ಚೆನ್ನೈ: ಟೀಂ ಇಂಡಿಯಾ (Team India), ಬಾಂಗ್ಲಾದೇಶದ (Bangladesh) ನಡುವಿನ ಮೊದಲ ಟೆಸ್ಟ್ ಪಂದ್ಯದ (Test Cricket) ಎರಡನೇ ದಿನ ಒಟ್ಟು 17 ವಿಕೆಟ್ ಪತನಗೊಂಡಿದೆ. ಎರಡನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಳೆದುಕೊಂಡರೂ ಭಾರತ 308 ರನ್ಗಳ ಭರ್ಜರಿ ಮುನ್ನಡೆ ಸಾಧಿಸಿದೆ.
ಮೊದಲ ದಿನ 339 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ಆ ಮೊತ್ತಕ್ಕೆ 37 ರನ್ ಸೇರಿಸಿ ಅಂತಿಮವಾಗಿ 91.2 ಓವರ್ಗಳಲ್ಲಿ 376 ರನ್ಗಳಿಗೆ ಆಲೌಟ್ ಅಯ್ತು.
Advertisement
ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾಗೆ ಭಾರತದ ಬೌಲರ್ಗಳು ಆರಂಭದಿಂದಲೇ ಕಾಡಲು ಆರಂಭಿಸಿದರು. ಅಂತಿಮವಾಗಿ 47.1 ಓವರ್ಗಳಲ್ಲಿ 149 ರನ್ಗಳಿಗೆ ಬಾಂಗ್ಲಾ ಸರ್ವಪತನ ಕಂಡಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 23 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 81 ರನ್ಗಳಿಸಿತು. ಇದನ್ನೂ ಓದಿ: Tirupati Laddu Row | ಟಿಟಿಡಿ ಲಡ್ಡು ತಯಾರಿಕೆಗೆ ಪ್ರಮಾಣಿಕೃತ ತುಪ್ಪವನ್ನೇ ಬಳಸಲಾಗಿದೆ: ಜಗನ್ ಸ್ಪಷ್ಟನೆ
Advertisement
Advertisement
ಗುರುವಾರ ಔಟಾಗದೇ ಉಳಿದಿದ್ದ ಜಡೇಜಾ 86 ರನ್, ಅಶ್ವಿನ್ (Ashwin) 113 ರನ್, ಆಕಾಶ್ ದೀಪ್ 17 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ವಿಶ್ವ ಸ್ನೂಕರ್ ಚಾಂಪಿಯನ್ಶಿಪ್: ಕಂಚಿನ ಪದಕಕ್ಕೆ ಮುತ್ತಿಟ್ಟ ಚಿನ್ನದ ನಾಡಿನ ಯುವತಿ
Advertisement
ಆರಂಭದಿಂದಲೇ ಕುಸಿತ:
ಮೊದಲ ಓವರ್ನಿಂದಲೇ ಬಾಂಗ್ಲಾದ ವಿಕೆಟ್ ಪತನ ಆರಂಭವಾಯಿತು. ಆರಂಭಿಕ ಆಟಗಾರ ಶಾದಂ ಇಸ್ಲಾಂ 2 ರನ್ ಹೊಡೆದು ಬುಮ್ರಾಗೆ ಬೌಲ್ಡ್ ಆದರು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 32 ರನ್ , ಮೆಹ್ದಿ ಹಸನ್ 27 ರನ್, ಲಿಟ್ಟನ್ ದಾಸ್ 22 ರನ್ ಹೊಡೆದು ಔಟಾದರು. ಬುಮ್ರಾ 4 ವಿಕೆಟ್ ಕಿತ್ತರೆ, ಸಿರಾಜ್, ಆಕಾಶ್ ದೀಪ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.
ಮೂರು ವಿಕೆಟ್ ಪತನ: ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತದ ಮೂವರು ಬ್ಯಾಟ್ಸ್ಮನ್ಗಳು ಪೆವಿಲಿಯನ್ ಸೇರಿದ್ದಾರೆ. ಯಶಸ್ವಿ ಜೈಸ್ವಾಲ್ 10 ರನ್, ರೋಹಿತ್ ಶರ್ಮಾ 5 ರನ್, ವಿರಾಟ್ ಕೊಹ್ಲಿ 17 ರನ್ ಹೊಡೆದು ಔಟಾಗಿದ್ದಾರೆ. ಶುಭಮನ್ ಗಿಲ್ ಔಟಾಗದೇ 33 ರನ್, ರಿಷಭ್ ಪಂತ್ ಔಟಾಗದೇ 12 ರನ್ ಹೊಡೆದು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
17 ವಿಕಟ್ ಪತನ:
ಇದೇ ಮೊದಲ ಬಾರಿಗೆ ಚೇಪಾಕ್ ಮೈದಾನದಲ್ಲಿ 17 ವಿಕೆಟ್ ಪತನವಾಗಿದೆ. ಮೊದಲ ಅವಧಿಯಲ್ಲಿ 7, ಎರಡನೇ ಅವಧಿಯಲ್ಲಿ 5, ಮೂರನೇ ಅವಧಿಯಲ್ಲಿ 5 ವಿಕೆಟ್ ಪತನಗೊಂಡಿದೆ.