ಮುಂಬೈ: ನ್ಯೂಜಿಲೆಂಡ್ (New Zealand) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಉಪನಾಯಕ ಹಾರ್ದಿಕ್ ಪಾಂಡ್ಯ (Hardik Pandya) ವಿವಾದಾತ್ಮಕವಾಗಿ ಔಟ್ ಕುರಿತಾಗಿ ಸಾಕಷ್ಟು ಚರ್ಚೆ ಆಗುತ್ತಿದೆ. ಈ ನಡುವೆ ಈ ಔಟ್ ತೀರ್ಪಿನ ವಿರುದ್ಧ ಪಾಂಡ್ಯ ಪತ್ನಿ ನತಾಶಾ (Natasa) ಕಿಡಿಕಾರಿದ್ದಾರೆ.
Advertisement
ಹೈದಾರಾಬಾದ್‍ನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ಇನ್ನಿಂಗ್ಸ್ ವೇಳೆ 40 ಓವರ್‌ನಲ್ಲಿ ಡ್ಯಾರಿಲ್ ಮಿಚೆಲ್ ಎಸೆತವನ್ನು ಅರಿಯುವಲ್ಲಿ ವಿಫಲರಾದ ಪಾಂಡ್ಯ ಬಾಲ್ ಬಿಟ್ಟರು. ಆ ಚೆಂಡು ಸ್ಟಂಪ್‍ಗಳ ಮೇಲೆ ವಿಕೆಟ್ ಕೀಪರ್ ಕೈ ಸೇರಿತ್ತು. ಈ ವೇಳೆ ವಿಕೆಟ್ ಕೀಪರ್ ತನ್ನ ಗ್ಲೌಸ್‍ಗಳಿಂದ ಸ್ಟಂಪ್‍ಗಳ ಬೇಲ್ಸ್‌ಗೆ ತಗುಲಿಸಿದ್ದಾರೆ. ನಂತರ ಔಟ್‍ಗಾಗಿ ಮನವಿ ಸಲ್ಲಿಸಿದರು. ಕೂಡಲೇ ಮೈದಾನದ ಅಂಪೈರ್ ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಿದರು. ಆ ಬಳಿಕ ಹಲವು ಬಾರಿ ವೀಡಿಯೋ ರೀಪ್ಲೇ ನೋಡಿದ ಮೂರನೇ ಅಂಪೈರ್, ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಎಂದು ಘೋಷಿಸಿದ್ದರು. ಇದನ್ನೂ ಓದಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಶೋಷಣೆ ಆರೋಪ – WFI ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಭೂಷಣ್ ರಾಜೀನಾಮೆ ಸಾಧ್ಯತೆ
Advertisement
Advertisement
ಈ ನಿರ್ಧಾರದ ವಿರುದ್ಧ ಇದೀಗ ಸಾಕಷ್ಟು ಅಸಮಾಧಾನಗಳು ಕೇಳಿ ಬರುತ್ತಿದೆ. ಪಾಂಡ್ಯ ಔಟ್ ಇಲ್ಲದಿದ್ದರೂ ಔಟ್ ಎಂಬ ತೀರ್ಪು ನೀಡಲಾಗಿದೆ ಎಂಬ ಟೀಕೆ ಕೇಳಿ ಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪಾಂಡ್ಯ ಪತ್ನಿ ನತಾಶಾ, ಬ್ಯಾಟ್ ತಾಗದೇ ಬಾಲ್ ಕೀಪರ್ ಕೈ ಸೇರಿದೆ. ಆದರೂ ಅಂಪೈರ್ ಔಟ್ ನೀಡಿದ್ದಾರೆ. ಇದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದ್ವಿಶತಕ ಸಿಡಿಸಿ ದಿಗ್ಗಜರ ಪಟ್ಟಿಗೆ ಸೇರಿದ ಗಿಲ್ – ಭಾರತ ಪರ ಡಬಲ್ ಸೆಂಚುರಿ ಬಾರಿಸಿದ ಐವರು ಸಾಧಕರಿವರು
Advertisement
ಪಾಂಡ್ಯ ಔಟ್ ತೀರ್ಪನ ಬಳಿಕ ಈ ಬಗ್ಗೆ ವಿರೋಧಗಳು ವ್ಯಕ್ತವಾಗಿದ್ದು, ಅಂಪೈರ್ ಕಣ್ಣುಮುಚ್ಚಿಕೊಂಡು ತೀರ್ಪು ನೀಡಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಈ ಎಲ್ಲದರ ನಡುವೆ ಭಾರತ 12 ರನ್‍ಗಳ ಜಯ ಸಾಧಿಸಿ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k