ಮಿಂಚಿನ ವೇಗದಲ್ಲಿ ಡೈವ್ ಮಾಡಿ ವಿಕೆಟಿಗೆ ಥ್ರೋ – ವಿರಾಟ್ ರನೌಟ್‍ಗೆ ನೆಟ್ಟಿಗರು ಫಿದಾ

Public TV
2 Min Read
Virat Kohli Main

ಹ್ಯಾಮಿಲ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಬಳಿಕ ಫಿಲ್ಡಿಂಗ್ ವೇಳೆ ವಿರಾಟ್ ಹೆನ್ರಿ ನಿಕೋಲ್ಸ್ ಅವರನ್ನು ರನೌಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹ್ಯಾಮಿಲ್ಟನ್‍ನಲ್ಲಿ ಭಾರತ ವಿರುದ್ಧ ಬುಧವಾರ ನಡೆದ ಏಕದಿನ ಸರಣಿ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 28 ಓವರ್ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತ್ತು. ತಂಡದ ರನ್ ಏರಿಕೆ ಮುಂದಾಗಿದ್ದ ಹೆನ್ರಿ ನಿಕೋಲ್ಸ್ ಗೆ ರಾಸ್ ಟೇಲರ್ ಸಾಥ್ ನೀಡಿದರು. ಈ ಜೋಡಿ 3ನೇ ವಿಕೆಟ್‍ಗೆ 62 ರನ್ ಜೊತೆಯಾಟದ ಕೊಡುಗೆ ನೀಡಿತು.

https://twitter.com/Sushil9917172/status/1224976922389573632

ಜಸ್‍ಪ್ರೀತ್ ಬುಮ್ರಾ ಎಸೆದ ಇನ್ನಿಂಗ್ಸ್ 29ನೇ ಓವರಿನ 3ನೇ ಎಸೆತದಲ್ಲಿ ರಾಸ್ ಟೇಲರ್ ಒಂಟಿ ರನ್ ಕದಿಯಲು ಮುಂದಾಗಿದ್ದರು. ಈ ವೇಳೆ ನಾನ್ ಸ್ಟ್ರೈಕರ್ ನಲ್ಲಿದ್ದ ಹೆನ್ರಿ ನಿಕೋಲ್ಸ್ ಅವರು ಓಡಿ ಬಂದು ಕ್ರೀಸ್ ತಲುಪುವ ಮುನ್ನವೇ ವಿರಾಟ್ ಕೊಹ್ಲಿ ವೇಗವಾಗಿ ಓಡಿ ಬಂದು ಹೈ ಹೊಡೆದು ವಿಕೆಟ್‍ಗೆ ಬಾಲ್ ಎಸೆದರು. ಸ್ವಲ್ಪ ಅಂತರದಲ್ಲೇ ವಿಕೆಟ್ ಕಳೆದುಕೊಂಡ ನಿಕೋಲ್ಸ್ ಪೆವಿಲಿಯನ್‍ಗೆ ತೆರಳಿದರು.

ಭಾರತದ ನೀಡಿದ್ದ 347 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‍ನ 11 ಎಸೆತಗಳು ಬಾಕಿ ಇರುವಂತೆ 4 ವಿಕೆಟ್‍ಗಳಿಂದ ಗೆದ್ದು ಬೀಗಿದ್ದು, 3 ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನ್ಯೂಜಿಲೆಂಡ್ ಪರ ರಾಸ್ ಟೇಲರ್ ಔಟಾಗದೆ 109 ರನ್ (84 ಎಸೆತ, 10 ಬೌಂಡರಿ, 4 ಸಿಕ್ಸರ್), ಹೆನ್ರಿ ನಿಕೋಲ್ಸ್ 78 ರನ್ (82 ಎಸೆತ, 11 ಬೌಂಡರಿ), ಟಾಮ್ ಲಾಥಮ್ 69 ರನ್ (48 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ಮಿಂಚಿಲೆ ಸ್ಯಾಂಟ್ನರ್ ಔಟಾಗದೆ 12 ರನ್ (9 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿದ್ದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ಶ್ರೇಯಸ್ ಅಯ್ಯರ್ ರನ್ 103 (107 ಎಸೆತ, 11 ಬೌಂಡರಿ, ಸಿಕ್ಸ್), ಕೆ.ಎಲ್.ರಾಹುಲ್ ಔಟಾಗದೆ 88 ರನ್ (64 ಎಸೆತ, 3 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ 51 ರನ್ (63 ಎಸೆತ, 6 ಬೌಂಡರಿ) ಹಾಗೂ ಕೇದಾರ್ ಜಾದವ್ ಔಟಾಗದೆ 26 ರನ್ (15 ಎಸೆತ, 3 ಬೌಂಡರಿ, ಸಿಕ್ಸ್) ಸೇರಿ 4 ವಿಕೆಟ್‍ಗೆ 347 ರನ್ ಪೇರಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *