ಢಾಕಾ: 3ನೇ ಏಕದಿನ ಪಂದ್ಯದಲ್ಲಿ (India vs Bangladesh 3rd ODI) ಬಾಂಗ್ಲಾದೇಶ ತಂಡವನ್ನು ಭಾರತ 227 ರನ್‌ಗಳಿಂದ ಸೋಲಿಸಿದೆ. ಆದರೆ ಬಾಂಗ್ಲಾದೇಶ ಏಕದಿನ ಸರಣಿ ಗೆದ್ದು ಬೀಗಿದೆ.
Advertisement
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಉತ್ತಮ ಶುಭಾರಂಭ ನೀಡಿತು. ಆರಂಭಿಕನಾಗಿ ಕಣಕ್ಕಿಳಿದ ಇಶಾನ್ ಕಿಶನ್ (Ishan Kishan) ಆರಂಭದಿಂದಲೇ ಅಬ್ಬರಿಸಿ, ಸಿಕ್ಸರ್-ಬೌಂಡರಿಗಳ 210 (131) ಸಿಡಿಸಿದರು. ಕೊಹ್ಲಿ (Virat Kohli) ಕೂಡ 113 (91) ರನ್ ಗಳಿಸಿದ್ದರು. ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿತ್ತು. ಬೌಲಿಂಗ್‌ನಲ್ಲಿ ಮೋಡಿ ಮಾಡಿದ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದರೆ, ಅಕ್ಸರ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಇಶಾನ್ ಕಿಶನ್ ಸ್ಫೋಟಕ ದ್ವಿಶತಕ
Advertisement
Advertisement
ಇದನ್ನು ಬೆನ್ನುಹತ್ತಿದ ಬಾಂಗ್ಲಾ ಪಡೆ 34 ಓವರ್‌ಗಳಲ್ಲಿ 182ರನ್‌ಗಳಿಗೆ ಸರ್ವ ಪತನ ಕಂಡಿತು. ಭಾರತಕ್ಕೆ ದಕ್ಕಿದ ಮೂರನೇ ಅತಿದೊಡ್ಡ ಗೆಲುವು ಇದಾಗಿದೆ. ಮೂರು ಪಂದ್ಯಗಳ ಸರಣಿಯನ್ನು ಬಾಂಗ್ಲಾದೇಶ 1-2 ರಲ್ಲಿ ಅಂತರದಲ್ಲಿ ಗೆದ್ದುಕೊಂಡಿದೆ.