ಸ್ಮೃತಿ ಮಂಧಾನ ನಾಯಕತ್ವದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಮಹಿಳೆಯರ ತಂಡ ಐರ್ಲೆಂಡ್ ವಿರುದ್ಧ ಸುಲಭ ಜಯ ಸಾಧಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಶುಕ್ರವಾರ ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳಿಂದ ಐರ್ಲೆಂಡ್ ವಿರುದ್ಧ ಗೆಲುವು ದಾಖಲಿಸಿದೆ. ಆ ಮೂಲಕ 3 ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: Champions Trophy 2025 | ಜನವರಿ 12ರ ಒಳಗೆ ಟೀಂ ಇಂಡಿಯಾ ಪ್ರಕಟ
ಪ್ರತಿಕಾ, ತೇಜಲ್ ಫಿಫ್ಟಿ
ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಅರ್ಧಶತಕ ಸಿಡಿಸಿ ಮಿಂಚಿದರು. 96 ಎಸೆತಗಳಿಗೆ 89 ರನ್ (10 ಫೋರ್, 1 ಸಿಕ್ಸರ್) ಗಳಿಸಿದರು. ಇವರಿಗೆ ನಾಯಕಿ ಸ್ಮೃತಿ ಮಂಧಾನ ಸಾಥ್ ನೀಡಿದರು. ಮೊದಲ ವಿಕೆಟ್ ನಷ್ಟಕ್ಕೆ ಜೋಡಿ 70 ರನ್ ಸೇರಿಸಿತು. ಸ್ಮೃತಿ 41 ರನ್ (6 ಫೋರ್, 1 ಸಿಕ್ಸರ್) ಗಳಿಸಿ ಔಟಾದರು.
ನಂತರ ಬಂದ ಹರ್ಲೀನ್ ಡಿಯೋಲ್ 20 ರನ್ ಗಳಿಸಿದರು. ತೇಜಲ್ ಹಸಬ್ನಿಸ್ 46 ಎಸೆತಕ್ಕೆ 53 ರನ್ ಗಳಿಸಿ (9 ಫೋರ್) ಗಮನ ಸೆಳೆದರು. ಜೆಮಿಮಾ ರೋಡ್ರಿಗಸ್ ಹಾಗೂ ರಿಚಾ ಘೋಷ್ ತಲಾ 8 ರನ್ ಗಳಿಸಿದರು. ಇದನ್ನೂ ಓದಿ: ಕೊಡಗಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ 50 ಓವರ್‌ಗೆ 7 ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿದರು. ಕ್ಯಾಪ್ಟನ್ ಗ್ಯಾಬಿ ಲೂಯಿಸ್ 92 ರನ್ (15 ಫೋರ್), ಲಿಯಾ ಪಾಲ್ 59 ರನ್ (7 ಫೋರ್) ಬಾರಿಸಿ ಗಮನ ಸೆಳೆದರು. ಅರ್ಲೀನ್ ಕೆಲ್ಲಿ 28, ಕ್ರಿಸ್ಟಿನಾ ಕೌಲ್ಟರ್ ರೀಲಿ 15 ರನ್ ಗಳಿಸಿ ತಂಡದ ಮೊತ್ತ 200 ಗಡಿ ದಾಟಲು ನೆರವಾದರು.
ಟೀಂ ಇಂಡಿಯಾ ಪರ ಪ್ರಿಯಾ ಮಿಶ್ರಾ 2, ಟೈಟಾಸ್ ಸಾಧು, ಸಯಾಲಿ ಸತ್ಘರೆ, ದೀಪ್ತಿ ಶರ್ಮಾ ತಲಾ 1 ವಿಕೆಟ್ ಕಿತ್ತರು.