ಲಕ್ನೋ: 2ನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 129 ರನ್ ಗಳಿಸಿದ್ದ ನ್ಯೂಜಿಲೆಂಡ್ ತಂಡ ಮೂರನೇ ದಿನದಾಟದಲ್ಲಿ ಭಾರತದ ಬೌಲರ್‌ಗಳಾದ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಸ್ಪಿನ್ ಮೋಡಿಗೆ ತಲೆಬಾಗಿ ಹಿನ್ನಡೆ ಅನುಭವಿಸಿದೆ.
2ನೇ ದಿನದಾಟದಲ್ಲಿ ಗಳಿಸಿದ್ದ 129 ರನ್‍ಗಳಿಂದ 3ನೇ ದಿನ ಬ್ಯಾಟಿಂಗ್ ಮುಂದುವರಿಸಿದ ನ್ಯೂಜಿಲೆಂಡ್ ತಂಡದ ಆರಂಭಿಕ ಜೋಡಿ ಟ್ಯಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ತಂಡದ ಮೊತ್ತ 151 ರನ್ ಆಗುವಷ್ಟರಲ್ಲಿ ವಿಲ್ ಯಂಗ್ 89 ರನ್ (214 ಎಸೆತ, 15 ಬೌಂಡರಿ) ಗಳಿಸಿದ್ದಾಗ ಅಶ್ವಿನ್ ಮೊದಲ ವಿಕೆಟ್ ಕಿತ್ತು ಮಿಂಚಿದರು. ಇವರ ಬೆನ್ನಹಿಂದೆ ಟ್ಯಾಮ್ ಲ್ಯಾಥಮ್ 95 ರನ್ (282 ಎಸೆತ, 10 ಬೌಂಡರಿ) ಸಿಡಿಸಿ ಅಕ್ಷರ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು. ನಂತರ ನ್ಯೂಜಿಲೆಂಡ್ ತಂಡದ ಕುಸಿತ ಆರಂಭಗೊಂಡಿತು. ಕೇನ್ ವಿಲಿಯಮ್ಸನ್ 18 ರನ್ (64 ಎಸೆತ, 2 ಬೌಂಡರಿ), ರಾಸ್ ಟೇಲರ್ 11 ರನ್ (28 ಎಸೆತ, 1 ಬೌಂಡರಿ) ಹೆನ್ರಿ ನಿಕೋಲ್ಸ್ 2 ರನ್ ಮಾಡಿ ವಿಕೆಟ್ ಕೊಟ್ಟು ಪೆವಿಲಿಯನ್ ಸೇರಿಕೊಂಡರು. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್
Advertisement
Advertisement
ಆ ಬಳಿಕ ಬಂದ ಟಾಮ್ ಬ್ಲಂಡೆಲ್ 13 ರನ್ (94 ಎಸೆತ) ಮತ್ತು ರಚಿನ್ ರವೀಂದ್ರ 13 ರನ್ (23 ಎಸೆತ) ರನ್ ಮಾಡಿ ಭಾರತದ ಸ್ಪಿನ್ನರ್‌ಗಳ ದಾಳಿಗೆ ಸುಸ್ತಾದರು. ಕೈಲ್ ಜೇಮಿಸನ್ ಸ್ವಲ್ಪ ಹೊತ್ತು ಭಾರತ ಬೌಲರ್‌ಗಳನ್ನು ಕಾಡಿದರೂ ಕೂಡ ದೊಡ್ಡ ಮೊತ್ತ ಕಲೆಹಾಕಲು ಅಶ್ವಿನ್ ಬಿಡಲಿಲ್ಲ. ಜೇಮಿಸನ್ 23 ರನ್ (75 ಎಸೆತ, 1 ಬೌಂಡರಿ) ಬಾರಿಸಿ ಔಟ್ ಆದರು. ನಂತರ ಟಿಮ್ ಸೌಥಿ 5 ರನ್, ವಿಲಿಯಂ ಸೊಮರ್ವಿಲ್ಲೆ 6 ರನ್ ಮಾಡಿ ವಿಕೆಟ್ ಒಪ್ಪಿಸಿದರು. ನ್ಯೂಜಿಲೆಂಡ್ ತಂಡ 142.3 ಓವರ್‌ಗಳಲ್ಲಿ 296 ರನ್‍ಗಳಿಗೆ ಆಲ್‍ಔಟ್ ಆಯಿತು. ಏಜಾಜ್ ಪಟೇಲ್ 5 ರನ್ ಸಿಡಿಸಿ ಅಜೇಯರಾಗಿ ಉಳಿದರು. ಈ ಮೂಲಕ ನ್ಯೂಜಿಲೆಂಡ್ ತಂಡ 45 ರನ್‍ಗಳ ಹಿನ್ನಡೆ ಪಡೆದುಕೊಂಡಿತು. ಇದನ್ನೂ ಓದಿ: 4 ವರ್ಷದಿಂದಲೂ ಒಂದೇ ವಾಟ್ಸಪ್ ಡಿಪಿ – ಶ್ರೇಯಸ್ ಅಯ್ಯರ್ ತಂದೆಯ ಕನಸು ಕೊನೆಗೂ ನನಸು
Advertisement
Advertisement
ಭಾರತದ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಅಕ್ಷರ್ ಪಟೇಲ್ 5 ವಿಕೆಟ್ ಕಿತ್ತು ಸಂಭ್ರಮಿಸಿದರೆ, ಅಶ್ವಿನ್ 3 ವಿಕೆಟ್ ಪಡೆದರು. ಉಳಿದಂತೆ ರವೀಂದ್ರ ಜಡೇಜಾ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಕಿತ್ತರು. ಇದನ್ನೂ ಓದಿ: ಐಪಿಎಲ್‍ನಲ್ಲಿ ಧೋನಿ CSK ಪರ ಆಡುವುದು ಕನ್ಫರ್ಮ್ – ರೈನಾ ಡೌಟ್?
49 ರನ್‍ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಆರಂಭಿಕ ಆಟಗಾರ ಶುಭಮನ್ ಗಿಲ್ 1 ರನ್‍ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 3ನೇ ದಿನದಾಟದ ಅಂತ್ಯಕ್ಕೆ ಮಯಾಂಕ್ ಅಗರ್ವಾಲ್ ಅಜೇಯ 4 ರನ್ (13 ಎಸೆತ) ಮತ್ತು ಚೇತೇಶ್ವರ ಪೂಜಾರ 9 ರನ್ (14 ಎಸೆತ, 2 ಬೌಂಡರಿ) ಸಿಡಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ತಂಡ ಒಟ್ಟು 63 ರನ್‌ಗಳ ಮುನ್ನಡೆಯಲ್ಲಿದೆ. ಈ ಮೂಲಕ ಮೊದಲನೇ ಟೆಸ್ಟ್ ಕುತೂಹಲ ಮೂಡಿಸಿದೆ.