ರಾಯ್ಪುರ: ಇಶನ್ ಕಿಶನ್ (Ishan Kishan) ಮತ್ತು ಸೂರ್ಯಕುಮಾರ್ ಯಾದವ್ (Surya Kumar Yadav) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ (New Zealand) ವಿರುದ್ಧ ಎರಡನೇ ಟಿ20 ಪಂದ್ಯವನ್ನು ಭಾರತ (India) 7 ವಿಕೆಟ್‌ಗಳಿಂದ ಜಯಗಳಿಸಿ ವಿಶ್ವ ದಾಖಲೆ ಬರೆದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 208 ರನ್ ಹೊಡೆಯಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಭಾರತ 15.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್ ಹೊಡೆದು ಜಯಗಳಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ.
ಭಾರತ ದಾಖಲೆ:
ಇಲ್ಲಿಯವರೆಗೆ ವೇಗವಾಗಿ 200+ ಚೇಸಿಂಗ್ ಮಾಡಿದ ದಾಖಲೆ ಪಾಕಿಸ್ತಾನದ ಹೆಸರಿನಲ್ಲಿತ್ತು. 2025 ರಲ್ಲಿ ನ್ಯೂಜಿಲೆಂಡ್ ವಿರುದ್ಧ 205 ರನ್‌ಗಳ ಗುರಿಯನ್ನು ಪಾಕಿಸ್ತಾನ 16.0 ಓವರ್‌ಗಳಲ್ಲಿ ಮುಟ್ಟಿತ್ತು. ಈಗ ಭಾರತ 15.2 ಓವರ್‌ಗಳಲ್ಲಿ ವೇಗವಾಗಿ 200+ ರನ್ ಚೇಸ್ ಮಾಡಿ ವಿಶ್ವದಾಖಲೆ ನಿರ್ಮಿಸಿದೆ. ಇದನ್ನೂ ಓದಿ: ಭಾರತಕ್ಕೆ ನಾವು ಹೋಗಲ್ಲ – ಐಸಿಸಿಗೆ ಬಾಂಗ್ಲಾ ಉತ್ತರ
Sublime striking! 🔥
🎥 Ishan Kishan gets to his fifty in some style 👏
Updates ▶️ https://t.co/8G8p1tq1RC#TeamIndia | #INDvNZ | @IDFCFIRSTBank | @ishankishan51 pic.twitter.com/x4RK92sjmJ
— BCCI (@BCCI) January 23, 2026
ಆರಂಭದಲ್ಲೇ ಕುಸಿತ:
ಹಾಗೆ ನೋಡಿದರೆ ಸಿಕ್ಸ್ ಸಿಡಿಸಿ ಸಂಜು ಸಾಮ್ಸನ್ ಮೊದಲ ಓವರ್‌ನಲ್ಲೇ ಔಟಾದರೆ ಎರಡನೇ ಓವರಿನ ಮೊದಲ ಎಸೆತದಲ್ಲಿ ಅಭಿಷೇಕ್ ಶರ್ಮಾ ಕ್ಯಾಚ್ ನೀಡಿ ಶೂನ್ಯಕ್ಕೆ ಔಟಾದರು. 6 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಯಾದ ಇಶನ್ ಕಿಶನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟಿಗೆ 49 ಎಸೆತಗಳಲ್ಲಿ ಸ್ಫೋಟಕ 122 ರನ್ ಜೊತೆಯಾಟವಾಡಿದರು. ಈ ಪೈಕಿ ಸೂರ್ಯ 39 ರನ್ ಹೊಡೆದರೆ ಇಶನ್ ಕಿಶನ್ 76 ರನ್(32 ಎಸೆತ, 11 ಬೌಂಡರಿ, 4 ಸಿಕ್ಸ್) ಹೊಡೆದು ಔಟಾದರು. ಮೂಲೆ ಮೂಲೆಗೆ ಬಾಲ್ ಚಚ್ಚಿದ ಇಶನ್ ಕಿಶನ್ ಸಿಕ್ಸ್ ಸಿಡಿಸಲು ಹೋಗಿ ಕ್ಯಾಚ್ ನೀಡಿ ಔಟಾದರು.
ಇಶನ್ ಔಟಾದ ನಂತರ ಬಂದ ಶಿವಂ ದುಬೆ ತಾನು ಕಡಿಮೆಯಿಲ್ಲ ಎನ್ನುವಂತೆ ಬ್ಯಾಟ್ ಬೀಸಿದರು. ಸೂರ್ಯ ಮತ್ತು ದುಬೆ ಮುರಿಯದ ನಾಲ್ಕನೇ ವಿಕೆಟಿಗೆ 37 ಎಸೆತಗಳಲ್ಲಿ 81 ರನ್ ಚಚ್ಚುವ ಮೂಲಕ ಜಯವನ್ನು ತಂದುಕೊಟ್ಟರು. ಸೂರ್ಯ ಔಟಾಗದೇ 82 ರನ್(37 ಎಸೆತ, 9 ಬೌಂಡರಿ, 4 ಸಿಕ್ಸ್), ಶಿವಂ ದುಬೆ ಔಟಾಗದೇ 36 ರನ್ (18 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿದರು.
ಮೊದಲು ಬ್ಯಾಟ್ ಬೀಸಿದ ನ್ಯೂಜಿಲೆಂಡ್ ಪರ ರಚಿನ್ ರವಿಂದ್ರ 44 ರನ್(26 ಎಸೆತ, 2 ಬೌಂಡರಿ, 4 ಸಿಕ್ಸ್) ನಾಯಕ ಮಿಚೆಲ್ ಸ್ಯಾಂಟ್ನರ್ 47 ರನ್(27 ಎಸೆತ, 6 ಬೌಂಡರಿ, 1 ಸಿಕ್ಸ್) ಹೊಡೆದರು.
HAMMERED and how! 🚀
🎥 Shivam Dube and Surya Kumar Yadav with a couple of massive maximums 😮
Updates ▶️ https://t.co/8G8p1tq1RC#TeamIndia | #INDvNZ | @IDFCFIRSTBank | @IamShivamDube | @surya_14kumar pic.twitter.com/XGxSxTbiZm
— BCCI (@BCCI) January 23, 2026
ನ್ಯೂಜಿಲೆಂಡ್ ರನ್ ಏರಿದ್ದು ಹೇಗೆ?
50 ರನ್ – 32 ಎಸೆತ
100 ರನ್ – 55 ಎಸೆತ
150 ರನ್ – 89 ಎಸೆತ
200 ರನ್ – 119 ಎಸೆತ
208 ರನ್ – 120 ಎಸೆತ
ಭಾರತದ ರನ್ ಏರಿದ್ದು ಹೇಗೆ?
50 ರನ್ – 25 ಎಸೆತ
100 ರನ್ – 48 ಎಸೆತ
150 ರನ್ – 68 ಎಸೆತ
200 ರನ್ – 87 ಎಸೆತ
209 ರನ್ – 92 ಎಸೆತ

