ಲಂಡನ್: ಬಹು ನಿರೀಕ್ಷಿತ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಎದುರಾಳಿ ತಂಡದ ವಿರುದ್ಧ ಮೈಂಡ್ ಗೇಮ್ ನಡೆಸುವ ಸೂಚನೆ ನೀಡಿದೆ. ಪ್ರಮುಖವಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಪೀನ್ ಮಾಂತ್ರಿಕ ಯಜುವೇಂದ್ರ ಚಹಲ್ ಈಗಾಗಲೇ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ.
ಯಜುವೇಂದ್ರ ಚಹಲ್ ಕ್ರಿಕೆಟ್ ಮಾತ್ರವಲ್ಲದೇ ಚೆಸ್ ಚಾಂಪಿಯನ್ ಸಹ ಆಗಿದ್ದು, ಅವರ ತಾಳ್ಮೆ, ಚತುರತೆ, ಮೇಂಡ್ ಗೇಮ್ ವಿರೋಧಿಗಳ ಪಾಲಿಗೆ ಕಠಿಣವಾಗಲಿದೆ. ಈಗಾಗಲೇ ಟೀಂ ಇಂಡಿಯಾಗೆ ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿರುವ ಚಹಲ್, ಕಳೆದ ವರ್ಷ ಬೆಂಗಳೂರಿನ ಟೆಸ್ಟ್ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನು ಪುನರಾವರ್ತಿಸುವ ಸೂಚನೆ ನೀಡಿದ್ದಾರೆ. ಅಂದು ಚಿನ್ನಸ್ವಾಮಿ ಕ್ರೀಡಾಂಗಣಲ್ಲಿ ನಡೆದ ಸರಣಿಯ ಅಂತಿಮ ಟಿ20 ಪಂದ್ಯದಲ್ಲಿ ಚಹಲ್ 25 ರನ್ ಗೆ 6 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದರು. ಈ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಿಂದ ಜಯಗಳಿತ್ತು. ಇದನ್ನು ಓದಿ: ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಕಿತ್ತ ಚಹಲ್ ಚೆಸ್‍ನಲ್ಲೂ ಚಾಂಪಿಯನ್ ಆಗಿದ್ರು!
ಸದ್ಯ ಮ್ಯಾಂಚೆಸ್ಟರ್ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಸರಣಿ ಕುರಿತು ಮಾತನಾಡಿರುವ ಚಹಲ್, ವಿರಾಟ್ ಬಾಯ್ ಹಾಗೂ ನಾನು ಈಗಾಗಲೇ ವಿರೋಧಿ ತಂಡವನ್ನು ಕಟ್ಟಿ ಹಾಕುವ ಕುರಿತ ಚರ್ಚೆ ನಡೆಸಿದ್ದು, ಪ್ಲಾನ್ ಸಿದ್ಧಪಡಿಸಿದ್ದಾಗಿ ತಿಳಿಸಿದ್ದಾರೆ.
ಇಂಗ್ಲೆಂಡ್ ಟೂರ್ನಿಗೆ ತಾನು ಪ್ರತ್ಯೇಕವಾಗಿ ಸಿದ್ಧತೆ ನಡೆಸಿದ್ದು, ಭಾರತದಲ್ಲಿ ನಡೆದ ಸರಣಿಯಲ್ಲೂ ಅವರ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದೇನೆ. ಆದರೆ ವಿದೇಶಿ ನೆಲದ ಪಿಚ್ ವ್ಯತ್ಯಾಸವಾಗುವ ಕುರಿತ ಅರಿವು ನನಗಿದೆ. ಸದ್ಯ ನನ್ನ ಬೌಲಿಂಗ್ ನಲ್ಲಿ ಕೆಲ ವೇರಿಯೆಷನ್ಸ್ ಕಂಡುಕೊಂಡಿದ್ದು, ಎರಡು ರೀತಿಯ ಎಸೆತ ಪ್ರಯೋಗಿಸುವ ಸಾಮಥ್ರ್ಯವಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ ತೋರಿದ ಪ್ರದರ್ಶನವನ್ನು ಪುನರವರ್ತಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಎಬಿ ಡಿಲಿಯರ್ಸ್ ಸಲಹೆಗಳನ್ನು ನೆನಪಿಸಿದ ಚಹಲ್, ಎಬಿಡಿ ನನಗೆ ಪಿಚ್ ವರ್ತನೆ ಸೇರಿದಂತೆ, ಆನ್‍ಫೀಲ್ಡ್ ಅಲ್ಲದೇ ಡ್ರೆಸ್ಸಿಂಗ್ ರೂಮ್ ನಲ್ಲೂ ಹಲವು ಸಲಹೆ ನೀಡಿದ್ದಾರೆ. ಅಲ್ಲದೇ ಟೂರ್ನಿಗೆ ಶುಭ ಸಂದೇಶ ರವಾನಿಸಿದ್ದು, ವಿಡಿಯೋ ಕಾಲ್ ಮೂಲಕ ಹಲವು ಬಾರಿ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.