CricketLatestMain PostSports

ನ್ಯೂಜಿಲೆಂಡ್‍ಗೆ 284 ರನ್ ಟಾರ್ಗೆಟ್ ನೀಡಿದ ಭಾರತ – ರೋಚಕ ಘಟ್ಟ ತಲುಪಿದ ಮೊದಲ ಟೆಸ್ಟ್

ಲಕ್ನೋ: ಸೆಕೆಂಡ್ ಇನ್ನಿಂಗ್ಸ್​ನಲ್ಲಿ 234 ರನ್‍ಗಳಿಗೆ ಡಿಕ್ಲೇರ್ ಮಾಡಿಕೊಂಡ ಟೀಂ ಇಂಡಿಯಾ 283 ರನ್‍ಗಳ ಮುನ್ನಡೆಯೊಂದಿಗೆ ನ್ಯೂಜಿಲೆಂಡ್‍ಗೆ 284 ರನ್‍ಗಳ ಟಾರ್ಗೆಟ್ ನೀಡಿದೆ. ಇದರೊಂದಿಗೆ ಮೊದಲ ಟೆಸ್ಟ್​ನ 5ನೇ ದಿನದಾಟದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

63 ರನ್‍ಗಳ ಮುನ್ನಡೆಯೊಂದಿಗೆ 4ನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಚೇತೇಶ್ವರ ಪೂಜಾರ 22 ರನ್ (33 ಎಸೆತ, 3 ಬೌಂಡರಿ) ಸಿಡಿಸಿ ಔಟ್ ಆದರೆ. ಇವರ ಹಿಂದೆ ನಾಯಕ ಅಜಿಂಕ್ಯಾ ರಹಾನೆ 4 ರನ್ (15 ಎಸೆತ, 1 ಬೌಂಡರಿ), ಮಯಾಂಕ್ ಅರ್ಗವಾಲ್ 17 ರನ್ (53 ಎಸೆತ, 3 ಬೌಂಡರಿ) ಮತ್ತು ರವೀಂದ್ರ ಜಡೇಜಾ ಶೂನ್ಯಕ್ಕೆ ಔಟ್ ಆದರು. ಒಂದು ಹಂತದಲ್ಲಿ 51 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಕ್ಕೆ ಪ್ರಥಮ ಇನ್ನಿಂಗ್ಸ್​ನ ಹೀರೋ ಶ್ರೇಯಸ್ ಅಯ್ಯರ್ ಮತ್ತೊಮ್ಮೆ ಆಸರೆಯಾದರು. ಇದನ್ನೂ ಓದಿ: ರಶೀದ್ ಖಾನ್ ಬೇಡಿಕೆ ಕಂಡು ದಂಗಾದ ಹೈದರಾಬಾದ್ ಫ್ರಾಂಚೈಸ್

ಶ್ರೇಯಸ್ ಅಯ್ಯರ್ ಮತ್ತು ಅಶ್ವಿನ್ ಕುಸಿದ ಭಾರತಕ್ಕೆ ಶಕ್ತಿ ತುಂಬಿದರು. ಈ ಜೋಡಿ 6ನೇ ವಿಕೆಟ್‍ಗೆ 52 ರನ್ (118 ಎಸೆತ) ಜೊತೆಯಾಟವಾಡಿತು. ಈ ವೇಳೆ ದಾಳಿಗಿಳಿದ ಜೇಮಿಸನ್, ಅಶ್ವಿನ್ 32 ರನ್ (62 ಎಸೆತ, 5 ಬೌಂಡರಿ) ವಿಕೆಟ್ ಕಿತ್ತರು. ಆ ಬಳಿಕ ಒಂದಾದ ಶ್ರೇಯಸ್ ಮತ್ತು ವೃದ್ಧಿಮಾನ ಸಹಾ ಮತ್ತೊಂದು ಉತ್ತಮವಾದ ಜೊತೆಯಾಟವಾಡಿದರು. ಈ ಜೋಡಿ 7ನೇ ವಿಕೆಟ್‍ಗೆ 64 ರನ್ (126 ಎಸೆತ) ಜೊತೆಯಾಟವಾಡಿ ತಂಡದ ಮೊತ್ತ 200 ಗಡಿ ದಾಟುವಂತೆ ನೋಡಿಕೊಂಡರು. ಅರ್ಧಶತಕವಾಡಿ ಮುನ್ನುಗ್ಗುತ್ತಿದ್ದ ಶ್ರೇಯಸ್ ಅಯ್ಯರ್ 65 ರನ್ (125 ಎಸೆತ, 8 ಬೌಂಡರಿ, 1 ಸಿಕ್ಸ್) ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್

ಕಳೆದ ಪಂದ್ಯದಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡಿದ್ದ ವೃದ್ಧಿಮಾನ್ ಸಹಾ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಎಚ್ಚರಿಕೆಯ ಆಟವಾಡಿದರು. 8ನೇ ವಿಕೆಟ್‍ಗೆ ಅಕ್ಷರ್ ಪಟೇಲ್ ಜೊತೆ ಮುರಿಯದ 67 ರನ್ (124 ಎಸೆತ) ಜೊತೆಯಾಟವಾಡಿದ ಸಹಾ, ಭರ್ಜರಿ ಅರ್ಧಶತಕ 61 ರನ್ (126 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅಕ್ಷರ್ ಪಟೇಲ್ ಅಜೇಯ 28 ರನ್ (67 ಎಸೆತ, 2 ಬೌಂಡರಿ, 1 ಸಿಕ್ಸ್) ಕಾಣಿಕೆ ನೀಡಿದರು. 81 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್‍ಗಳಿಸಿದ್ದಾಗ ರಹಾನೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಈ ಮೂಲಕ ಭಾರತ 283 ರನ್‍ಗಳ ಮುನ್ನಡೆಯೊಂದಿಗೆ ನ್ಯೂಜಿಲೆಂಡ್‍ಗೆ 284 ರನ್ ಟಾರ್ಗೆಟ್ ನೀಡಿತು. ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜಿಗೆ ಮುನ್ನ 8 ತಂಡಗಳು ಈ ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧಾರ?

ನ್ಯೂಜಿಲೆಂಡ್ ಪರ ಕೈಲ್ ಜೇಮಿಸನ್ ಮತ್ತು ಟಿಮ್ ಸೌಥಿ ತಲಾ 3 ವಿಕೆಟ್ ಪಡೆದರು. ಏಜಾಜ್ ಪಟೇಲ್ 1 ವಿಕೆಟ್ ಕಿತ್ತರು.

ಭಾರತ ನೀಡಿದ 284 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಸೆಕೆಂಡ್ ಇನ್ನಿಂಗ್ಸ್ ಆರಂಭದಲ್ಲೇ ಆರಂಭಿಕ ಆಟಗಾರ ವಿಲ್ ಯಂಗ್ 2 ರನ್ (6 ಎಸೆತ) ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದೆ. ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್ ತಂಡ 1 ವಿಕೆಟ್ ಕಳೆದುಕೊಂಡು 4 ರನ್ ಗಳಿಸಿದೆ. ಟ್ಯಾಮ್ ಲ್ಯಾಥಮ್ ಅಜೇಯ 2 ರನ್ ಮತ್ತು ವಿಲಿಯಂ ಸೊಮರ್ವಿಲ್ಲೆ ಕಾತೆ ತೆರೆಯದೆ 5ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಗೆಲ್ಲಲೂ ಇನ್ನೂ 280 ರನ್ ಹಿನ್ನಡೆಯಲ್ಲಿದೆ. ಹಾಗಾಗಿ 5ನೇ ದಿನದಾಟದಲ್ಲಿ ಸ್ಪಷ್ಟ ಫಲಿತಾಂಶ ಬರುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *

Back to top button