ರಾಂಚಿ: ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಇಂಡಿಯಾ (Team India) ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ (England) 7 ವಿಕೆಟ್‍ಗಳ ನಷ್ಟಕ್ಕೆ 302 ರನ್‍ಗಳಿಸಿದೆ.
ಇಂಗ್ಲೆಂಡ್ ಪರ ಬ್ಯಾಟ್ ಬೀಸಿದ ಜೋ ರೂಟ್ 226 ಎಸೆತಗಳಿಗೆ 9 ಬೌಂಡರಿ ಚಚ್ಚುವ ಮೂಲಕ ಶತಕ ಸಿಡಿಸಿದ್ದಾರೆ. ಈ ಮೂಲಕ 106 ರನ್‍ಗಳನ್ನು ಕಲೆ ಹಾಕಿ ಕ್ರೀಸ್‍ನಲ್ಲೇ ಉಳಿದಿದ್ದಾರೆ. ಝಾಕ್ ಕ್ರಾವ್ಲಿ 42 ಎಸೆತಗಳಿಗೆ 42 ರನ್ ಗಳಿಸಿ ಔಟಾಗಿದ್ದಾರೆ. ಬೆನ್ ಡಕೆಟ್ 21 ಎಸೆತಗಳಿಗೆ 11 ರನ್‍ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಬೈಸ್ರ್ಟೋವ್ 35 ಎಸೆತಗಳಲ್ಲಿ 38 ರನ್ ಗಳಿಸಿ ಔಟಾಗಿದ್ದಾರೆ. ಬೆನ್ ಫೋಕ್ಸ್ ನಾಲ್ಕು ಬೌಂಡರಿ ಚಚ್ಚಿ, ಒಂದು ಸಿಕ್ಸ್ ಸಿಡಿಸುವ ಮೂಲಕ 126 ಎಸೆತಗಳಲ್ಲಿ 47 ರನ್ ಗಳಿಸಿ ಸಿರಾಜ್ ಬೌಲಿಂಗ್ ದಾಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನೂ ಟಾಮ್ ಹಾಟ್ರ್ಲಿ ಒಂದು ಸಿಕ್ಸ್ ಒಂದು ಫೋರ್ ಸೇರಿ 13 ರನ್‍ಗಳಿಸಿ ಔಟಾಗಿದ್ದಾರೆ.
ಓಲಿ ಪೋಪ್ ಕೇವಲ ಎರಡೇ ಎಸೆತಗಳಲ್ಲಿ ಆಕಾಶ್ ದೀಪ್ ಬೌಲಿಂಗ್‍ಗೆ ಎಲ್‍ಬಿಡಬ್ಲ್ಯೂ ಆಗಿ ಪೆವಿಲಿಯನ್‍ಗೆ ಮರಳಿದ್ದಾರೆ. ರಾಬಿನ್ಸನ್ 60 ಎಸೆತಗಳಲ್ಲಿ ನಾಲ್ಕು ಬೌಂಡರಿ ಒಂದು ಸಿಕ್ಸ್ ಸೇರಿ 31 ರನ್ ಕಲೆ ಹಾಕಿ ಔಟಾಗದೇ ಉಳಿದಿದ್ದಾರೆ.
ಭಾರತದ ಪರವಾಗಿ ಸಿರಾಜ್ (Mohammed Siraj) 2, ಆಕಾಶ್ ದೀಪ್ (Akash Deep) 3, ಜಡೇಜಾ 1, ಅಶ್ವಿನ್ 1 ವಿಕೆಟ್ ಕಬಳಿಸಿದ್ದಾರೆ.