CricketLatestLeading NewsMain PostSports

ಸುಮ್ನೆ ಬ್ಯಾಟಿಂಗ್ ಮಾಡ್ ಗುರು – ಬೈರ್‌ಸ್ಟೋವ್ ಜೊತೆ ವಾಗ್ವಾದಕ್ಕಿಳಿದ ಕೊಹ್ಲಿ

Advertisements

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್‌ ಜಾನಿ ಬೈರ್‌ಸ್ಟೋವ್ ನಡುವೆ ಮಾತಿನ ಚಕಮಕಿ ನಡೆಯಿತು.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಗಳಿಸಿ ಆಲೌಟ್ ಆದ ಬಳಿಕ ಎರಡನೇ ದಿನ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ 4 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದ್ದ ವೇಳೆ ಮಳೆ ಬಂದ ಕಾರಣ ಪಂದ್ಯ ಸ್ಥಗಿತಗೊಳಿಸಲಾಯಿತು. ಇಂದು ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಜಾನಿ ಬೈರ್‌ಸ್ಟೋವ್ ಮತ್ತು  ಬೆನ್ ಸ್ಟೋಕ್ಸ್ ಚೇತರಿಕೆ ನೀಡಿದರು. ಈ ನಡುವೆ ವಿರಾಟ್ ಕೊಹ್ಲಿ ಕ್ರಿಸ್‍ನಲ್ಲಿದ್ದ ಬೈರ್‌ಸ್ಟೋವ್ ಬಳಿ ಬಂದು ಮಾತು ಆರಂಭಿಸಿದರು. ಈ ವೇಳೆ ಬೈರ್‌ಸ್ಟೋವ್ ಹೋಗಿ ಫೀಲ್ಡಿಂಗ್ ಮಾಡು ಎಂದು ಕೊಹ್ಲಿಗೆ ಸಲಹೆ ನೀಡದರು. ಈ ಮಾತು ಕೇಳಿಸಿಕೊಳ್ಳುತ್ತಿದ್ದಂತೆ ಕೊಹ್ಲಿ ಕೈ ಸನ್ನೆ ಮಾಡಿ ಸುಮ್ನೆ ಬ್ಯಾಟಿಂಗ್ ಮಾಡು ಎನ್ನುತ್ತ ಗರಂ ಆದರು. ಇದನ್ನೂ ಓದಿ: ಅಂದು ಯುವಿ ಇಂದು ಬುಮ್ರಾ – ಬ್ರಾಡ್ ಕಕ್ಕಾಬಿಕ್ಕಿ ಒಂದೇ ಓವರ್‌ನಲ್ಲಿ 35 ರನ್ ಚಚ್ಚಿ ವಿಶ್ವ ದಾಖಲೆ

ಈ ವಾಗ್ವಾದದ ಬಳಿಕ ಇಂಗ್ಲೆಂಡ್ ಪರ ಅಬ್ಬರಿಸಲು ಆರಂಭಿಸಿದ ಬೈರ್‌ಸ್ಟೋವ್ ಬೌಂಡರಿ, ಸಿಕ್ಸರ್‌ಗಳೊಂದಿಗೆ ಅಜೇಯ 91 ರನ್ (113 ಎಸೆತ, 12 ಬೌಂಡರಿ, 2 ಸಿಕ್ಸ್) ಬಾರಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. 45.3 ಓವರ್‌ಗಳಲ್ಲಿ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 200 ಗಳಿಸಿದ್ದ ವೇಳೆ ಮಳೆ ಆರಂಭವಾಗಿದೆ. ಇದನ್ನೂ ಓದಿ: 17 ವರ್ಷಗಳ ಬಳಿಕ ಧೋನಿ ದಾಖಲೆ ಸರಿಗಟ್ಟಿದ ಪಂತ್- ಅಂತಿಮ ಟೆಸ್ಟ್‌ನಲ್ಲಿ ಅಮೋಘ ಶತಕದಾಟ

ಇಂಗ್ಲೆಂಡ್ ತಂಡ 216 ರನ್‍ಗಳ ಹಿನ್ನಡೆಯಲ್ಲಿದ್ದು, ಮೂರನೇ ದಿನದಾಟದಲ್ಲಿ ಮಳೆಯಾಟ ಆರಂಭವಾಗಿದೆ. ಇನ್ನೆರಡು ದಿನ ಬಾಕಿ ಇದ್ದು ಮಳೆ ಬರದಿದ್ದರೆ ಫಲಿತಾಂಶ ಹೊರಬರುವ ಸಾಧ್ಯತೆ ಇದೆ.

Live Tv

Leave a Reply

Your email address will not be published.

Back to top button