India vs England, 3rd Test – ಜೈಸ್ವಾಲ್ ದ್ವಿಶತಕ – ಇಂಗ್ಲೆಂಡ್‍ಗೆ 557 ರನ್ ಗುರಿ ನೀಡಿದ ಟೀಂ ಇಂಡಿಯಾ

Public TV
1 Min Read
TEAM INDIA

ರಾಜ್‍ಕೋಟ್: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ (Team India) ಇಂಗ್ಲೆಂಡ್‍ಗೆ 557 ರನ್‍ಗಳ ಬೃಹತ್ ಗುರಿ ನೀಡಿದೆ.

TEAM INDIA 3

ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಎರಡನೇ ದ್ವಿಶತಕ ಹಾಗೂ ಶುಭಮನ್ ಗಿಲ್ ಮತ್ತು ಸರ್ಫರಾಜ್ ಖಾನ್ ಅರ್ಧಶತಕದ ನೆರವಿನಿಂದ ಭಾರತ ಈ ಮೊತ್ತ ಕಲೆಹಾಕಿದೆ. ಮೂರನೇ ದಿನದ ಆಟದ ವೇಳೆ ಗಾಯಗೊಂಡು ಹೊರಹೋಗಿದ್ದ ಜೈಸ್ವಾಲ್, ಇಂದು ಮತ್ತೆ ಕ್ರೀಸ್‍ಗೆ ಆಗಮಿಸಿ ತಮ್ಮ ಶತಕವನ್ನು ದ್ವಿಶತಕ್ಕೆ ಏರಿಸಿದರು. 236 ಎಸೆತಗಳಲ್ಲಿ 214 ರನ್ ಗಳಿಸಿದ ಅವರು ಇನ್ನಿಂಗ್ಸ್‍ನಲ್ಲಿ 12 ಸಿಕ್ಸರ್ ಹಾಗೂ 14 ಬೌಂಡರಿಗಳನ್ನು ಸಿಡಿಸಿದರು.

TEAM INDIA 1

91 ರನ್ ಗಳಿಸಿ ಗಿಲ್ ಶತಕ ವಂಚಿತರಾದರು. ಎರಡನೇ ಇನ್ನಿಂಗ್ಸ್‍ನಲ್ಲೂ ಸರಾಗವಾಗಿ ಬ್ಯಾಟ್ ಬೀಸಿದ ಸರ್ಫರಾಜ್ ಖಾನ್ 72 ಎಸೆತಗಳಲ್ಲಿ 68 ರನ್ ದಾಖಲಿಸಿದರು. ತಂಡದ ಮೊತ್ತ 430 ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.

TEAM INDIA 2

ಇಂಗ್ಲೆಂಡ್ ಪರ ಜೋ ರೋಟ್, ಟಾಮ್ ಹಾಟ್ರ್ಸ್ ಹಾಗೂ ರೆಹಾನ್ ಅಹಮದ್ ತಲಾ ಒಂದು ವಿಕೆಟ್ ಉರುಳಿಸಿದರು.

ಯಶಸ್ವಿ ಜೈಸ್ವಾಲ್ ಶತಕದ ನೆರವಿನಿಂದ ಟೀಂ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 322 ರನ್‍ಗಳ ಮುನ್ನಡೆ ಸಾಧಿಸಿತ್ತು. ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 19 ರನ್ ಗಳಿಸಿ ಔಟಾಗಿದ್ದರು. ನಂತರ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಉತ್ತಮ ಜೊತೆಯಾಟವಾಡಿದರು. ಜೈಸ್ವಾಲ್ 103 (133 ಬಾಲ್, 5 ಸಿಕ್ಸರ್, 9 ಫೋರ್) ಸಿಡಿಸಿ ಮಿಂಚಿದ್ದರು. ಆಟದ ವೇಳೆ ಬೆನ್ನು ನೋವಿನ ಸಮಸ್ಯೆಯಿಂದ ರಿಟೈರ್ಡ್ ಹರ್ಟ್ ಆಗಿ ಹೊರನಡೆದಿದ್ದರು. ರಜತ್ ಪಾಟಿದಾರ್ ಶೂನ್ಯಕ್ಕೆ ಔಟಾದರು. ಶುಭಮನ್ ಗಿಲ್ ಅರ್ಧಶತಕ ಬಾರಿಸಿ (64) ಸಿಡಿಸಿದ್ದರು.

ಇದೀಗ 557 ರನ್‍ಗಳ ಗುರಿ ಪಡೆದ ಇಂಗ್ಲೆಂಡ್ ಆಟ ಆರಂಭಿಸಿದೆ.

Share This Article