ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ – ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡ ಧೋನಿ

Public TV
1 Min Read
MS DHONI

ಲಂಡನ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 49 ರನ್‍ಗಳ ಭರ್ಜರಿ ಜಯಗಳಿಸಿದ ಬಳಿಕ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಕಾಣಿಸಿಕೊಂಡಿದ್ದಾರೆ.

TEAM INDIA 1 1

ಟೀಂ ಇಂಡಿಯಾ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. 2ನೇ ಟಿ20 ಪಂದ್ಯ ಗೆದ್ದ ಬಳಿಕ ಧೋನಿ ಭಾರತ ತಂಡದ ಡ್ರೆಸ್ಸಿಂಗ್ ರೂಮ್‍ಗೆ ತೆರಳಿ ಟೀಂ ಇಂಡಿಯಾ ಆಟಗಾರೊಂದಿಗೆ ಮಾತನಾಡಿದ್ದಾರೆ. ಧೋನಿ ತಂಡದ ಆಟಗಾರೊಂದಿಗಿರುವ ಫೋಟೋವನ್ನು ಬಿಸಿಸಿಐ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಆಂಗ್ಲರ ವಿರುದ್ಧ 49 ರನ್‌ಗಳ ಜಯ- ಸರಣಿ ಗೆದ್ದ ಭಾರತ

ನಿನ್ನೆ ನಡೆದ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ಇಂಗ್ಲೆಂಡ್‍ಗೆ 171 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಭಾರತದ ಬೌಲರ್‌ಗಳ ಬಿಗಿ ದಾಳಿಗೆ ನಲುಗಿ ಕೇವಲ 121 ರನ್‍ಗಳಿಗೆ ಗಂಟುಮೂಟೆ ಕಟ್ಟಿ ಸೋಲನುಭವಿಸಿತು. ಭಾರತ ತಂಡ 49 ರನ್‍ಗಳ ಅಂತರದ ಜಯದೊಂದಿಗೆ ತವರಿನ ತಂಡಕ್ಕೆ ಟಕ್ಕರ್ ನೀಡಿತು. ಇದನ್ನೂ ಓದಿ: ರಿಮೋಟ್ ಕಂಟ್ರೋಲ್ ಕಾರ್ ಮೂಲಕ ಗ್ರೌಂಡ್‌ಗೆ ಪ್ರವೇಶಿಸಿತು ಕ್ರಿಕೆಟ್ ಚೆಂಡು

ಭಾರತದ ಪರ ರವೀಂದ್ರ ಜಡೇಜಾ ಅಜೇಯ 46 ರನ್ (29 ಎಸೆತ, 5 ಬೌಂಡರಿ) ಸಿಡಿಸಿ ಬ್ಯಾಟಿಂಗ್‍ನಲ್ಲಿ ಮಿಂಚಿದರೆ, ಬೌಲಿಂಗ್‍ನಲ್ಲಿ ಭುವನೆಶ್ವರ್ ಕುಮಾರ್ 3 ವಿಕೆಟ್, ಬುಮ್ರಾ ಮತ್ತು ಚಹಾಲ್ ತಲಾ 2 ವಿಕೆಟ್ ಕಿತ್ತು ಗೆಲುವು ತಂದುಕೊಟ್ಟರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *