ಲೀಡ್ಸ್: ಮೂರನೇ ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ಹೀನಾಯ ಪ್ರದರ್ಶನ ನೀಡಿದ್ದು ಇಂಗ್ಲೆಂಡ್ ಬೌಲರ್ ಗಳ ಅಬ್ಬರಕ್ಕೆ ಕೇವಲ 78 ರನ್‍ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ಓವರಿನ 5ನೇ ಎಸೆತಕ್ಕೆ ವಿಕೆಟ್ ಕಳೆದುಕೊಂಡಿತು. ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾದರು. ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮೊದಲೇ ನಾವು ಆಡುವುದಿಲ್ಲ ಎಂದ ಸ್ಟಾರ್ ಆಟಗಾರರು
Advertisement
What is going on!! ????
Scorecard/Videos: https://t.co/UakxjzUrcE#ENGvIND pic.twitter.com/ldCg1723uv
— England Cricket (@englandcricket) August 25, 2021
Advertisement
ರೋಹಿತ್ ಶರ್ಮಾ 19 ರನ್(105 ಎಸೆತ, 1 ಬೌಂಡರಿ), ಅಜಿಂಕ್ಯಾ ರಹಾನೆ 18 ರನ್(54 ಎಸೆತ, 3 ಬೌಂಡರಿ) ಹೊಡೆದದ್ದು ಬಿಟ್ಟರೆ ಉಳಿದ 8 ಮಂದಿ ಸಿಂಗಲ್ ಡಿಜಿಟ್ ರನ್ ಹೊಡೆದು ಔಟಾದರು. ಇತರ ರೂಪದಲ್ಲಿ 16 ರನ್(11 ಲೆಗ್ ಬೈ, 5 ನೋಬಾಲ್) ಬಂದ ಕಾರಣ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 78 ರನ್ ಗಳಿಸಿತು. ಅದರಲ್ಲೂ ಕೊನೆಯ 6 ವಿಕೆಟ್‍ಗಳು 22 ರನ್‍ಗಳ ಅಂತರದಲ್ಲಿ ಪತನಗೊಂಡಿತ್ತು. ಇದನ್ನೂ ಓದಿ: ಗಲ್ಲಿ ಕ್ರಿಕೆಟ್ ನೆನಪಿಸಿದ ಧೋನಿ ಸಿಕ್ಸರ್
Advertisement
An incredible day, an absolutely heroic performance from @benstokes38! ❤️????#OnThisDay in 2019! pic.twitter.com/FDW9D9mT1O
— England Cricket (@englandcricket) August 25, 2021
Advertisement
ಕೆಎಲ್ ರಾಹುಲ್ 0, ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ರಿಷಭ್ ಪಂತ್ 2, ರವೀಂದ್ರ ಜಡೇಜಾ 4, ಮೊಹಮ್ಮದ್ ಶಮಿ 0, ಇಶಾಂತ್ ಶರ್ಮಾ ಔಟಾಗದೇ 8, ಜಸ್‍ಪ್ರೀತ್ ಬುಮ್ರಾ 0, ಮೊಹಮ್ಮದ್ ಸಿರಾಜ್ 3 ರನ್ ಗಳಿಸಿ ಔಟಾದರು.
ಜೇಮ್ಸ್ ಆಂಡರ್ಸನ್ ಮತ್ತು ಕ್ರೇಗ್ ಓವರ್ಟನ್ ತಲಾ ಮೂರು ವಿಕೆಟ್ ಪಡೆದರೆ, ಒಲಿ ರಾಬಿನ್‍ಸನ್ ಮತ್ತು ಸ್ಯಾಮ್ ಕರ್ರನ್ ತಲಾ 2 ವಿಕೆಟ್ ಪಡೆದರು.