ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಕೊನೆಯ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಭರ್ಜರಿಯಾಗಿ ಆಡುತ್ತಿದೆ. 44 ಓವರ್ ನಲ್ಲಿ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದೆ.
ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದಾರೆ. ರೋಹಿತ್ ಶರ್ಮಾ ತನ್ನ ವೃತ್ತಿ ಜೀವನದ 15ನೇ ಶತಕ ದಾಖಲಿಸಿದರೆ, ಕೊಹ್ಲಿ ಶತಕ ದಾಖಲಿಸಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ಏಕದಿನ 9 ಸಾವಿರ ರನ್ ಗಡಿ ದಾಟಿದ ದಾಖಲೆಗೂ ಸೇರ್ಪಡೆಯಾದರು. ಪಂದ್ಯದಲ್ಲಿ 83 ರನ್ ಗಳಿಸುತ್ತಿದ್ದಂತೆಯೇ ಈ ದಾಖಲೆಗೆ ಪಾತ್ರರಾದರು.
Advertisement
ಏಕದಿನ ಪಂದ್ಯದಲ್ಲಿ 9 ಸಾವಿರ ರನ್ ಗಳಿಸಿದ 6ನೇ ಕ್ರಿಕೆಟಿಗ ಎಂದೆನಿಸಿದರು. ಇದಕ್ಕೂ ಮುನ್ನ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ ಹಾಗೂ ಮೊಹಮ್ಮದ್ ಅಜರುದ್ದೀನ್ ಈ ದಾಖಲೆ ಮಾಡಿದ್ದಾರೆ.
Advertisement
18 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ರೋಹಿತ್ ಶರ್ಮಾ 138 ಎಸೆತಗಳಲ್ಲಿ 147 ರನ್ ಗಳಿಸಿ ರೋಹಿತ್ ಶರ್ಮಾ ಔಟಾದರು. 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ವಿರಾಟ್ ಕೊಹ್ಲಿ ಶತಕ ಬಾರಿಸಿದರು. ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾದ ಮೊದಲ ವಿಕೆಟ್ 7ನೇ ಓವರ್ ನ ಮೊದಲ ಎಸೆತದಲ್ಲಿ ಉರುಳಿತು. 14 ರನ್ ಗಳಿಸಿದ ಓಪನರ್ ಶಿಖರ್ ಧವನ್ ಸೌದಿ ಬೌಲಿಂಗ್ ನಲ್ಲಿ ಕೇನ್ ವಿಲಿಯಮ್ಸನ್ ಗೆ ಕ್ಯಾಚ್ ನೀಡಿ ಔಟಾದರು.
Advertisement
ಈ ಪಂದ್ಯದಲ್ಲಿ 71 ರನ್ ಗಳಿಸುತ್ತಿದ್ದಂತೆಯೇ 2017ರಲ್ಲಿ 1 ಸಾವಿರ ರನ್ ಗಳಿಸಿದ ದಾಖಲೆಯೂ ರೋಹಿತ್ ಶರ್ಮಾ ಪಾಲಾಯಿತು. ವಿರಾಟ್ ಕೊಹ್ಲಿ ಕೂಡಾ ಈ ವರ್ಷ 1000 ರನ್ ಗಡಿ ದಾಟಿದ್ದಾರೆ. ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ 9 ಪಂದ್ಯಗಳನ್ನು ಗೆದ್ದಿದ್ದು, 4 ಪಂದ್ಯಗಳಲ್ಲಿ ಸೋತಿದೆ.
Advertisement
10 overs to go and India are 252/1, the partnership between @ImRo45 and @imVkohli worth 223 runs. What total will they reach? #INDvNZ pic.twitter.com/KoKI3BkqQs
— ICC (@ICC) October 29, 2017
He's taken just 194 innings to reach 9,000 runs – 11 innings quicker than the next fastest, @ABdeVilliers17 in 205! #howzstat #INDvNZ pic.twitter.com/uQpXlaUZsI
— ICC (@ICC) October 29, 2017
9,000 ODI runs for @imVkohli! ???? He's the fastest player to reach the milestone! Congratulations! #INDvNZ pic.twitter.com/6tbKtNwDO2
— ICC (@ICC) October 29, 2017
9000 ODI runs for the Skipper #INDvNZ pic.twitter.com/36SGtHAHZb
— BCCI (@BCCI) October 29, 2017
A combination of elegance, timing and placement for Hitman as he brings up his 15th ODI Century #INDvNZ @ImRo45 pic.twitter.com/ezqxD8CmSQ
— BCCI (@BCCI) October 29, 2017
100 runs partnership off 106 balls in the decider match- @ImRo45 & @imVkohli #INDvNZ pic.twitter.com/MB3lEZDflQ
— BCCI (@BCCI) October 29, 2017
FIFTY for the Vice-Captain @ImRo45 #INDvNZ pic.twitter.com/mb7qnGlPZ0
— BCCI (@BCCI) October 29, 2017
Tim Southee said he was excited, not nervous as they search for a first ODI series win in India #INDvNZhttps://t.co/cOlwnTCcn9 pic.twitter.com/58CVtd7KaG
— ICC (@ICC) October 29, 2017
WATCH a nonchalant pull for six from @ImRo45 got @imVkohli awestruck. https://t.co/HUgWJa18wv #INDvNZ pic.twitter.com/jQJWQBawMp
— BCCI (@BCCI) October 29, 2017
#TeamIndia go in as an unchanged side for the final ODI #INDvNZ pic.twitter.com/NX0mIZKQXj
— BCCI (@BCCI) October 29, 2017
New Zealand wins the toss. Elects to bowl first in the 3rd and final ODI #INDvNZ pic.twitter.com/fmwuOUvjKM
— BCCI (@BCCI) October 29, 2017