– ಕಿವೀಸ್ ನೆಲದಲ್ಲಿ ಇತಿಹಾಸ ಮರುಕಳಿಸಿದ ಕನ್ನಡಿಗ
ವೆಲ್ಲಿಂಗ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಕ್ರಿಕೆಟ್‍ನ ಎಲ್ಲಾ ಮಾದರಿ ಟೆಸ್ಟ್, ಏಕದಿನ ಮತ್ತು ಟಿ20 ಸೇರಿ ಕಳೆದ 19 ಇನ್ನಿಂಗ್ಸ್ ಗಳಲ್ಲಿ ವಿರಾಟ್ ಒಂದೇ ಒಂದು ಶತಕ ಸಿಡಿಸಿಲ್ಲ.
ವೆಲ್ಲಿಂಗ್ಟನ್‍ನಲ್ಲಿ ಶುಕ್ರವಾರ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 7 ಎಸೆತಗಳನ್ನು ಎದುರಿಸಿ 2 ರನ್‍ಗಳಿಗೆ ವಿಕೆಟ್ ಒಪ್ಪಿಸಿದರು. ಕಳೆದ ವರ್ಷ ನವೆಂಬರ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಕೋಲ್ಕತಾ ಟೆಸ್ಟ್‍ನಲ್ಲಿ ಕೊಹ್ಲಿ ತಮ್ಮ ಕೊನೆಯ ಶತಕವನ್ನು ಗಳಿಸಿದ್ದರು. ಅಂದ್ರೆ 91 ದಿನಗಳ ಹಿಂದೆ ನಡೆದ ಈ ಪಂದ್ಯದಲ್ಲಿ ಅವರು 136 ರನ್ ದಾಖಲಿಸಿದ್ದರು.
Advertisement
https://twitter.com/imtheguy007/status/1230862746503274497
Advertisement
ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಏಕದಿನ ಮತ್ತು ಟಿ20 7 ಪಂದ್ಯಗಳಲ್ಲಿ ಕೇವಲ 180 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ ಒಂದು ಅರ್ಧಶತಕ ಸೇರಿದೆ. ಟಿ20 ಯ 4 ಪಂದ್ಯಗಳಲ್ಲಿ ವಿರಾಟ್ 125 ರನ್ ಹಾಗೂ 3 ಏಕದಿನ ಪಂದ್ಯಗಳಲ್ಲಿ 75 ರನ್ ಗಳಿಸಿದ್ದಾರೆ. ಕೊಹ್ಲಿ ಕಳಪೆ ಫಾರ್ಮ್ ನೊಂದಿಗೆ ಹೋರಾಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ 2014ರ ಫೆಬ್ರವರಿ ಹಾಗೂ 2014ರ ಅಕ್ಟೋಬರ್ ಮಧ್ಯೆ ವಿರಾಟ್ ಮೂರು ಮಾದರಿಯ ಕ್ರಿಕೆಟ್‍ನಲ್ಲಿ 25 ಇನ್ನಿಂಗ್ಸ್ ಆಡಿ ಒಂದೇ ಒಂದು ಶತಕ ಗಳಿಸಿರಲಿಲ್ಲ. ಇದರಲ್ಲಿ ಇಂಗ್ಲೆಂಡ್ ಪ್ರವಾಸವೂ ಸೇರಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ 5 ಟೆಸ್ಟ್ ಪಂದ್ಯಗಳಲ್ಲಿ ಕೇವಲ 134 ರನ್ ಗಳಿಸಿದ್ದರು.
Advertisement
Advertisement
2011ರಲ್ಲಿಯೂ ಕಳಪೆ ಪ್ರದರ್ಶನ:
ವಿರಾಟ್ ಕೊಹ್ಲಿ 2011ರ ಫೆಬ್ರವರಿ ಹಾಗೂ ಸೆಪ್ಟೆಂಬರ್ ನಡುವೆಯೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ವೇಳೆ ಅವರು ಸತತ 24 ಇನ್ನಿಂಗ್ಸ್ ಆಡಿ ಒಂದೇ ಒಂದು ಶತಕವನ್ನು ಗಳಿಸಲಿಲ್ಲ. ಕೊಹ್ಲಿ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಇದುವರೆಗೆ 70 ಶತಕಗಳನ್ನು ಗಳಿಸಿದ್ದಾರೆ. 84 ಟೆಸ್ಟ್ ಪಂದ್ಯಗಳಲ್ಲಿ 27 ಶತಕ ಹಾಗೂ 248 ಏಕದಿನ ಪಂದ್ಯಗಳಲ್ಲಿ 43 ಶತಕಗಳನ್ನು ಗಳಿಸಿದ್ದಾರೆ. ಆದರೆ ಈವರೆಗೂ ಅವರು ಟಿ20 ಕ್ರಿಕೆಟ್‍ನಲ್ಲಿ ಶತಕದ ಖಾತೆ ತೆರೆದಿಲ್ಲ.
ಮಯಾಂಕ್ ಸಾಧನೆ:
ನ್ಯೂಜಿಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯವೊಂದರ ಮೊದಲ ಅವಧಿಯಲ್ಲಿ ಔಟಾಗದೇ ಉಳಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಕನ್ನಡಿಗ ಮಯಾಂಕ್ ಭಾಜನವಾಗಿದ್ದಾರೆ.
ವೆಲ್ಲಿಂಗ್ಟನ್‍ನ ಬಾಸಿನ್ ರಿಸರ್ವ್ ಮೈದಾನದಲ್ಲಿರುವ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬ್ಯಾಟ್ಸ್‌ಮನ್‍ಗಳು ರನ್ ಗಳಿಸಲು ಪರದಾಡಿದರು. ಆದರೆ ವಿಕೆಟ್ ಕಾಯ್ದುಕೊಂಡು ಮಯಾಂಕ್ ಅವಧಿಯಲ್ಲಿ ಔಟಾಗದೇ ಉಳಿದರು. ಈ ಸಾಧನೆಯನ್ನು 30 ವರ್ಷಗಳ ಹಿಂದೆ ಅಂದ್ರೆ 1990ರಲ್ಲಿ ಆಲ್‍ರೌಂಡರ್ ಮನೋಜ್ ಪ್ರಭಾಕರ್ ನ್ಯೂಜಿಲೆಂಡ್ ವಿರುದ್ಧ ನೇಪಿಯರ್ ಟೆಸ್ಟ್ ಪಂದ್ಯದಲ್ಲಿ ಇದೇ ಸಾಧನೆ ಮಾಡಿದ್ದರು.
ಊಟದ ವಿರಾಮದ ವೇಳೆಗೆ ಮಯಾಂಕ್ ಅಜೇಯ 29 ರನ್ ಗಳಿಸಿದ್ದರು. ಆದರೆ ಭೋಜನ ವಿರಾಮದ ಬಳಿಕ ಮಯಾಂಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಮಯಾಂಕ್ 34 ರನ್ (84 ಎಸೆತ, ಐದು ಬೌಂಡರಿ) ಗಳಿಸಿದರು. ಈ ಮೂಲಕ ಭಾರತ ಮೊದಲ ದಿನದ ಆಟದ ಅಂತ್ಯಕ್ಕೆ 55 ಓವರ್ ಗಳಲ್ಲಿ 5 ವಿಕೆಟ್ ನಷ್ಟದಿಂದ 122 ರನ್ ಪೇರಿಸಿದೆ.
India lose two wickets in the second session on Day 1 of the 1st Test.
Rahane (38*) and Pant (10*) keep the scoreboard ticking at Tea.
Scorecard – https://t.co/tW3NpQIHJT #NZvIND pic.twitter.com/MqsjeBJ6Dq
— BCCI (@BCCI) February 21, 2020