ಮುಂಬೈ: ಇದೇ ಜನವರಿ 22 ರಿಂದ ಭಾರತ ಮತ್ತು ಇಂಗ್ಲೆಂಡ್ (Ind vs Eng) ನಡುವೆ ಐದು ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಪ್ರಸಕ್ತ ವರ್ಷದಲ್ಲಿ ಭಾರತ ತಂಡಕ್ಕೆ ಇದು ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಯಾಗಿದೆ.
Advertisement
ಜ.22ರಿಂದ ಫೆಬ್ರವರಿ 2ರ ವರೆಗೆ 5 ಪಂದ್ಯಗಳ ಟಿ20 ಸರಣಿ (T20 Series) ನಡೆಯಲಿದ್ದು, ಬಳಿಕ ಫೆಬ್ರವರಿ 6 ರಿಂದ 12ರ ವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಟಿ20 ಸರಣಿಗೆ ಮಿಸ್ಟರ್-360 ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವದಲ್ಲಿ ಭಾರತ ತಂಡವನ್ನು ಪ್ರಕಟಿಸಿರುವ ಬಿಸಿಸಿಐ (BCCI), ಏಕದಿನ ಸರಣಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನ ಪ್ರಕಟಿಸಿದೆ.
Advertisement
ತವರಿನಲ್ಲಿ ಅತ್ಯಧಿಕ ಸರಣಿ ಗೆಲುವು:
2019ರಿಂದ ಈವರೆಗೆ ತವರಿನಲ್ಲಿ 16 ಸರಣಿಗಳನ್ನಾಡಿರುವ ಟೀಂ ಇಂಡಿಯಾ (Team India) 14 ಸರಣಿಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲಿ ಅತಿಹೆಚ್ಚು ಸರಣಿ ಗೆದ್ದ ತಂಡವಾಗಿಯೂ ಟೀಂ ಇಂಡಿಯಾ ಹೊರಹೊಮ್ಮಿದೆ.
Advertisement
Advertisement
ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಂ.1:
2023ರ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ನಂ.1 ಪಟ್ಟಕ್ಕೇರಿದ ಭಾರತ, ದೀರ್ಘಕಾಲದಿಂದಲೂ ಅಗ್ರಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಕಳೆದ 1 ವರ್ಷದಲ್ಲಿ 70 ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ 18,747 ಅಂಕಗಳು ಹಾಗೂ 268 ರೇಟಿಂಗ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ (259 ರೇಟಿಂಗ್ಸ್), ಇಂಗ್ಲೆಂಡ್ (255 ರೇಟಿಂಗ್ಸ್), ವೆಸ್ಟ್ ಇಂಡೀಸ್ (247 ರೇಟಿಂಗ್ಸ್), ನ್ಯೂಜಿಲೆಂಡ್ (247 ರೇಟಿಂಗ್ಸ್) ಕ್ರಮವಾಗಿ 2, 3, 4, 5ನೇ ಸ್ಥಾನಗಳಲ್ಲಿವೆ.
ಟಿ20 ಪಂದ್ಯಗಳು ಎಲ್ಲಿ – ಯಾವಾಗ?
ಪ್ರತಿ ಪಂದ್ಯ ಸಂಜೆ 7:00 ಗಂಟೆಗೆ ಶುರುವಾಗಲಿದೆ
- ಜ.22 – ಮೊದಲ ಪಂದ್ಯ – ಕೋಲ್ಕತ್ತಾ (ಈಡನ್ ಗಾರ್ಡನ್)
- ಜ.25 – 2ನೇ ಪಂದ್ಯ – ಚೆನ್ನೈ (ಚೆಪಾಕ್)
- ಜ.28 – 3ನೇ ಪಂದ್ಯ – ರಾಜ್‌ಕೋಟ್ (ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್)
- ಜ.31 – 4ನೇ ಪಂದ್ಯ – ಪುಣೆ (ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್)
- ಫೆ.02 – 5ನೇ ಪಂದ್ಯ – ಮುಂಬೈ (ವಾಂಖೆಡೆ)
ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ:
ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಷ್‌ದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).