ರಾಜ್‌ಕೋಟ್: ಇಂಗ್ಲೆಂಡ್ (India vs England 3rd Test) ವಿರುದ್ಧದ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 326 ರನ್ ಗಳಿಸಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ (131 ರನ್, 14 ಫೋರ್, 3 ಸಿಕ್ಸರ್) ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ (110 ರನ್, 9 ಫೋರ್, 2) ಶತಕ ಮಿಂಚಿದ್ದಾರೆ. ಪದಾರ್ಪಣೆ ಪಂದ್ಯದಲ್ಲೇ ಸರ್ಫರಾಜ್ ಖಾನ್ (62 ರನ್, 9 ಫೋರ್, 1 ಸಿಕ್ಸರ್) ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ರೋಹಿತ್ ಬೊಂಬಾಟ್ ಶತಕ – ಮಹಿ ಸಿಕ್ಸರ್ ದಾಖಲೆ ಮುರಿದ ಹಿಟ್‌ಮ್ಯಾನ್
Advertisement
Advertisement
ಕಳೆದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಯಶಸ್ವಿ ಜೈಸ್ವಾಲ್ 10 ರನ್ ಗಳಿಸಿ ಔಟಾದರು. ರೋಹಿತ್ ಶರ್ಮಾ 131 ರನ್ ಗಳಿಸಿ ಮಾರ್ಕ್‌ವುಡ್‌ಗೆ ಔಟಾದರು.
Advertisement
ಶುಭಮನ್ ಗಿಲ್ ಶೂನ್ಯಕ್ಕೆ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದರು. ರಜತ್ ಪಾಟೀದಾರ್ 5 ರನ್ ಗಳಿಸಿ ಕ್ಯಾಚ್ ನೀಡಿ ಔಟಾದರು. ಸರ್ಫರಾಜ್ ಖಾನ್ ಅರ್ಧಶತಕ ಗಳಿಸಿ ರನೌಟ್ ಆದರು. ರವೀಂದ್ರ ಜಡೇಜಾ 110 ರನ್ ಗಳಿಸಿ ಆಡುತ್ತಿದ್ದಾರೆ. ಇದನ್ನೂ ಓದಿ: ವಿದೇಶದಲ್ಲಿ ಅಲ್ಲ, ಈ ಬಾರಿಯೂ ಭಾರತದಲ್ಲೇ IPL – ಯಾವಾಗಿನಿಂದ ಶುರು?
Advertisement
ಇಂಗ್ಲೆಂಡ್ ಪರ ಮಾರ್ಕ್ ವುಡ್ 3, ಟಾಮ್ ಹಾರ್ಟ್ಲಿ 1 ವಿಕೆಟ್ ಕಿತ್ತಿದ್ದಾರೆ. ಆಡಿರುವ 2 ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿವೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 28 ರನ್ ಅಂತರದಿಂದ ಇಂಗ್ಲೆಂಡ್ ಗೆದ್ದಿತ್ತು. 2ನೇ ಪಂದ್ಯವನ್ನು 106 ರನ್ ಅಂತರದಿಂದ ಸೋತಿತ್ತು. ಈಗ ಉಭಯ ತಂಡಗಳು ಮುನ್ನಡೆ ಸಾಧಿಸುವ ಲೆಕ್ಕಾಚಾರದಲ್ಲಿವೆ.