ನೀವು ಬಯಸಿದ್ದನ್ನು ಪಡೆದಿದ್ದೀರಿ: ಮೈದಾನದಲ್ಲೇ ಕೊಹ್ಲಿಗೆ ಮಯಾಂಕ್ ಸಂದೇಶ

Public TV
2 Min Read
Virat Mayank

ಇಂದೋರ್: ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ಪಂದ್ಯದ ವೇಳೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಮಯಾಂಕ್ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಸಂಭಾಷಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಯಾಂಕ್ ಅಗರ್ವಾಲ್ ಶುಕ್ರವಾರ ತಮ್ಮ ವೃತ್ತಿಜೀವನದ 8ನೇ ಟೆಸ್ಟ್ ನಲ್ಲಿ ಎರಡನೇ ಬಾರಿಗೆ ದ್ವಿಶತಕ ಸಿಡಿಸಿದ್ದಾರೆ. ಮಯಾಂಕ್ 330 ಎಸೆತಗಳಲ್ಲಿ 243 ರನ್ ಗಳಿಸಿದರೆ, ಅಜಿಂಕ್ಯ ರಹಾನೆ 86 ರನ್, ಚೇತೇಶ್ವರ ಪೂಜಾರ 54 ರನ್ ಮತ್ತು ರವೀಂದ್ರ ಜಡೇಜಾ ಅಜೇಯ 60 ರನ್ ಗಳಿಸಿದರು. ಈ ಮೂಲಕ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡಿದೆ. ಇದನ್ನೂ ಓದಿ: ಆರು ತಿಂಗಳ ಬಳಿಕ ನೆಟ್‍ ಅಭ್ಯಾಸದಲ್ಲಿ ಕಾಣಿಸಿಕೊಂಡ ಧೋನಿ: ವಿಡಿಯೋ

Mayank agarwal 1

234 ಎಸೆತಗಳಲ್ಲಿ 150 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್, ಡ್ರೆಸ್ಸಿಂಗ್ ಕೋಣೆಯ ಕಡೆಗೆ ಸನ್ನೆ ಮಾಡಿ ಏನು ಮಾಡಲಿ ಎಂದು ವಿರಾಟ್ ಕೊಹ್ಲಿಗೆ ಕೇಳಿದರು. ಆಗ ಕೊಹ್ಲಿ ಶತಕವನ್ನು ಡಬಲ್ ಸೆಂಚುರಿಯನ್ನಾಗಿ ಪರಿವರ್ತಿಸಿ ಎಂದು ಪ್ರೋತ್ಸಾಹ ನೀಡಿದರು. ನಾಯಕನ ಸಲಹೆಗೆ ಓಕೆ ಎಂದ ಮಯಾಂಕ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು.

ಮಯಾಂಕ್ 303 ಎಸೆತ ಎದುರಿಸಿ ಸಿಕ್ಸರ್ ಸಿಡಿಸಿ 202 ರನ್ ಗಳಿಸಿದರು. ಈ ವೇಳೆ ಸಂಭ್ರಮದಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಕಡೆಗೆ ಕೈ ಸನ್ನೆ ಮಾಡಿದ ಮಯಾಂಕ್, ನೀವು ಬಯಸಿದ್ದನ್ನು ಪಡೆದಿದ್ದೀರಿ ಎಂದು ತಿಳಿಸಿದರು. ಆಗ ಸೂಪರ್ ಎನ್ನುತ್ತ ಕೊಹ್ಲಿ, ತ್ರಿಶತಕಕ್ಕೆ ಪ್ರಯತ್ನಿಸಿ ಎಂದು ಹುರಿದುಂಬಿಸಿದರು.

https://www.instagram.com/p/B44gR4hgObb/?utm_source=ig_embed

ಐದು ಇನ್ನಿಂಗ್ಸ್ ಗಳಲ್ಲಿ 2ನೇ ದ್ವಿಶತಕ:
ಭಾರತದ ಆರಂಭಿಕ ಆಟಗಾರ ಮಾಯಾಂಕ್ ಕಳೆದ ಐದು ಇನ್ನಿಂಗ್ಸ್‍ಗಳಲ್ಲಿ ಎರಡೂ ಡಬಲ್ ಶತಕಗಳನ್ನು ಗಳಿಸಿದ್ದಾರೆ. ಈ ವರ್ಷದ ಅಕ್ಟೋಬರ್ ನಲ್ಲಿ ವಿಶಾಖಪಟ್ಟಣಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಾಯಾಂಕ್ ದ್ವಿಶತಕ ಸಿಡಿಸಿದ್ದರು. ಮಯಾಂಕ್ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲಿ ಎರಡೂ ದ್ವಿಶತಕಗಳನ್ನು ತವರು ನೆಲದಲ್ಲಿಯೇ ಗಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ದಾಖಲೆಯನ್ನು ಮುರಿದಿದ್ದಾರೆ. ಡಾನ್ ಬ್ರಾಡ್ಮನ್ 13 ಇನ್ನಿಂಗ್ಸ್ ಗಳಲ್ಲಿ ಎರಡು ದ್ವಿಶತಕ ಸಾಧನೆ ಮಾಡಿದರೆ, ಮಯಾಂಕ್ 12 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Mayank agarwal 3

Share This Article
Leave a Comment

Leave a Reply

Your email address will not be published. Required fields are marked *