ನವದೆಹಲಿ: ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಮೂರು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿಗೆ ದಿನಗಣನೆ ಆರಂಭವಾಗಿದೆ. ಆದರೆ ನೆಟ್ ಅಭ್ಯಾಸದ ವೇಳೆ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು ಟೀಂ ಇಂಡಿಯಾ ನೆಟ್ ಅಭ್ಯಾಸ ನಡೆಸಿತ್ತು. ಈ ವೇಳೆ ಭಾರತದ ಥ್ರೋಡೌನ್ ಪರಿಣಿತ ನುವಾನ್ ಸೆನೆವಿರತ್ನ ಬೌಲಿಂಗ್ ಮಾಡುತ್ತಿದ್ದರು. ಚೆಂಡು ಏಕಾಏಕಿ ರೋಹಿತ್ ಶರ್ಮಾ ಕಾಲಿಗೆ ಬಡಿದ ಪರಿಣಾಮ ನೋವಿನಿಂದ ತಕ್ಷಣವೇ ಅಭ್ಯಾಸ ಮೊಟಕುಗೊಳಿಸಿ ಕ್ರೀಡಾಂಗಣದಿಂದ ಹೊರ ನಡೆದಿದ್ದಾರೆ.
Advertisement
Delhi: Indian cricket team practices at the Arun Jaitley Stadium, ahead of the 1st T20i against Bangladesh on November 3. #IndvsBan pic.twitter.com/uF8KvUrn3M
— ANI (@ANI) November 1, 2019
Advertisement
ದಿನವಿಡಿ ಅಭ್ಯಾಸದಿಂದ ರೋಹಿತ್ ಶರ್ಮಾ ಮೈದಾನದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ರೋಹಿತ್ ಶರ್ಮಾ ಬಾಂಗ್ಲಾ ವಿರುದ್ಧ ಟಿ-20 ಪಂದ್ಯಕ್ಕೆ ಅಲಭ್ಯರಾಗುತ್ತಾರಾ ಎನ್ನುವ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ.
Advertisement
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವದ ಜವಾಬ್ದಾರಿ ರೋಹಿತ್ ಶರ್ಮಾ ಹೊತ್ತುಕೊಂಡಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನವೆಂಬರ್ 3ರಂದು ಬಾಂಗ್ಲಾ ವಿರುದ್ಧದ ಮೊದಲ ಟಿ-20 ಪಂದ್ಯ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಉಭಯ ತಂಡಗಳು ನೆಟ್‍ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿವೆ.
Advertisement
ರೋಹಿತ್ ಶರ್ಮಾ ಇನ್ನೆರಡು ದಿನಗಳಲ್ಲಿ ಚೇತರಿಸಿಕೊಂಡು ಬಾಂಗ್ಲಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಅಂತ ಟೀಂ ಇಂಡಿಯಾ ತಿಳಿಸಿದೆ ಎಂದು ವರದಿಯಾಗಿದೆ.