ಲಂಡನ್: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳು ಮುಗಿದಿದೆ. ಈ ಸರಣಿಯ ಮೂರು ಪಂದ್ಯಗಳಲ್ಲಿ ಎರಡು ತಂಡದ ಬೌಲರ್ಗಳು ಬರೋಬ್ಬರಿ 58 ನೋ ಬಾಲ್ ಹಾಕಿದ್ದಾರೆ.
ಕ್ರಿಕೆಟ್‍ನಲ್ಲಿ ಒಂದೇ ಒಂದು ನೋ ಬಾಲ್‍ನಿಂದ ಹಲವು ಪಂದ್ಯಗಳ ಚಿತ್ರಣವೇ ಬದಲಾಗಿರುವ ನಿದರ್ಶನಗಳಿವೆ. ಹಾಗಾಗಿ ಬೌಲರ್ಗಳು ಗೆರೆ ದಾಟಿ ಬೌಲ್ ಮಾಡುವುದನ್ನು ಆದಷ್ಟು ನಿಯಂತ್ರಿಸುತ್ತಾರೆ. ಈ ನಡುವೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ನೋ ಬಾಲ್‍ಗಳ ಸಂಖ್ಯೆ ಅರ್ಧಶತಕ ದಾಟಿದೆ.
ಭಾರತ ಹಾಗೂ ಇಂಗ್ಲೆಂಡ್ ಸರಣಿಯಲ್ಲಿ ಮೂರು ಪಂದ್ಯಗಳಿಂದ ಎರಡು ತಂಡದ ಬೌಲರ್ಗಳು ಒಟ್ಟು 58 ನೋ ಬಾಲ್ ಮಾಡಿದ್ದು, ಅದರಲ್ಲಿ ಭಾರತೀಯ ಬೌಲರ್ಗಳು 41 ನೋ ಬಾಲ್ ಮತ್ತು ಇಂಗ್ಲೆಂಡ್ ಬೌಲರ್ಗಳು 17 ನೋ ಬಾಲ್ ಹಾಕಿದ್ದಾರೆ. ಇದನ್ನೂ ಓದಿ: 515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ
ವೈಯಕ್ತಿಕವಾಗಿ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 25 ನೋ ಬಾಲ್ ಹಾಕಿದರೆ, ಇಂಗ್ಲೆಂಡ್ ತಂಡದ ಸ್ಪಿನ್ನರ್ ರಾಬಿನ್ಸನ್ 9 ನೋ ಬಾಲ್ ಮತ್ತು ರವೀಂದ್ರ ಜಡೇಜಾ 6 ನೋ ಬಾಲ್ ಹಾಕಿ ಮೊದಲ ಮೂರು ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ಟಾಪ್ ಬೌಲರ್ ಜೀವನಕ್ಕೆ ಮುಳುವಾಯ್ತು 9 ವರ್ಷ ಹಿಂದಿನ ಟ್ವೀಟ್