ಲಕ್ನೋ: ಗಾಯದ (Injured) ಸಮಸ್ಯೆಗೆ ತುತ್ತಾಗಿರುವ ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಭಾನುವಾರ ಇಂಗ್ಲೆಂಡ್ (England) ವಿರುದ್ಧವೂ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.
ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಪಂದ್ಯ ಲಕ್ನೋದಲ್ಲಿ ನಡೆಯಲಿರುವ ಪಂದ್ಯಕ್ಕೆ ಲಭ್ಯವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇನ್ನೂ ಗಾಯದಿಂದ ಹಾರ್ದಿಕ್ ಪಾಂಡ್ಯ ಚೇತರಿಸಿಕೊಂಡಿಲ್ಲ.
ಆರಂಭದಲ್ಲಿ ಪಾಂಡ್ಯ ಮೊಣಕಾಲಿಗೆ ಆದ ಗಾಯ ಸಣ್ಣ ಪ್ರಮಾಣದ್ದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಗಾಯ ಗಂಭೀರ ಸ್ವರೂಪದ್ದು ಎನ್ನುವುದು ಈಗ ದೃಢಪಟ್ಟಿದೆ.
ಒಂದು ವೇಳೆ ಪಾಂಡ್ಯ ಪಂದ್ಯವಾಡದೇ ಇದ್ದರೆ ವೇಗದ ಬೌಲರ್ ಮತ್ತು ಬ್ಯಾಟರ್ ಕೊರತೆಯಾಗಲಿದೆ. ಪಾಂಡ್ಯ ಆಲ್‌ರೌಂಡರ್ ಸ್ಥಾನವನ್ನು ತುಂಬಬಹುದಾದ ಆಟಗಾರರು ಸದ್ಯಕ್ಕೆ ಸಿಗದೇ ಇದ್ದರೂ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆಯಿದೆ. ಇದನ್ನೂ ಓದಿ: World Cup 2023: ಡಿಕಾಕ್ ಡಿಚ್ಚಿಗೆ ಬಾಂಗ್ಲಾ ಬರ್ನ್ – 149 ರನ್‌ಗಳ ಜಯದೊಂದಿಗೆ 2ನೇ ಸ್ಥಾನಕ್ಕೆ ಜಿಗಿದ ಹರಿಣರು
ಮುಂದಿನ ಪಂದ್ಯದಲ್ಲಿ ಸಿರಾಜ್ ಬದಲು ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಬೌಲಿಂಗ್‌ನಲ್ಲಿ ವಿಕೆಟ್ ಪಡೆಯದ ಕಾರಣ ಟೀಂ ಇಂಡಿಯಾ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಪಾಂಡ್ಯಗೆ ಆಗಿದ್ದೇ?
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶದ (Bangladesh) ವಿರುದ್ಧದ ಪಂದ್ಯದಲ್ಲಿ 9ನೇ ಓವರ್ ನಲ್ಲಿ ಬೌಲಿಂಗ್ ಮಾಡುತ್ತಿದ್ದ ಪಾಂಡ್ಯ 3ನೇ ಎಸೆತ ಬೌಲಿಂಗ್ ಮಾಡಿದಾಗ ಕ್ರೀಸ್‌ನಲ್ಲಿದ್ದ ಲಿಟ್ಟನ್ ದಾಸ್ ಸ್ರೈಟ್‌ಡ್ರೈವ್ ಮಾಡಿದರು. ಆಗ ಪಾಂಡ್ಯ ಕಾಲಿನಿಂದ ಚೆಂಡನ್ನು ತಡೆಯಲು ಪ್ರಯತ್ನಿಸಿದಾಗ ಬ್ಯಾಲೆನ್ಸ್ ತಪ್ಪಿ ಕಾಲು ಉಳುಕಿಸಿಕೊಂಡರು. ತಕ್ಷಣವೇ ಫಿಸಿಯೋ ಥೆರಪಿಸ್ಟ್ ಬಂದು ಚಿಕಿತ್ಸೆ ನೀಡಿದರೂ ಮತ್ತೆ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಆಟದ ಮಧ್ಯದಲ್ಲೇ ಮೈದಾನ ತೊರೆಯಲು ನಿರ್ಧರಿಸಿದರು. ಬಳಿಕ ರೋಹಿತ್ ಶರ್ಮಾ ಜೊತೆ ಮಾತುಕತೆ ನಡೆದ ಕೊಹ್ಲಿ ಉಳಿದಿದ್ದ ಮೂರು ಎಸೆತಗಳನ್ನು ತಾವೇ ಎಸೆಯುವ ಮೂಲಕ ಬೌಲಿಂಗ್ ಪೂರ್ಣಗೊಳಿಸಿದರು.
Web Stories