ಹೈದರಾಬಾದ್: ಟೀಂ ಇಂಡಿಯಾದ(Team India) ಬೌಲರ್ ಜಸ್‌ಪ್ರೀತ್ ಬುಮ್ರಾ(Jasprit Bumrah ) ತಮ್ಮ ವೈಯಕ್ತಿಕ ಟಿ20 ಕ್ರಿಕೆಟ್ ಜೀವನದಲ್ಲಿ ಕೆಟ್ಟ ಸಾಧನೆ ಮಾಡಿದ್ದಾರೆ.
ಭಾನುವಾರ ಆಸ್ಟ್ರೇಲಿಯಾ(Australia) ವಿರುದ್ಧದ ಪಂದ್ಯದಲ್ಲಿ ಬುಮ್ರಾ 4 ಓವರ್ ಎಸೆದು 50 ರನ್ ಬಿಟ್ಟುಕೊಟ್ಟಿದ್ದಾರೆ. ಯಾರ್ಕರ್ ಸ್ಪೆಷಲಿಸ್ಟ್ ಆಗಿರುವ ಬುಮ್ರಾ ಯಾವುದೇ ವಿಕೆಟ್ ಪಡೆದಿರಲಿಲ್ಲ.
Advertisement
Advertisement
ಈ ಹಿಂದೆ 2016 ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2 ವಿಕೆಟ್ ಪಡೆದು 47 ರನ್ ನೀಡಿದ್ದರು. ಇದು ಇಲ್ಲಿಯವರೆಗಿನ ಬುಮ್ರಾ ಅವರ ಕೆಟ್ಟ ಸಾಧನೆಯಾಗಿತ್ತು. ಇದನ್ನೂ ಓದಿ: ಕೊಹ್ಲಿ ಜೊತೆ ಸೂರ್ಯನ ಅಬ್ಬರ – ವಿಶ್ವಚಾಂಪಿಯನ್ನರಿಗೆ ಸೋಲು, ಭಾರತಕ್ಕೆ T20 ಸರಣಿ
Advertisement
ಮೊದಲ ಓವರ್‌ನಲ್ಲಿ 17 ರನ್ ನೀಡಿದರೆ ಬುಮ್ರಾ ತಮ್ಮ ಎರಡನೇ ಓವರ್‌ನಲ್ಲಿ 9 ರನ್ ನೀಡಿದ್ದರು. ಮೂರನೇ ಓವರ್‌ನಲ್ಲಿ 6 ರನ್ ಬಂದರೆ, ನಾಲ್ಕನೇ ಓವರ್‌ನಲ್ಲಿ 18 ರನ್ ನೀಡಿದ್ದರು.
Advertisement
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು. ಭಾರತ ಇನ್ನು ಒಂದು ಎಸೆತ ಇರುವಂತೆಯೇ 187 ರನ್ ಹೊಡೆದು 6 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.
ಸೂರ್ಯಕುಮಾರ್ ಯಾದವ್ 69 ರನ್(36 ಎಸೆತ, 5 ಬೌಂಡರಿ, 5 ಸಿಕ್ಸ್), ಕೊಹ್ಲಿ 63 ರನ್(48 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾರ್ದಿಕ್ ಪಾಂಡ್ಯ ಔಟಾಗದೇ 25 ರನ್(16 ಎಸೆತ, 2 ಬೌಂಡರಿ, 1 ಸಿಕ್ಸ್) ಹೊಡೆದರು. ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ, ಅಕ್ಷರ್ ಪಟೇಲ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.