ಹೈದರಾಬಾದ್: ನ್ಯೂಜಿಲೆಂಡ್ (New Zealand) ಮತ್ತು ಭಾರತ (India) ನಡುವಿನ ಮೊದಲ ಏಕದಿನ ಪಂದ್ಯದಲ್ಲಿ (ODI) ಕಿವೀಸ್ ಬ್ಯಾಟ್ಸ್‌ಮ್ಯಾನ್ ಮೈಕೆಲ್ ಬ್ರೇಸ್ವೆಲ್ ಅಬ್ಬರದ ಬ್ಯಾಟಿಂಗ್ ಹೋರಾಟದ ನಡುವೆಯೂ ಭಾರತ 12 ರನ್‍ಗಳ ಜಯ ಸಾಧಿಸಿದೆ.
Advertisement
ಭಾರತ ನೀಡಿದ 350 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಪರ ಬ್ರೇಸ್ವೆಲ್ ಏಕಾಂಗಿ ಹೋರಾಟ ನಡೆಸಿದರು. ಭಾರತದ ಬೌಲರ್‌ಗಳ ದಾಳಿಯನ್ನು ಪುಡಿಗಟ್ಟಿದ ಬ್ರೇಸ್ವೆಲ್ 140 ರನ್ (78 ಎಸೆತ, 12 ಬೌಂಡರಿ, 10 ಸಿಕ್ಸ್) ಸಿಡಿಸಿ ಅಂತಿಮ ವಿಕೆಟ್ ರೂಪದಲ್ಲಿ ವಿಕೆಟ್ ಕೈಚೆಲ್ಲಿಕೊಂಡರು. ಇದರೊಂದಿಗೆ ನ್ಯೂಜಿಲೆಂಡ್ 49.2 ಓವರ್‌ಗಳಲ್ಲಿ 337 ರನ್‍ಗಳಿಗೆ ಆಲೌಟ್ ಆಯಿತು. ಇತ್ತ ಭಾರತ 12 ರನ್‍ಗಳ ಜಯ ಸಾಧಿಸಿತು. ಈ ಜಯದೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ.
Advertisement
Advertisement
ಭಾರತ ನೀಡಿದ ಕಠಿಣ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‍ಗೆ ಆರಂಭಿಕ ಆಟಗಾರ ಫಿನ್ ಅಲೆನ್ 40 ರನ್ (39 ಎಸೆತ, 7 ಬೌಂಡರಿ, 1 ಸಿಕ್ಸ್) ಚಚ್ಚಿ ಉತ್ತಮ ಆರಂಭ ನೀಡಿದರು. ಆ ಬಳಿಕ ವಿಕೆಟ್ ಕಳೆದುಕೊಂಡು ಸಾಗಿದ ನ್ಯೂಜಿಲೆಂಡ್‍ಗೆ ನೆರವಾಗಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳಾದ ಮೈಕೆಲ್ ಬ್ರೇಸ್ವೆಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಜೋಡಿ.
Advertisement
ಮೈಕೆಲ್ ಬ್ರೇಸ್ವೆಲ್, ಸ್ಯಾಂಟ್ನರ್ ಹೋರಾಟ:
7ನೇ ವಿಕೆಟ್‍ಗೆ ಒಂದಾದ ಬ್ರೇಸ್ವೆಲ್ ಮತ್ತು ಸ್ಯಾಂಟ್ನರ್ ಜೋಡಿ ಭಾರತದ ಬೌಲರ್‌ಗಳ ಬೆವರಿಳಿಸಿತು. ಬ್ರೇಸ್ವೆಲ್ ಅಂತೂ ಸಿಕ್ಸರ್‌ಗಳ ಮೇಲೆ ಸಿಕ್ಸರ್ ಸಿಡಿಸಿ ಶತಕ ಸಿಡಿಸಿ ಮೆರೆದಾಡಿದರು. ಜೊತೆಗೆ ನ್ಯೂಜಿಲೆಂಡ್‍ಗೆ ಗೆಲುವಿನ ಭರವಸೆ ಮೂಡಿಸಿದರು. ಈ ವೇಳೆ ದಾಳಿಗಿಳಿದ ಸಿರಾಜ್, 57 ರನ್ (45 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿದ್ದ ಸ್ಯಾಂಟ್ನರ್ ವಿಕೆಟ್ ಕಬಳಿಸಿದರು. ಇದರೊಂದಿಗೆ ಬ್ರೇಸ್ವೆಲ್, ಸ್ಯಾಂಟ್ನರ್ ಜೋಡಿ 7ನೇ ವಿಕೆಟ್‍ಗೆ 162 ರನ್ (102 ಎಸೆತ) ಜೊತೆಯಾಟವಾಡಿ ಬೇರ್ಪಟ್ಟಿತು.
ಆ ಬಳಿಕ ಕೂಡ ಬ್ರೇಸ್ವೆಲ್ ಅಬ್ಬರ ನಿಲ್ಲಲಿಲ್ಲ. ಗೆಲುವಿಗಾಗಿ ಕೊನೆಯ ವರೆಗೆ ಹೋರಾಡಿ ಅಂತಿಮ ಓವರ್‌ನಲ್ಲಿ 140 ರನ್ (78 ಎಸೆತ, 12 ಬೌಂಡರಿ, 10 ಸಿಕ್ಸ್) ಸಿಡಿಸಿ ಎಲ್‍ಬಿಡಬ್ಲ್ಯೂ ಆಗಿ ಔಟ್ ಆದರು. ಈ ಮೂಲಕ ನ್ಯೂಜಿಲೆಂಡ್ 49.2 ಓವರ್‌ಗಳಲ್ಲಿ 337 ರನ್‍ಗಳಿಗೆ ಆಲೌಟ್ ಆಯಿತು. ಭಾರತ ಪರ ಸಿರಾಜ್ 4 ವಿಕೆಟ್ ಕಿತ್ತು ಮಿಂಚಿದರು. ಕುಲ್‍ದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಶಮಿ, ಪಾಂಡ್ಯ ತಲಾ 1 ವಿಕೆಟ್ ಹಂಚಿಕೊಂಡರು.
ಈ ಮೊದಲು ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅವರ ನಿರ್ಧಾರದಂತೆ ಶುಭಮನ್ ಗಿಲ್ ಕೂಡ ರೋಹಿತ್‍ಗೆ ಸಾಥ್ ನೀಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 60 ರನ್ (73 ಎಸೆತ) ಸಿಡಿಸಿ ಉತ್ತಮ ಆರಂಭ ನೀಡಿತು. ರೋಹಿತ್ 34 ರನ್ (38 ಎಸೆತ, 4 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ಇದನ್ನೂ ಓದಿ: ದ್ವಿಶತಕ ಸಿಡಿಸಿ ದಿಗ್ಗಜರ ಪಟ್ಟಿಗೆ ಸೇರಿದ ಗಿಲ್ – ಭಾರತ ಪರ ಡಬಲ್ ಸೆಂಚುರಿ ಬಾರಿಸಿದ ಐವರು ಸಾಧಕರಿವರು
ಬಳಿಕ ಬಂದ ವಿರಾಟ್ ಕೊಹ್ಲಿ 8 ರನ್ (10 ಎಸೆತ, ಬೌಂಡರಿ) ಮತ್ತು ಇಶಾನ್ ಕಿಶನ್ 5 ರನ್ (14 ಎಸೆತ) ಸಿಡಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಗಿಲ್ ಘರ್ಜನೆ:
ಆದರೆ ಇತ್ತ ಆರಂಭಿಕ ಆಟಗಾರ ಗಿಲ್ ಮಾತ್ರ ಕೀವಿಸ್ ಬೌಲರ್‌ಗಳ ಕಿವಿ ಹಿಂಡಲು ಪ್ರಾರಂಭಿಸಿದರು. ಆರಂಭದಲ್ಲಿ ನಿಧಾನವಾಗಿ ಬ್ಯಾಟ್‍ಬೀಸಿದ ಗಿಲ್ ಆ ಬಳಿಕ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು. ಈ ಮೂಲಕ ಶತಕ ಸಿಡಿಸಿ ಗಿಲ್ ಆ ಬಳಿಕ ಮತ್ತಷ್ಟು ಉಗ್ರ ರೂಪ ತಾಳಿದರು. ಇವರಿಗೆ ಕೆಲಕಾಲ ಸೂರ್ಯಕುಮಾರ್ ಯಾದವ್ 31 ರನ್ (26 ಎಸೆತ, 4 ಬೌಂಡರಿ) ಮತ್ತು ಹಾರ್ದಿಕ್ ಪಾಂಡ್ಯ 28 ರನ್ (38 ಎಸೆತ, 3 ಬೌಂಡರಿ) ಸಿಡಿಸಿ ಸಾಥ್ ನೀಡಿದರು. ಇದನ್ನೂ ಓದಿ: ರಾಷ್ಟ್ರೀಯ ತರಬೇತುದಾರರಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ – ವಿನೇಶ್ ಫೋಗಟ್ ಗಂಭೀರ ಆರೋಪ
ಇತ್ತ ವಿಕೆಟ್ ಉರುಳುತ್ತಿದ್ದರೆ, ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸುರಿಸಿದ ಗಿಲ್ ನೋಡ ನೋಡುತ್ತಿದ್ದಂತೆ ಮೂರು ಬ್ಯಾಕ್ ಟು ಬ್ಯಾಕ್ ಸಿಕ್ಸ್ ಚಚ್ಚಿ ದ್ವಿಶತಕ ಪೂರೈಸಿದರು. ದ್ವಿಶತಕದ ಬಳಿಕ ಕೊನೆಯ ಓವರ್‌ನಲ್ಲಿ 208 ರನ್ (149 ಎಸೆತ, 19 ಬೌಂಡರಿ, 9 ಸಿಕ್ಸ್) ಚಚ್ಚಿ ಔಟ್ ಆದರು. ಈ ಮೂಲಕ ಏಕದಿನ ಮಾದರಿ ಕ್ರಿಕೆಟ್‍ನಲ್ಲಿ ದ್ವಿಶತಕ ಸಿಡಿಸಿದ ಯುವ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಬಾರಿಸಿತು.
ನ್ಯೂಜಿಲೆಂಡ್ ಪರ ಡೇರಿಲ್ ಮಿಚೆಲ್ ಮತ್ತು ಹೆನ್ರಿ ಶಿಪ್ಲಿ ತಲಾ 2 ವಿಕೆಟ್ ಪಡೆದರು. ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.
ರನ್ ಏರಿದ್ದು ಹೇಗೆ:
50 ರನ್ 52 ಎಸೆತ
100 ರನ್ 113 ಎಸೆತ
150 ರನ್ 147 ಎಸೆತ
200 ರನ್ 196 ಎಸೆತ
250 ರನ್ 239 ಎಸೆತ
300 ರನ್ 277 ಎಸೆತ
349 ಎಸೆತ 300 ಎಸೆತ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k