ಲಂಡನ್: ಇಂಗ್ಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯವನ್ನು ಭಾರತ 49 ರನ್‍ಗಳಿಂದ ಜಯಗಳಿಸಿದೆ. ಈ ಮೂಲಕ ಒಂದು ಪಂದ್ಯ ಇರುವಂತೆಯೇ ಸರಣಿಯನ್ನು 2-0 ಅಂತರದಿಂದ ಜಯಗಳಿಸಿದೆ.
ಗೆಲ್ಲಲು 170 ರನ್‍ಗಳ ಗುರಿಯನ್ನು ಪಡೆದ ಇಂಗ್ಲೆಂಡ್ 17 ಓವರ್ ಗಳಲ್ಲಿ 121 ರನ್‍ಗಳಿಗೆ ಆಲೌಟ್ ಆಯ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ(31) ಗ್ಲೀಸನ್ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಆದರೆ, ಏಕಾಂಗಿಯಾಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾ 46ರನ್ ಗಳಿಕೆ ಮಾಡಿ ಅಜೇಯರಾಗಿ ಉಳಿದರು. ಇವರಿಗೆ ಹರ್ಷಲ್ ಪಟೇಲ್(12) ಸಾಥ್ ನೀಡಿದರು. ಒಟ್ಟಾರೆಯಾಗಿ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 170 ರನ್‍ಗಳನ್ನು ಕಲೆ ಹಾಕಿತ್ತು. ಇಂಗ್ಲೆಂಡ್ ಪರವಾಗಿ ಗ್ಲೀಸನ್ 15 ರನ್‌ಗೆ ಮೂರು ವಿಕೆಟ್ ಪಡೆದರೆ, ಜೋರ್ಡಾನ್ 27 ರನ್‌ಗೆ ನಾಲ್ಕು ವಿಕೆಟ್ ಗಳಿಸಿದರು. ಇದನ್ನೂ ಓದಿ: ಸರಣಿ ಗೆಲ್ಲುವ ತವಕದಲ್ಲಿ ರೋಹಿತ್ ಪಡೆ – ತಂಡಕ್ಕೆ ಮರಳಿದ ಕೊಹ್ಲಿ, ಜಡೇಜಾ, ಬುಮ್ರಾ
Advertisement
Advertisement
ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಇಂಗ್ಲೆಂಡ್ ಮೊದಲ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡು ತೀವ್ರ ಆಘಾತಕ್ಕೆ ಒಳಗಾಯಿತು. ನಂತರದಲ್ಲಿ ತನ್ನೆಲ್ಲಾ ವಿಕೆಟ್‍ನ್ನು ಕಳೆದುಕೊಂಡು 121 ರನ್‌ಗಳಿಸಿ ಸೋಲು ಒಪ್ಪಿಕೊಂಡಿತು. ಭುವನೇಶ್ವರ ಕುಮಾರ್ 3, ಬುಮ್ರಾ ಹಾಗೂ ಚಾಹಲ್ 2 ಹಾಗೂ ಹಾರ್ದಿಕ್ ಪಾಂಡ್ಯ, ಹರ್ಷದ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು. ಇದನ್ನೂ ಓದಿ: ರಿಮೋಟ್ ಕಂಟ್ರೋಲ್ ಕಾರ್ ಮೂಲಕ ಗ್ರೌಂಡ್‌ಗೆ ಪ್ರವೇಶಿಸಿತು ಕ್ರಿಕೆಟ್ ಚೆಂಡು