– ದಿಗ್ಗಜ ಅನಿಲ್ ಕುಂಬ್ಳೆ ದಾಖಲೆ ಮುರಿದ ಅಶ್ವಿನ್
ಕಾನ್ಪುರ: ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ (Ind vs Ban) ತಂಡಗಳು ಕಾದಾಟ ನಡೆಸುತ್ತಿವೆ. ಮಳೆಯ ಕಾಟದಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ 2ನೇ ಟೆಸ್ಟ್ ಪಂದ್ಯದ (Test Cricket Match) ಮೊದಲ ದಿನ ಕೇವಲ 35 ಓವರ್‌ಗಳಿಗೆ ಮುಕ್ತಾಯಗೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಮೊದಲ ದಿನದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದೆ.
Advertisement
ಕಾನ್ಪುರದ (Kanpur) ಗ್ರೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯಕ್ಕೆ ಮಳೆಯ ಕಾಟದಿಂದಾಗಿ ಟಾಸ್ ತಡವಾಯಿತು. ಜೊತೆಗೆ ಮೊದಲ ದಿನದಾಟವನ್ನು ಕೇವಲ 35 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡ 26 ರನ್‌ಳಿಗೆ ಮೊದಲ ವಿಕೆಟ್ ಪಡೆದರೂ ಬಳಿಕ ಮೊಮಿನುಲ್ ಹಕ್, ನಾಯಕ ನಜ್ಮುಲ್ ಹೊಸೈನ್ ಸ್ಯಾಂಟೋ (Najmul Hossain Shanto) ಅವರ ಸಾಧಾರಣ ಬ್ಯಾಟಿಂಗ್ ಪ್ರದರ್ಶನದಿಂದ 100 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ವೆಸ್ಟ್ ಇಂಡೀಸ್ ಆಲ್‌ರೌಂಡರ್ ಡ್ವೇನ್ ಬ್ರಾವೋ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ
Advertisement
Advertisement
ಶಾದ್ಮಾನ್ ಇಸ್ಲಾಂ 24 ರನ್ ಗಳಿಸಿದ್ರೆ, ಸ್ಯಾಂಟೋ 31 ರನ್ ಗಳಿಸಿ ಔಟಾದರು. ಮತ್ತೊಬ್ಬ ಆರಂಭಿಕ ಝಾಕಿರ್ ಹಸನ್ ಶೂನ್ಯ ಸುತ್ತಿದರು. ಇನ್ನೂ 81 ಎಸೆತಗಳಲ್ಲಿ 40 ರನ್ ಗಳಿಸಿರುವ ಮೊಮಿನುಲ್ ಹಕ್ ಮತ್ತು ಮುಶ್ಫಿಕರ್ ರಹೀಮ್ 6 ರನ್ ಗಳಿಸಿದ್ದು, ಕ್ರೀಸ್‌ನಲ್ಲಿದ್ದಾರೆ. ಶನಿವಾರ 2ನೇ ದಿನದಾಟ ಮುಂದುವರಿಸಲಿದ್ದಾರೆ.
Advertisement
ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಪಡೆದು ದಿಗ್ಗಜರ ಎಲೈಟ್ ಪಟ್ಟಿ ಸೇರಿದ್ದ ಆರ್. ಅಶ್ವಿನ್ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಪಡೆದರೆ, ವೇಗಿ ಆಕಾಶ್ ದೀಪ್ 2 ವಿಕೆಟ್ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ?
ದಿಗ್ಗಜ ಅನಿಲ್ ಕುಂಬ್ಳೆ ದಾಖಲೆ ಮುರಿದ ಅಶ್ವಿನ್:
ಬಾಂಗ್ಲಾ ನಾಯಕ ನಜ್ಮುಲ್ ಹುಸೇನ್ ಸ್ಯಾಂಟೋ ಅವರ ವಿಕೆಟ್ ಔಟ್ ಮಾಡಿದ ಭಾರತದ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರು ಏಷ್ಯಾದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸ್ಪಿನ್ ದಿಗ್ಗಜ ಅನಿಲ್ ಕಂಬ್ಳೆಯನ್ನು ಹಿಂದಿಕ್ಕಿದ್ದಾರೆ. ಆರ್ ಅಶ್ವಿನ್ ಎಸೆದ 29ನೇ ಓವರ್‌ನ ಕೊನೆಯ ಎಸೆತವನ್ನು ಅರಿಯುವಲ್ಲಿ ವಿಫಲರಾದ ಸ್ಯಾಂಟೋ ಚೆಂಡನ್ನು ಪ್ಯಾಡ್ ಮೇಲೆ ತಾಗಿಸಿಕೊಂಡರು. ಆ ಮೂಲಕ ಎಲ್‌ಬಿಡಬ್ಲ್ಯು ಔಟ್‌ಗೆ ತುತ್ತಾದರು. ಇದರೊಂದಿಗೆ ಅಶ್ವಿನ್ ಅವರು ಏಷ್ಯಾ ನೆಲದಲ್ಲಿ 420 ಟೆಸ್ಟ್ ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ 419 ವಿಕೆಟ್‌ಗಳನ್ನು ಕಬಳಿಸಿದ್ದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ.