– ಕಿವೀಸ್ ಬೌಲರ್‌ಗಳಿಗೆ ಭಾರತ ತತ್ತರ- 242 ರನ್‍ಗಳಿಗೆ ಆಲೌಟ್
– ಕಳೆದ 10 ಇನ್ನಿಂಗ್ಸ್‍ಗಳಲ್ಲಿ 204 ರನ್ ಗಳಿಸಿ ವಿರಾಟ್
ಕ್ರೈಸ್ಟ್‌ಚರ್ಚ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20 ಸೇರಿಂದಂತೆ ಕಳೆದ 21 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಒಂದೇ ಒಂದು ಶತಕ ಬಾರಿಸಿಲ್ಲ. ಅಲ್ಲದೆ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಕಳೆದ 10 ಇನ್ನಿಂಗ್ಸ್ ಗಳಲ್ಲಿ ಕೇವಲ 204 ರನ್ ಗಳಿಸಿದ್ದಾರೆ.
ಕ್ರೈಸ್ಟ್‌ಚರ್ಚ್ ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ 15 ಎಸೆತಗಳಲ್ಲಿ ಕೇವಲ 3 ರನ್‍ಗಳಿಗೆ ಔಟಾದರು. ಟಿಮ್ ಸೌಥಿ ಬೌಲಿಂಗ್ ವೇಳೆ ವಿರಾಟ್ ಕೊಹ್ಲಿ ಎಲ್‍ಬಿಡಬ್ಲ್ಯೂಗೆ ತುತ್ತಾದರು. ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಕೊಹ್ಲಿ ತಮ್ಮ ಕೊನೆಯ ಶತಕವನ್ನು ಗಳಿಸಿದ್ದರು. ಅಂದರೆ 99 ದಿನಗಳ ಹಿಂದೆ ಶತಕ ದಾಖಲಿಸಿದ್ದರು. ಆಗ ಅವರು 136 ರನ್ ಗಳಿಸಿದ್ದರು.
Advertisement
Virat Kohli's last 5️⃣ scores in international cricket:
3, 19, 2, 9, 15#NZvIND pic.twitter.com/0LUY5cJwwJ
— ICC (@ICC) February 29, 2020
Advertisement
ಮಿಂಚಿದ ಪೃಥ್ವಿ ಶಾ:
ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶ ನೀಡಿದ್ದ ಪೃಥ್ವಿ ಶಾ ಇಂದಿನ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಮಿಂಚಿದ್ದಾರೆ. ಅವರು 54 ರನ್ (64 ಎಸೆತ, 8 ಬೌಂಡರಿ, 1 ಸಿಕ್ಸ್) ಗಳಿಸಿ ವಿಕೆಟ್ ಒಪ್ಪಿಸಿದರು. ಚೇತಶ್ವರ ಪೂಜಾರ 54 ರನ್ (140 ಎಸೆತ, 6 ಬೌಂಡರಿ) ಹಾಗೂ ಹುನುಮ ವಿಹಾರಿ 55 ರನ್ (92 ಎಸೆತ, 10 ಬೌಂಡರಿ) ಗಳಿಸಿದರು. ಆದರೆ 5 ಆಟಗಾರರ ಎರಡಂಕಿ ರನ್ ಕಲೆಹಾಕುವಲ್ಲಿ ವಿಫಲರಾದರು. ಪರಿಣಾಮ ಭಾರತ ಮೊದಲ ಇನ್ನಿಂಗ್ಸ್ ನ 63 ಓವರ್‌ಗಳಲ್ಲಿ 242 ರನ್ ಗಳಿಸಿ ಸರ್ವಪತನ ಕಂಡಿತು.
Advertisement
ಬಳಿಕ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಯಾವುದೇ ವಿಕೆಟ್ ಕಷ್ಟವಿಲ್ಲದೆ ಮೊದಲ ದಿನದಾಟದ ಮುಕ್ತಾಯಕ್ಕೆ 23 ಓವರ್‌ಗಳಲ್ಲಿ 63 ಗಳಿಸಿದೆ. ಕಿವೀಸ್ ಪರ ಟಾಮ್ ಲ್ಯಾಥಮ್ 27 ರನ್ ಹಾಗೂ ಟಾಮ್ ಬ್ಲಂಡೆಲ್ 29 ರನ್ ಗಳಿಸಿದರು.
Advertisement
Pujara is surviving, but Shaw is thriving!
He passes fifty for the third time in Tests with a six, taking just 61 balls to reach the milestone ???? #NZvIND pic.twitter.com/DIBT59o2MB
— ICC (@ICC) February 29, 2020
ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಆಡಿದ್ದ 3 ಏಕದಿನ ಮತ್ತು 4 ಟಿ20 ಗಳಲ್ಲಿ ಕೇವಲ 180 ರನ್ ಗಳಿಸಿದ್ದರು. ಇದರಲ್ಲಿ ಕೇವಲ ಒಂದು ಅರ್ಧಶತಕವೂ ಸೇರಿದೆ. ಜೊತೆಗೆ ವೆಲ್ಲಿಂಗ್ಟನ್‍ನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್ ನಲ್ಲಿ 2 ರನ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 19 ರನ್ ಗಳಿಸಿದ್ದರು. ಈ ವೇಳೆ ಭಾರತ 10 ವಿಕೆಟ್‍ಗಳಿಂದ ಸೋಲು ಕಂಡಿತ್ತು.
ಟಿ20, ಏಕದಿನ ಸರಣಿಯಲ್ಲೂ ಫ್ಲಾಪ್:
ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ 4 ಟಿ20 ಪಂದ್ಯಗಳಲ್ಲಿ 125 ರನ್ ಹಾಗೂ 3 ಏಕದಿನ ಪಂದ್ಯಗಳಲ್ಲಿ 75 ರನ್ ಗಳಿಸಿದ್ದರು. ಕೊಹ್ಲಿ ಕಳಪೆ ಫಾರ್ಮ್ ನೊಂದಿಗೆ ಹೋರಾಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಫೆಬ್ರವರಿ 2014 ಮತ್ತು ಅಕ್ಟೋಬರ್ 2014ರ ನಡುವೆ ಅವರು ಮೂರು ಸ್ವರೂಪಗಳ 25 ಇನ್ನಿಂಗ್ಸ್ ಗಳಲ್ಲಿ ಶತಕ ಗಳಿಸಲು ವಿಫಲರಾಗಿದ್ದರು. ಇದು ಇಂಗ್ಲೆಂಡ್ ಪ್ರವಾಸವನ್ನೂ ಒಳಗೊಂಡಿದೆ, ಇದರಲ್ಲಿ ಅವರು 5 ಟೆಸ್ಟ್ ಪಂದ್ಯಗಳಲ್ಲಿ ಕೇವಲ 134 ರನ್ ಗಳಿಸಿದ್ದರು.
ನಂ.1 ಪಟ್ಟದಿಂದ ಕೆಳಗಿಳಿದ ಕೊಹ್ಲಿ:
ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ನಿಂದಾಗಿ ನಂಬರ್-1 ಸ್ಥಾನದಿಂದ ಕೆಳಗೆ ಇಳಿದಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ 911 ಅಂಕಗಳೊಂದಿಗೆ ಎಂಟನೇ ಬಾರಿಗೆ ಅಗ್ರಸ್ಥಾನಕ್ಕೆ ಏರಿದ್ದರೆ, ಕೊಹ್ಲಿ 906 ಅಂಕಗಳಿಂದ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಉಳಿದಂತೆ ಅಜಿಂಕ್ಯ ರಹಾನೆ 8ನೇ ಸ್ಥಾನ, ಚೇತೇಶ್ವರ ಪೂಜಾರ 9ನೇ ಸ್ಥಾನ ಹಾಗೂ ಮಾಯಾಂಕ್ ಅಗರ್ವಾಲ್ 10ನೇ ಸ್ಥಾನದಲ್ಲಿದ್ದಾರೆ.