Connect with us

Cricket

53 ರನ್‍ಗಳ ಗೆಲುವು: ನ್ಯೂಜಿಲೆಂಡ್ ಗೆಲುವಿನ ಓಟಕ್ಕೆ ಬಿತ್ತು ಬ್ರೇಕ್

Published

on

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಭಾರತ 53 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

203 ರನ್ ಗಳ ಗುರಿಯನ್ನು ಪಡೆದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಈ ಮೂಲಕ ಭಾರತ ಮೊದಲ ಬಾರಿಗೆ ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯವನ್ನು ಗೆದ್ದುಕೊಂಡಿದೆ. ಉಭಯ ತಂಡಗಳ ಮಧ್ಯೆ ಈ ಪಂದ್ಯಕ್ಕೂ ಮುನ್ನ 5 ಟಿ-20 ಪಂದ್ಯಗಳು ನಡೆದಿತ್ತು. ಎಲ್ಲ ಮ್ಯಾಚ್ ನಲ್ಲಿ ಕಿವೀಸ್ ಗೆದ್ದುಕೊಂಡಿತ್ತು.

ನಾಯಕ ಕೇನ್ ವಿಲಿಯಮ್ಸ್ 28 ರನ್, ಟಾಮ್ ಲಥಾಮ್ 39 ರನ್, ಮೈಕಲ್ ಸ್ಯಾಂಟ್ನರ್ ಔಟಾಗದೇ 27 ರನ್ ಹೊಡೆಯುವ ಮೂಲಕ ಸ್ವಲ್ಪ ಪ್ರತಿರೋಧ ತೋರಿದರು.

ಭಾರತದ ಪರ ಚಹಲ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್, ಬುಮ್ರಾ, ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಭಾರತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು.

37 ಎಸೆತದಲ್ಲಿ 50 ರನ್ ಹೊಡೆದ ಶಿಖರ್ ಧವನ್ 80 ರನ್(52 ಎಸೆತ, 10 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು. ನಂತರ ಬಂದ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾದರು. 42 ಎಸೆತದಲ್ಲಿ ಅರ್ಧಶತಕ ಹೊಡೆದ ರೋಹಿತ್ ಶರ್ಮಾ 80 ರನ್(55 ಎಸೆತ, 6 ಬೌಂಡರಿ, 4 ಸಿಕ್ಸರ್) ಗಳಿಸಿದಾಗ ಔಟಾದರು. ಕೊನೆಯಲ್ಲಿ ಕೊಹ್ಲಿ ಮತ್ತು ಧೋನಿ ಬಿರುಸಿನ ಆಟವಾಡಿ ತಂಡದ ಮೊತ್ತವನ್ನು 200 ರನ್ ಗಡಿ ದಾಟಿಸಿದರು. ಕೊಹ್ಲಿ ಔಟಾಗದೇ 26 ರನ್(11 ಎಸೆತ, 3 ಬೌಂಡರಿ) ಧೋನಿ ಔಟಾಗದೇ 7 ರನ್(2 ಎಸೆತ, 1 ಸಿಕ್ಸರ್) ಹೊಡೆದರು.

ಟ್ರೆಂಟ್ ಬೌಲ್ಟ್ 4 ಓವರ್ ಎಸೆದು, 49 ರನ್ ನೀಡಿದರೆ, ಟಿಮ್ ಸೌಥಿ 44 ರನ್ ನೀಡಿದರು. ಇತರೆ ರೂಪದಲ್ಲಿ ಭಾರತಕ್ಕೆ 9 ರನ್ ಬಂದಿತ್ತು.

ದಾಖಲೆಯ ಜೊತೆಯಾಟ: ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 98 ಎಸೆತಗಳಲ್ಲಿ 158 ರನ್ ಜೊತೆಯಾಟ ಮಾಡುವ ಮೂಲಕ ಭಾರತದ ಪರ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದರಲ್ಲಿ ಧವನ್ 80 ರನ್ ಹೊಡೆದಿದ್ದರೆ ರೋಹಿತ್ ಶರ್ಮ 70 ರನ್ ಹೊಡೆದರು. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 138 ರನ್ ಜೊತೆಯಾಟ ಮಾಡಿದ್ದರು.

ಭಾರತದ ರನ್ ಏರಿದ್ದು ಹೀಗೆ:
50 ರನ್ – 6.4 ಓವರ್
100 ರನ್ – 11.6 ಓವರ್
150 ರನ್ – 15.3 ಓವರ್
200 ರನ್ – 19.5 ಓವರ್

Click to comment

Leave a Reply

Your email address will not be published. Required fields are marked *