ಬೆಂಗಳೂರು: ಕ್ರಿಕೆಟ್ ವರ್ಲ್ಡ್ ಕಪ್ 2023 (World Cup 2023) ಉಪಾಂತ್ಯಕ್ಕೆ ಬಂದಿದೆ. ಇಂದು ಲೀಗ್‍ನ ಕೊನೆಯ ಪಂದ್ಯ ಆತಿಥೇಯ ಇಂಡಿಯಾ, ನೆದರ್ಲ್ಯಾಂಡ್ಸ್ (Netherlands) ವಿರುದ್ಧ ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಕಣಕ್ಕೆ ಇಳಿಯಲಿದೆ.
ವಿಶ್ವಕಪ್ ಕ್ರಿಕೆಟ್‍ನಲ್ಲಿ ಭಾರತ (Team India) ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿಸುತ್ತಾ ಮೊದಲ ತಂಡವಾಗಿ ಸೇಮಿಸ್‍ಗೆ ಕಾಲಿಟ್ಟಿದೆ. ಇಂದು ಲೀಗ್ ಹಂತದ ಕೊನೆಯ ಪಂದ್ಯ ನಡೆಯುತ್ತಿದ್ದು, ಬಲಿಷ್ಠ ಭಾರತ ತಂಡ ಕ್ರಿಕೆಟ್ ಲೋಕದಲ್ಲಿ ನೆಲೆಕಂಡುಕೊಳ್ಳುತ್ತಿರೋ ನೆದರ್ಲ್ಯಾಂಡ್ಸ್ ವಿರುದ್ಧ ಅಖಾಡಕ್ಕೆ ಇಳಿಯಲಿದೆ.
ಇಲ್ಲಿವರೆಗೆ ಒಂದೇ ಒಂದು ಸೋಲನ್ನೂ ಕಾಣದೇ ಅಜೇಯರಾಗಿ ಬಲಿಷ್ಠ ತಂಡಗಳ ವಿರುದ್ಧ ಅಭೂತಪೂರ್ವ ಜಯಗಳಿಸಿರೋ ಭಾರತ ಕೊನೆಯ ಲೀಗ್ ಪಂದ್ಯವನ್ನ ಜಯದೊಂದಿಗೆ ಮುಗಿಸಿ ಸೇಮಿಸ್‍ಗೆ ಹೋಗಲು ಸಜ್ಜಾಗಿದೆ. ಇದನ್ನೂ ಓದಿ: World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್ – ಹೀನಾಯ ಸೋಲಿನೊಂದಿಗೆ ಪಾಕ್ ಮನೆಗೆ
ಸೀನಿಯರ್ಸ್ ಪ್ಲೇಯರ್ಸ್‍ಗೆ ರೆಸ್ಟ್..!?: ಈಗಾಗಲೇ 8ಕ್ಕೆ 8 ಪಂದ್ಯ ಗೆದ್ದಿರೋ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರೋ ಭಾರತ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರೋ ನೆದರ್‍ಲ್ಯಾಂಡ್ಸ್ ವಿರುದ್ಧ ಅನೇಕ ಬದಲಾವಣೆ ಮಾಡಿಕೊಳ್ಳೋ ಸಾಧ್ಯತೆಗಳಿವೆ. ಇಶನ್ ಕಿಶನ್ ಪ್ಯಾಡ್ ಕಟ್ಟೋ ಸಾಧ್ಯತೆ ಹೆಚ್ಚಾಗಿದೆ. ಹಾಗೆಯೇ ಬೌಲಿಂಗ್ ನಲ್ಲಿ ಅಶ್ವಿನ್ ಮತ್ತು ಪ್ರಸಿದ್ದಕೃಷ್ಣಗೆ ಚಾನ್ಸ್ ಸಿಗುವ ನೀರಿಕ್ಷೆಯಿದೆ. ಜೊತೆಗೆ ವಿನ್ನಿಂಗ್ ಟೀಮ್ ಮೂಮೆಂಟ್ ಅದೇ ಇರಲಿ ಅನ್ನೋ ಲೆಕ್ಕಾಚಾರವೂ ಸಹ ನಡೆದಿದ್ದು, ಇಂದು ಫೈನಲ್ 11ನಲ್ಲಿ ಯಾರ್ಯಾರಿದ್ದಾರೆ ಅನ್ನೋದಕ್ಕೆ ಕೆಲ ಗಂಟೆಗಳು ಕಾಯಬೇಕು.
ಕ್ರಿಕೆಟ್ ಗಾಡ್ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕಿಂಗ್ ಕೊಹ್ಲಿ..?: ಕಳೆದ ಮ್ಯಾಚ್ ನಲ್ಲಿ 49ನೇ ಸೆಂಚುರಿ ಸಿಡಿಸಿ ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಅವರ ರೆಕಾರ್ಡ್ ಸರಿಗಟ್ಟಿರೋ ಆರ್‍ಸಿಬಿ ಹುಡುಗ ವಿರಾಟ್ ಕೊಹ್ಲಿ 50ನೇ ಸೆಂಚುರಿ ಸಿಡಿಸ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದೆ. ಕಿಂಗ್ ಕೋಹ್ಲಿಗೆ ಎರಡನೇ ತವರಾಗಿರೋ ಬೆಂಗಳೂರಿನಲ್ಲೇ ಈ ಶತಕ ಸಿಡಿಸುತ್ತಾರೋ ಅನ್ನೋ ಕಾತುರದಲ್ಲಿ ಅಭಿಮಾನಿಗಳಿದ್ದಾರೆ.
ಒಟ್ಟಿನಲ್ಲಿ ಮುಂದಿರೋ ಬಿಗ್ ಮ್ಯಾಚ್‍ಗಳಿಗೆ ಇವತ್ತಿನ ಮ್ಯಾಚ್ ಗೆಲ್ಲೋದು ಪಾಯಿಂಟ್ಸ್ ಟೇಬಲ್‍ನಲ್ಲಿ ಯಾವುದೇ ವ್ಯತ್ಯಾಸ ಮಾಡದೇ ಇದ್ರೂ. ಮುಂದಿನ ಸೆಮಿಫೈನಲ್‍ಗೆ ಹೋಗುವ ಮುನ್ನ ಗೆಲುವಿನೊಂದಿಗೆ ಹೋಗೋದಕ್ಕೆ ಭಾರತ ಕಂಪ್ಲೀಟ್ ರೆಡಿಯಾಗಿದೆ.