ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ಎರಡನೇ ದಿನ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸಿದ್ದಾರೆ. ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ 35 ರನ್ ಬಾರಿಸಿ ಟೆಸ್ಟ್ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.
Advertisement
ಬುಮ್ರಾ ತಮ್ಮ ಬೆಂಕಿ ಬೌಲಿಂಗ್ ಮೂಲಕ ಎದುರಾಳಿಗಳನ್ನು ನಡುಗಿಸುತ್ತಿದ್ದರೆ, ಇದೀಗ ಬ್ಯಾಟಿಂಗ್‍ನಲ್ಲೂ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಇನ್ನಿಂಗ್ಸ್‌ನ 83ನೇ ಓವರ್ ಎಸೆಯಲು ಬಂದ ಇಂಗ್ಲೆಂಡ್ ತಂಡದ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಎದುರು ಬಿರುಸಿನ ಬ್ಯಾಟಿಂಗ್ ಮೂಲಕ ಬುಮ್ರಾ ಒಂದೇ ಓವರ್‌ನಲ್ಲಿ ಬರೋಬ್ಬರಿ 29 ರನ್ ಚೆಚ್ಚಿದರು. ಬುಮ್ರಾ ಬೌಂಡರಿ, ಸಿಕ್ಸರ್ ಸಿಡಿಸುತ್ತಿದ್ದಂತೆ ಕಕ್ಕಾಬಿಕ್ಕಿಯಾದ ಬ್ರಾಡ್ ವೈಡ್-ನೋ ಬಾಲ್ ಎಲ್ಲಾ ಸೇರಿ ಒಟ್ಟಾರೆ 35 ರನ್ ಬಿಟ್ಟು ಕೊಟ್ಟು ಕಂಗಾಲಾದರು. ಈ ಓವರ್‌ನಲ್ಲಿ ಬುಮ್ರಾ, 2 ಸಿಕ್ಸ್ ಮತ್ತು 4 ಬೌಂಡರಿ ಸಹಿತ ಒಟ್ಟು 29 ಬಾರಿಸಿ ಟೆಸ್ಟ್ ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದರು. ಇದನ್ನೂ ಓದಿ: 17 ವರ್ಷಗಳ ಬಳಿಕ ಧೋನಿ ದಾಖಲೆ ಸರಿಗಟ್ಟಿದ ಪಂತ್- ಅಂತಿಮ ಟೆಸ್ಟ್‌ನಲ್ಲಿ ಅಮೋಘ ಶತಕದಾಟ
Advertisement
Stuart Broad to @Jaspritbumrah93 the batter????????
An over to remember! A record shattering over! #ENGvIND pic.twitter.com/l9l7lslhUh
— BCCI (@BCCI) July 2, 2022
Advertisement
2007ರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಎದುರು 6 ಎಸೆತಗಳಲ್ಲಿ 6 ಸಿಕ್ಸರ್ ಹೊಡೆಸಿಕೊಂಡಿದ್ದ ಸ್ಟುವರ್ಟ್ ಬ್ರಾಡ್ ಇದೀಗ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ಎಸೆದು ಅನಗತ್ಯ ದಾಖಲೆ ಪುಟ ಸೇರಿದರು. ಇದನ್ನೂ ಓದಿ: ಕ್ಯಾಚ್ ಹಿಡಿಯಲು ಹೋದಾಗ ಪ್ಯಾಂಟಿಗೆ ಬಡಿದ ಬೇಲ್ಸ್ – ನೋವಿನಿಂದ ನರಳಾಡಿದ ವಾರ್ನರ್
Advertisement
Jasprit Bumrah Destroyed Stuart Broad Just like Yuvraj Singh in 2007 T20I. 35 Runs ????????
Most expensive over in Test Match Cricket History. #Bumrah #INDvsENG pic.twitter.com/rCPiCQj9B0
— ɅMɅN DUВΞY (@imAmanDubey) July 2, 2022
ಲಾರಾ ದಾಖಲೆ ಮುರಿದ ಬುಮ್ರಾ
ಈ ಹಿಂದೆ ಟೆಸ್ಟ್ ಕ್ರಿಕೆಟ್‍ನಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಓವರ್ ಒಂದಕ್ಕೆ 28 ರನ್ ಬಾರಿಸಿ ದಾಖಲೆ ಬರೆದಿದ್ದರು. 2003ರಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ರಾಬಿನ್ ಪೀಟರ್ಸನ್ ಎದುರು 28 ರನ್ ಚಚ್ಚಿ ಲಾರಾ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ವಿಶ್ವ ದಾಖಲೆಯನ್ನು ಬುಮ್ರಾ ಮುರಿದಿದ್ದು ಓವರ್ ಒಂದಕ್ಕೆ 35 ರನ್ ಚಚ್ಚಿ ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ರವೀಂದ್ರ ಜಡೇಜಾ 104 ರನ್ (194 ಎಸೆತ, 13 ಬೌಂಡರಿ) ಮತ್ತು ಬುಮ್ರಾ ಅಜೇಯ 31 ರನ್ (16 ಎಸೆತ, 4 ಬೌಂಡರಿ, 2 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 400 ರನ್‍ಗಳ ಗಡಿದಾಟಿಸಿದರು. ಅಂತಿಮವಾಗಿ ಭಾರತ ತಂಡ 84.5 ಓವರ್‌ಗಳಲ್ಲಿ 416 ರನ್‍ಗಳಿಗೆ ಆಲೌಟ್ ಆಯಿತು.