ಚೆನ್ನೈ: ತಿಲಕ್ ವರ್ಮಾ ಜವಾಬ್ದಾರಿಯುತ ಆಟದಿಂದ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಗೆ (India vs England) 2 ವಿಕೆಟ್ಗಳ ಜಯ ಸಿಕ್ಕಿದೆ. ಆ ಮೂಲಕ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಕಾಯ್ದುಕೊಂಡಿದೆ.
ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ – ಇಂಗ್ಲೆಂಡ್ (India vs England) ನಡುವಿನ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 166 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 19.2 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿ ಜಯಗಳಿಸಿತು.
Advertisement
Advertisement
ಭಾರತದ ಪರ ತಿಲಕ್ ವರ್ಮ 55 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 72 ರನ್ ಕಲೆಹಾಕಿದರು. ವಾಷಿಂಗ್ಟನ್ ಸುಂದರ್ 19 ಎಸೆತಗಳಲ್ಲಿ 26, ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮಾ ತಲಾ 12, ರನ್ ಕಲೆ ಹಾಕಿದರು. ಉಳಿದ ಆಟಗಾರರು ಒಂದಂಕಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಮರಳಿದರು.
Advertisement
Advertisement
ಇಂಗ್ಲೆಂಡ್ ತಂಡ ನಿಗದಿತ ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ಮೊದಲು ಬ್ಯಾಟಿಂಗ್ ಮಾಡಿದ ನಾಯಕ ಬಟ್ಲರ್ 30 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ 45 ರನ್ಗಳಿಸಿ ತಂಡಕ್ಕೆ ನೆರವಾದರು. ಮೊದಲ ಪಂದ್ಯದಂತೆ ಎರಡನೇ ಟಿ20 ಪಂದ್ಯದಲ್ಲೂ ಇಂಗ್ಲೆಂಡ್ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಆಗಮಿಸಿದ್ದ ಫಿಲ್ ಸಾಲ್ಟ್ 4 ಹಾಗೂ ಬೆನ್ ಡಕೆಟ್ 3 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಸಾಲ್ಟ್ ಮತ್ತೊಮ್ಮೆ ಅರ್ಷದೀಪ್ಗೆ ವಿಕೆಟ್ ಒಪ್ಪಿಸಿದರೆ, ಡಕೆಟ್ ಲೋಕಲ್ ಬಾಯ್ ವಾಷಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ಜುರೆಲ್ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು.
ಅಟ್ಕಿನ್ಸನ್ ಬದಲಿಗೆ ಅವಕಾಶ ಪಡೆದಿದ್ದ ವೇಗದ ಬೌಲರ್ ಬ್ರಿಡನ್ ಕೇರ್ಸ್ 17 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ಸಹಿತ 31 ರನ್ಗಳಿಸಿ ರನ್ಔಟ್ ಆದರು. ಕೊನೆಯಲ್ಲಿ ಆರ್ಚರ್ ಅಜೇಯ 12, ರಶೀದ್ 10, ಮಾರ್ಕ್ ವುಡ್ 5 ರನ್ಗಳಿಸಿದರು.
ಭಾರತದ ಪರ ವರುಣ್ ಚಕ್ರವರ್ತಿ 38ಕ್ಕೆ 2 ವಿಕೆಟ್, ಅಕ್ಷರ್ ಪಟೇಲ್ 32ಕ್ಕೆ2, ಹಾರ್ದಿಕ್ ಪಾಂಡ್ಯ 6ಕ್ಕೆ1, ಅರ್ಷದೀಪ್ ಸಿಂಗ್ 40ಕ್ಕೆ1 ಹಾಗೂ ಅಭಿಷೇಕ್ ಶರ್ಮಾ 12ಕ್ಕೆ1 ವಿಕೆಟ್ ಪಡೆದು ಮಿಂಚಿದರು.