 36ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ. ಅವರು 18 ಪಂದ್ಯಗಳಲ್ಲಿ 38.35 ಸರಾಸರಿಯಲ್ಲಿ 652 ರನ್ ಗಳಿಸಿದ್ದಾರೆ.
Another day at office. Another record for #KingKohli ???? pic.twitter.com/k9BmqtugWf
— BCCI (@BCCI) January 29, 2020
ರೋಹಿತ್ ಶರ್ಮಾ 40 ಎಸೆತಗಳಲ್ಲಿ 65 ರನ್ ಗಳಿಸಿ ಪೆವಿಲಿಯನ್‍ಗೆ ಮರಳಿದರು. ಬೆನೆಟ್ ಅವರನ್ನು ಪೆವಿಲಿಯನ್‍ಗೆ ಕಳುಹಿಸಿದರು. ರೋಹಿತ್ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಅವರ ವೃತ್ತಿಜೀವನದ 20ನೇ ಅರ್ಧಶತಕವಾಗಿದೆ. ಈ ಇನ್ನಿಂಗ್ಸ್ ನಲ್ಲಿ ರೋಹಿತ್ ಓಪನರ್ ಆಗಿ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 10,000 ರನ್‍ಗಳನ್ನು ಪೂರ್ಣಗೊಳಿಸಿದರು.
ಮೂರನೇ ಬಾರಿಗೆ 23 ಎಸೆತಗಳಲ್ಲಿ ಅರ್ಧಶತಕ:
ರೋಹಿತ್ ಶರ್ಮಾ 23 ಎಸೆತಗಳಲ್ಲಿ ಮೂರು ಬಾರಿ ಅರ್ಧಶತಕ ಬಾರಿಸಿದ್ದಾರೆ. 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಲಾಡರ್ಹಿಲ್ ಮೈದಾನದಲಿ ನಡೆದ ಪಂದ್ಯದಲ್ಲಿ ರೋಹಿತ್ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ರಾಜ್‍ಕೋಟ್‍ನಲ್ಲಿ ನಡೆದ ಪಂದ್ಯದಲ್ಲಿ 23 ಎಸೆತದಲ್ಲಿ ಫಿಫ್ಟಿ ದಾಖಲಿಸಿದ್ದರು. 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನಲ್ಲಿ ನಡೆದ ಪಂದ್ಯ ಹಾಗೂ ನ್ಯೂಜಿಲೆಂಡ್ ವಿರುದ್ಧದ ಇಂದಿನ ಪಂದ್ಯದಲ್ಲಿ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.
FIFTY for Rohit Sharma ????
The opener brings up his 20th T20I half-century with a maximum! Can he convert this into a big one?#NZvIND pic.twitter.com/sUnjgTZ8RW
— ICC (@ICC) January 29, 2020