ಢಾಕಾ: ಟೀಂ ಇಂಡಿಯಾ (Team India) ಬಾಂಗ್ಲಾದೇಶ (Bangladesh) ಪ್ರವಾಸದಲ್ಲಿದೆ. ಬಾಂಗ್ಲಾ ವಿರುದ್ಧ ಏಕದಿನ ಸರಣಿ ಆಡುತ್ತಿರುವ ನಾಯಕ ರೋಹಿತ್ ಶರ್ಮಾರ (Rohit Sharma) ಬ್ಯಾಟ್‍ನಲ್ಲಿ (Bat) ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಸೂರ್ಯ ಕುಮಾರ್ ಯಾದವ್ (Suryakumar Yadav) ಹಸ್ತಾಕ್ಷರ ಕಂಡು ಅಚ್ಚರಿ ಮೂಡಿಸಿದೆ.
Advertisement
ಸೂರ್ಯ ಕುಮಾರ್ ಯಾದವ್ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಏಕದಿನ (ODI) ಮತ್ತು ಟೆಸ್ಟ್ (Test) ಸರಣಿಯಲ್ಲಿ ಆಡುತ್ತಿಲ್ಲ. ಈ ನಡುವೆ ರೋಹಿತ್ ಬ್ಯಾಟ್‍ನಲ್ಲಿ ಎಸ್.ಕೆ ಯಾದವ್ ಎಂದು ಸಹಿ ಮಾಡಿರುವುದು ಕುತೂಹಲ ಮೂಡಿಸಿದೆ. ಈ ನಡುವೆ ರೋಹಿತ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಬಳಸುತ್ತಿದ್ದಾರಾ? ರೋಹಿತ್ ಬ್ಯಾಟ್‍ನಲ್ಲಿ ಏಕೆ ಸೂರ್ಯ ಕುಮಾರ್ ಯಾದವ್ ಹೆಸರಿದೆ ಎಂಬ ಕುರಿತು ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಶಿಫಾಲಿ ಇದೀಗ U19 ಕ್ಯಾಪ್ಟನ್!
Advertisement
Advertisement
ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಸೂರ್ಯ ಕುಮಾರ್ ಯಾದವ್ ಸಹಿಯಿರುವ ಬ್ಯಾಟ್ ಮಾಡಿದ್ದರು. ಆದರೆ ರೋಹಿತ್ ಆಟ 27 ರನ್ (31 ಎಸೆತ, 4 ಬೌಂಡರಿ, 1 ಸಿಕ್ಸ್) ಸೀಮಿತವಾಯಿತು. ಈ ನಡುವೆ ಎಲ್ಲರ ಗಮನ ಸೆಳೆದಿದ್ದು, ರೋಹಿತ್ ಬ್ಯಾಟ್‌ನಲ್ಲಿದ್ದ ಸೂರ್ಯನ ಹಸ್ತಾಕ್ಷರ. ಟಿ20 ವಿಶ್ವಕಪ್‍ನಲ್ಲಿ ಜೊತೆಯಾಗಿ ಆಡಿದ್ದ ರೋಹಿತ್ ಮತ್ತು ಸೂರ್ಯ ಆ ಬಳಿಕ ನಡೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ರೋಹಿತ್ ಆಡಿರಲಿಲ್ಲ. ಇದೀಗ ಬಾಂಗ್ಲಾ ಸರಣಿಯಲ್ಲಿ ಸೂರ್ಯ ಕುಮಾರ್ ಆಡುತ್ತಿಲ್ಲ.
Advertisement
ಸೂರ್ಯ ಕುಮಾರ್ ಭರ್ಜರಿ ಫಾರ್ಮ್‍ನಲ್ಲಿದ್ದು, ರನ್ ಪ್ರವಾಹವನ್ನೇ ಹರಿಸುತ್ತಿದ್ದಾರೆ. ಆದರೆ ಇತ್ತ ರೋಹಿತ್ ಶರ್ಮಾ ಸತತ ವೈಫಲ್ಯ ಅನುಭವಿಸುತ್ತಿದ್ದು, ನಾಯಕತ್ವದ ಹೊರೆಯೊಂದಿಗೆ ಆಡುತ್ತಿರುವಂತೆ ಭಾಸವಾಗುತ್ತಿದೆ. ಇದನ್ನೂ ಓದಿ: ಕ್ಯಾಚ್ ಕೈಚೆಲ್ಲಿದ ಸುಂದರ್‌ಗೆ ಕೆಟ್ಟದಾಗಿ ಬೈದ ರೋಹಿತ್ – ನೆಟ್ಟಿಗರ ಆಕ್ರೋಶ
ಬಾಂಗ್ಲಾ ಮತ್ತು ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 1 ವಿಕೆಟ್‍ಗಳ ರೋಚಕ ಜಯದೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಎರಡನೇ ಏಕದಿನ ಪಂದ್ಯ ಡಿ.7 ರಂದು ಮೀರ್‌ಪುರ್‌ನಲ್ಲಿ ನಡೆಯಲಿದೆ.