ಆಂಟಿಗುವಾ: ಅಂಡರ್-19 ವಿಶ್ವಕಪ್ ಫೈನಲ್‍ನಲ್ಲಿ ಭಾರತ ತಂಡದ ರಾಜ್ ಬಾವ ಮತ್ತು ರವಿ ಕುಮಾರ್ ಬಿಗು ದಾಳಿಗೆ ಇಂಗ್ಲೆಂಡ್ 189 ರನ್‍ಗಳಿಗೆ ಗಂಟು ಮೂಟೆ ಕಟ್ಟಿದೆ. ಈ ಮೂಲಕ ಟೀಂ ಇಂಡಿಯಾ ಗೆಲ್ಲಲು 190 ರನ್‍ಗಳ ಗುರಿ ಪಡೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ನಾಯಕನ ಲೆಕ್ಕಾಚಾರಗಳನ್ನು ರಾಜಾ ಭಾವ ಮತ್ತು ರವಿ ಕುಮಾರ್ ತಲೆಕೆಳಗಾಗಿಸಿದರು. ಟೀಂ ಇಂಡಿಯಾದ ಉರಿದಾಳಿಗೆ ಪತರುಗಟ್ಟಿದ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಇದನ್ನೂ ಓದಿ: ಆಸ್ಟ್ರೇಲಿಯಾ ತಂಡವನ್ನು ಯಶಸ್ಸಿನ ಮಟ್ಟಿಲೇರಿಸಿದ ಕೋಚ್ ಜಸ್ಟಿನ್ ಲ್ಯಾಂಗರ್ ರಾಜೀನಾಮೆ
ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ ಇನ್ನೊಂದೆಡೆ ದೃತಿಗೇಡದೆ ಬ್ಯಾಟ್‍ಬೀಸಿದ ಜೇಮ್ಸ್ ರೆವ್ ಭಾರತದ ಬೌಲರ್‌ಗಳಿಗೆ ಕಾಡಿದರು. 43.1 ಓವರ್ ವರೆಗೆ ಭಾರತದ ಬೌಲರ್‌ಗಳ ವಿರುದ್ಧ ದಿಟ್ಟ ಹೋರಾಟ ನಡೆಸಿದ ಜೇಮ್ಸ್ ರೆವ್ ಅಂತಿಮವಾಗಿ 95 ರನ್ (116 ಎಸೆತ, 12 ಬೌಂಡರಿ) ಸಿಡಿಸಿ ಶತಕ ವಂಚಿತರಾದರು. ಕೆಳ ಕ್ರಮಾಂಕದಲ್ಲಿ ಇವರಿಗೆ ಉತ್ತಮ ಸಾಥ್ ನೀಡಿದ ಜೇಮ್ಸ್ ಸೇಲ್ಸ್ ಅಜೇಯ 34 ರನ್ (65 ಎಸೆತ, 2 ಬೌಂಡರಿ) ಬಾರಿಸಿ ಆಸರೆಯಾದರು. ಇವರನ್ನೂ ಹೊರತುಪಡಿಸಿ, ಆರಂಭಿಕ ಆಟಗಾರ ಜಾರ್ಜ್ ಥಾಮಸ್ ಸಿಡಿಸಿದ 30 ರನ್ (30 ಎಸೆತ, 4 ಬೌಂಡರಿ, 1 ಸಿಕ್ಸ್) ಹೆಚ್ಚಿನ ಗಳಿಕೆ. ಅಂತಿಮವಾಗಿ ಇಂಗ್ಲೆಂಡ್‍ನಲ್ಲಿ 44.5 ಓವರ್‌ಗಳಲ್ಲಿ 189 ರನ್‍ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಕೊನೆಯ ಎಸೆತದಲ್ಲಿ 5 ರನ್ ಗುರಿ – ಸಿಕ್ಸ್, ಫೋರ್ ಬಾರಿಸದೆ ಪಂದ್ಯ ಗೆದ್ದ ತಂಡ, ವೀಡಿಯೋ ವೈರಲ್!
ಭಾರತದ ಪರ ರಾಜ್ ಬಾವಾ 9.5 ಓವರ್ ಎಸೆದು 30 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ರವಿ ಕುಮಾರ್ 9 ಓವರ್ ಎಸೆದು 34 ರನ್ ನೀಡಿ 4 ವಿಕೆಟ್ ಪಡೆದು ಸೈ ಎನಿಸಿಕೊಂಡರು. ಇನ್ನುಳಿದ 1 ವಿಕೆಟ್ ಕೌಶಲ್ ತಾಂಬೆ ಪಾಲಾಯಿತು.