ಬೆಂಗಳೂರು: ತವರು ನೆಲದಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಸರಣಿ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾಗೆ ಈ ವರ್ಷದಲ್ಲಿ ಮೊದಲ ವಿದೇಶಿ ಪ್ರವಾಸ ಕೈಗೊಂಡಿದೆ. ನ್ಯೂಜಿಲೆಂಡ್ ನೆಲದಲ್ಲಿ ಕಿವೀಸ್ ವಿರುದ್ಧ ಶುಕ್ರವಾರದಿಂದ ವಿರಾಟ್ ಕೊಹ್ಲಿ ಪಡೆಯು 5 ಟಿ20 ಪಂದ್ಯಗಳ ಸರಣಿ ಆಡಲಿದ್ದು, ಗೆಲುವಿನ ಓಟವನ್ನು ಮುಂದುವರಿಸುವ ಭರವಸೆ ಮೂಡಿಸಿದೆ.
ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯವು ಆಕ್ಲೈಂಡ್ ಈಡನ್ ಪಾರ್ಕ್ ನಲ್ಲಿ ಶುಕ್ರವಾರ ಮಧ್ಯಾಹ್ನ 12:30ಕ್ಕೆ ನಡೆಯಲಿದೆ. ಟೀಂ ಇಂಡಿಯಾದ ಬಹುತೇಕ ಆಟಗಾರರು ಫಾರ್ಮ್ ನಲ್ಲಿದ್ದು, ವಿದೇಶಿ ನೆಲದಲ್ಲೂ ಅದ್ಭುತ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
Advertisement
Advertisement
ಆರಂಭಿಕನಾಗಿ ರಾಹುಲ್ ಮೈದಾನಕ್ಕೆ:
ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರಿಗೆ ಗಾಯವಾಗಿರುವುದರಿಂದ ಅವರನ್ನು ನ್ಯೂಜಿಲೆಂಡ್ ಪ್ರವಾಸದಿಂದ ಕೈಬಿಡಲಾಗಿದೆ. ಹೀಗಾಗಿ ಕನ್ನಡಿಗ ಕೆ.ಎಲ್.ರಾಹುಲ್ ಅವರು ಅನುಭವಿ ಆಟಗಾರ ರೋಹಿತ್ ಶರ್ಮಾ ಜೊತೆ ಆರಂಭಿಕ ಆಟಗಾರನಾಗಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಉಳಿದಂತೆ ನಾಯಕ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂಥ್ ಬ್ಯಾಟಿಂಗ್ ಬಲ ತುಂಬಲಿದ್ದಾರೆ. ಸ್ಪಿನ್ನರ್ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂಟ್, ಶಿವಂ ದುಬೆ ಅಲೌಂಡರ್ ಸ್ಥಾನ ತುಂಬಲಿದ್ದಾರೆ. ಜಸ್‍ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ನವದೀಪ್ ಸೈನಿ ಬೌಲಿಂಗ್ ಪಡೆಯಲ್ಲಿದ್ದಾರೆ.
Advertisement
ತವರು ನೆಲದಲ್ಲಿ ಟೀಂ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ವಿಲಿಯಮ್ಸನ್ ಪಡೆ ಸಿದ್ಧವಾಗಿದೆ. ಯುವಕರ ತಂಡದೊಂದಿಗೆ ಕೊಹ್ಲಿ ಬಾಯ್ಸ್ ಎದುರಿದುವುದಕ್ಕೆ ನ್ಯೂಜಿಲೆಂಡ್ ಸಿದ್ಧವಾಗಿದೆ. ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೊ, ಕೇನ್ ವಿಲಿಯಮ್ಸನ್, ರಾಸ್ ಟೈಲರ್ ನ್ಯೂಜಿಲೆಂಡ್ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಡ್ಯಾರಿಲ್ ಮಿಚೆಲ್, ಸಾಂಟ್ನರ್ ಅಲ್ರೌಂಡರ್ ಸ್ಥಾನ ತುಂಬಲಿದ್ದಾರೆ. ಟೀಂ ಸೌಥಿ, ಇಶಾ ಸೋದಿ, ಬ್ಲೇರ್ ಟೆಕ್ನರ್, ಸ್ಕಾಟ್ ಕುಗ್ಗೆಲೀಜ್ನ್, ಹಮೀಶ್ ಬೆನೆಟ್ ಬೌಲಿಂಗ್ ಪಡೆಯಲ್ಲಿದ್ದಾರೆ.
Advertisement
Can't help but Love the Kiwis ???????????????? #TeamIndia #NZvIND pic.twitter.com/9Qc3k35v5L
— BCCI (@BCCI) January 23, 2020
ತಂಡಗಳ ವಿವರ
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶಾರ್ಮಾ, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್‍ಪ್ರೀತ್ ಬೂಮ್ರಾ, ಯಜುವೇಂದ್ರ ಚಹಲ್, ಸಂಜು ಸಾಮ್ಸನ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಿವಂ ದುಬೆ, ಕುಲದೀಪ್ ಯಾದವ್.
ನ್ಯೂಜಿಲ್ಯಾಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೋ, ಟೀ ಸೈಫರ್ಟ್, ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಡ್ರಾಲ್ ಮಿಚೆಲ್, ಮಿಚೆಲ್ ಸಾಂಟ್ನರ್, ಟೀ ಸೌಥಿ, ಇಶಾ ಸೋಧಿ, ಬ್ಲೇರ್ ಟೆಕ್ನರ್, ಸ್ಕಾಟ್ ಕುಗ್ಗೆಲೀಜ್ನ್, ಹಮೀಶ್ ಬೆನೆಟ್.
Getting your keeping gloves ready @klrahul11? ???????????????? #TeamIndia #NZvIND ???????????????? pic.twitter.com/g3EnlmdsWV
— BCCI (@BCCI) January 23, 2020