ಹ್ಯಾಮಿಲ್ಟನ್: ಗೆಲ್ಲಲೇ ಬೇಕಾದ ಮಹತ್ವದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಇದರ ಫಲಿತಾಂಶವಾಗಿ ಬಾಂಗ್ಲಾದೇಶ ವಿರುದ್ಧ 110 ರನ್‍ಗಳ ಜಯ ಗಳಿಸಿದೆ.
Advertisement
ಗೆಲ್ಲಲು 230 ರನ್‍ಗಳ ಟಾರ್ಗೆಟ್ ಪಡೆದ ಬಾಂಗ್ಲಾ ತಂಡಕ್ಕೆ ಭಾರತದ ಬೌಲರ್‌ಗಳು ಆರಂಭದಿಂದಲೇ ಶಾಕ್ ನೀಡಲು ಆರಂಭಿಸಿದರು. ಪರಿಣಾಮ ಬಾಂಗ್ಲಾದೇಶ 43.3 ಓವರ್‌ಗಳಲ್ಲಿ 119ಕ್ಕೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿದೆ. ಇದನ್ನೂ ಓದಿ: ಧೋನಿಯ ನಂಬಿಕಸ್ಥ ಬೌಲರ್, 2014ರ ಪರ್ಪಲ್ ಕ್ಯಾಪ್ ವಿನ್ನರ್ – ಇದೀಗ ನೆಟ್ ಬೌಲರ್!
Advertisement
ಬಾಂಗ್ಲಾದೇಶ ಪರ ಮುರ್ಷಿದಾ ಖಾತುನ್ 19 ರನ್ (54 ಎಸೆತ, 1 ಬೌಂಡರಿ, 1 ಸಿಕ್ಸ್), ಲತಾ ಮೊಂಡಲ್ 24 ರನ್ (46 ಎಸೆತ, 2 ಬೌಂಡರಿ) ಮತ್ತು ಸಲ್ಮಾ ಖಾತುನ್ 32 ರನ್ (35 ಎಸೆತ, 4 ಬೌಂಡರಿ) ಹೊರತು ಪಡಿಸಿ ಬೇರೆ ಯಾವೊಬ್ಬ ಬ್ಯಾಟರ್‌ಗಳಿಂದಲೂ ಉತ್ತಮ ಆಟ ಆಡಲು ಸಾಧ್ಯವಾಗಲಿಲ್ಲ. ಭಾರತದ ಬೌಲರ್‌ಗಳ ಬಿಗಿ ದಾಳಿಯ ಮುಂದೆ ಪೆವಿಲಿಯನ್ ಪರೇಡ್ ನಡೆಸಿದ ಬಾಂಗ್ಲಾ ಬ್ಯಾಟರ್‌ಗಳ ಪೈಕಿ ಕೊನೆಯಲ್ಲಿ ರಿತು ಮೋನಿ 16 ರನ್ ಸಿಡಿಸಿ ಔಟ್ ಆಗುವುದರೊಂದಿಗೆ ಅಂತಿಮವಾಗಿ 43.3 ಓವರ್‌ಗಳಲ್ಲಿ 119 ರನ್‍ಗಳಿಗೆ ಗಂಟುಮೂಟೆ ಕಟ್ಟಿತು.
Advertisement
Advertisement
ಭಾರತದ ಪರ ಸ್ನೇಹ ರಾಣಾ 4 ವಿಕೆಟ್ ಕಿತ್ತು ಮಿಂಚಿದರೆ, ಪೂಜಾ ವಸ್ತ್ರಕರ್ ಮತ್ತು ಜೂಲನ್ ಗೋಸ್ವಾಮಿ ತಲಾ 2 ವಿಕೆಟ್ ಪಡೆದರು. ಉಳಿದಂತೆ ರಾಜೇಶ್ವರಿ ಗಾಯಕ್ವಾಡ್ ಮತ್ತು ಪೂನಂ ಯಾದವ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು. ಇದನ್ನೂ ಓದಿ: ಚಿನ್ನಸ್ವಾಮಿ ಪಿಚ್‍ಗೆ -1 ರೇಟಿಂಗ್ – ಐಸಿಸಿ ಅಸಮಾಧಾನ
ಟಾಸ್ ಗೆದ್ದ ಭಾರತ ತಂಡ ನಾಯಕಿ ಮಿಥಾಲಿ ರಾಜ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಂಡ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳು ಉತ್ತಮವಾಗಿ ಆಡಿದರು. ಆರಂಭಿಕರಾದ ಸ್ಮೃತಿ ಮಂಧಾನ 30 ರನ್ (51 ಎಸೆತ, 3 ಬೌಂಡರಿ), ಶಫಾಲಿ ವರ್ಮಾ 42 ರನ್ (42 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ಮೊದಲ ವಿಕೆಟ್‍ಗೆ 74 ರನ್(90 ಎಸೆತ) ಜೊತೆಯಾಟವಾಡಿದರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಆಗಮಿಸಿದ ಯಾಸ್ತಿಕಾ ಭಾಟಿಯಾ 50 ರನ್ (80 ಎಸೆತ, 2 ಬೌಂಡರಿ) ಸಿಡಿಸಿ ಮಿಂಚಿದರು. ಕೆಳ ಕ್ರಮಾಂಕದಲ್ಲಿ ರಿಚಾ ಘೋಷ್ 26 ರನ್ (36 ಎಸೆತ, 3 ಬೌಂಡರಿ), ಸ್ನೇಹ ರಾಣಾ 27 ರನ್ (23 ಎಸೆತ, 2 ಬೌಂಡರಿ) ಬಾರಿಸಿ ತಂಡಕ್ಕೆ ಆಧಾರವಾದರು. ಕೊನೆಯಲ್ಲಿ ಪೂಜಾ ವಸ್ತ್ರಕರ್ ಅಜೇಯ 30 ರನ್ (33 ಎಸೆತ, 2 ಬೌಂಡರಿ) ಚಚ್ಚಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 229 ರನ್ ಪೇರಿಸಿತು.