ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ICC World Test Championship) ಬುಧವಾರದಿಂದ ಆರಂಭವಾಗಲಿದ್ದು ಲಂಡನ್‌ನ ಓವಲ್‌ನಲ್ಲಿ ಭಾರತ (India) ಮತ್ತು ಆಸ್ಟ್ರೇಲಿಯಾ (Australia) ಮಧ್ಯೆ ಸೆಣಸಾಟ ನಡೆಯಲಿದೆ.
ಎರಡು ವರ್ಷಗಳ ಹಿಂದೆ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಭಾರತ ಈ ಬಾರಿ ಕಪ್ ಗೆಲ್ಲುವತ್ತ ಪಣ ತೊಟ್ಟಿದೆ. ಜೂನ್ 7 ರಿಂದ ಜೂನ್ 11 ರವರೆಗೆ ನಡೆಯಲಿರುವ ಪಂದ್ಯದಲ್ಲಿ ಫಲಿತಾಂಶ ಬಾರದೇ ಇದ್ದಲ್ಲಿ ಡ್ರಾದಲ್ಲಿ ಕೊನೆಯಾಗಲಿದೆ. ಇದನ್ನೂ ಓದಿ: ಕೊನೆಯಲ್ಲಿ ಜಡೇಜಾ ಸಿಕ್ಸರ್, ಬೌಂಡರಿ – ಆ ರಾತ್ರಿ ನನಗೆ ನಿದ್ರೆಯೇ ಬರಲಿಲ್ಲ: ಮೋಹಿತ್ ಶರ್ಮಾ
ಒಂದು ವೇಳೆ ಪಂದ್ಯಕ್ಕೆ ಮಳೆ (Rain) ಅಡ್ಡಿ ಪಡಿಸಿದರೆ ಆರನೇ ದಿನವನ್ನು ಮೀಸಲಾಗಿ (Reserve Day) ಇಡಲಾಗಿದೆ. ಆರನೇ ದಿನವೂ ಫಲಿತಾಂಶ ಪ್ರಕಟವಾಗದೇ ಇದ್ದರೆ ಡ್ರಾದಲ್ಲಿ ಪಂದ್ಯ ಅಂತ್ಯ ಕಾಣಲಿದೆ.
ಡ್ರಾದಲ್ಲಿ (Draw) ಕೊನೆಯಾದರೆ ಟ್ರೋಫಿಯನ್ನು ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ಹಂಚಿಕೊಳ್ಳುತ್ತವೆ. ಎರಡು ತಂಡಗಳು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ. ಪಂದ್ಯ ಟೈ ಆಗಿ ಅಂತ್ಯಗೊಂಡರೂ ಟ್ರೋಫಿಯನ್ನು ಎರಡೂ ತಂಡಗಳು ಹಂಚಿಕೊಳ್ಳುತ್ತವೆ.
ಬೇರೆ ಟೂರ್ನಿಗಳಲ್ಲಿ ಬೌಂಡರಿ ಲೆಕ್ಕಾಚಾರ, ಸೂಪರ್ ಓವರ್ ಅಥವಾ ಲೀಗ್ ಪಂದ್ಯಗಳ ಅಂಕಗಳ ಆಧಾರದಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ. ಆದರೆ WTC ಫೈನಲ್‌ನಲ್ಲಿ ಇವುಗಳನ್ನು ಪರಿಗಣಿಸುವುದಿಲ್ಲ
ಮಳೆಯು ಪಂದ್ಯವನ್ನು ಕೆಡಿಸಿದರೆ, ಹವಾಮಾನ ವೈಪರೀತ್ಯ ಅಥವಾ ಮಂದ ಬೆಳಕಿನಿಂದ ಪಂದ್ಯ ಬೇಗ ಮುಗಿದರೆ ಮಾತ್ರ ಮೀಸಲು ದಿನವನ್ನು ಬಳಕೆ ಮಾಡಲಾಗುತ್ತದೆ. ಮಳೆ ಇಡಿ ದಿನ ಅಥವಾ ಹಲವು ಗಂಟೆಗಳ ಕಾಲ ಸುರಿದು ಅಡ್ಡಿ ಮಾಡಿದರೆ ಮಾತ್ರ ಮೀಸಲು ದಿನಕ್ಕೆ ಪಂದ್ಯ ಹೋಗುತ್ತದೆ.