ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ ತಂಡಕ್ಕೆ ನಗದು ಬಹುಮಾನ ನೀಡದ್ದಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿಕಾರಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಯಜುವೇಂದ್ರ ಚಹಲ್ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿಗೆ 500 ಡಾಲರ್(35,600 ರೂ.) ನಗದು ಬಹುಮಾನವಾಗಿ ನೀಡಿದ್ದಾರೆ. ತಂಡದ ಆಟಗಾರರಿಗೆ ಒಂದು ಟ್ರೋಫಿ ಬಿಟ್ಟರೆ ಬೇರೆ ಏನೂ ಸಿಕ್ಕಿಲ್ಲ. ಸಂಘಟಕರು ಪ್ರಸಾರದ ಹಕ್ಕಿನಿಂದ ಸಾಕಷ್ಟು ಹಣವನ್ನು ಸಂಪಾದಿಸಿದ್ದರೂ ಆಟಗಾರರಿಗೆ ನಗದು ಬಹುಮಾನ ನೀಡಿಲ್ಲ ಯಾಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
Advertisement
Advertisement
ವಿಂಬಲ್ಡನ್ ಟೆನ್ನಿಸ್ ಟೂರ್ನಿ ನೋಡಿ ಕಲಿತುಕೊಳ್ಳಲಿ. ಹಣ ಉತ್ಪಾದನೆಯಾಗುವುದೇ ಆಟಗಾರರಿಂದ. ಹೀಗಿರುವಾಗ ಆಟಗಾರರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.
Advertisement
500 ಡಾಲರ್ ನಗದು ಬಹುಮಾನ ಸಿಕ್ಕಿದರೂ ಚಹಲ್ ಮತ್ತು ಧೋನಿ ಆ ಹಣವನ್ನು ದಾನ ನೀಡಿದ್ದಾರೆ. ವಿಂಬಲ್ಡನ್ ಟೆನ್ನಿಸ್ ನಲ್ಲಿ ಮೊದಲ ಹಂತದಲ್ಲಿ ಸೋತ ಸ್ಪರ್ಧಿಗೆ 36 ಲಕ್ಷ ರೂ. ಹಣ ಸಿಕ್ಕಿದರೆ, ಸಿಂಗಲ್ಸ್ ವಿಜೇತರು ಅಂದಾಜು 21 ಕೋಟಿ ರೂ. ನಗದು ಬಹುಮಾನವನ್ನು ಪಡೆಯುತ್ತಾರೆ.
Advertisement
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ 20 ಪಂದ್ಯ 1-1 ರಲ್ಲಿ ಸಮಬಲಗೊಂಡಿತ್ತು. ಎರಡನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಟೆಸ್ಟ್ ಸರಣಿ 2-1 ರಿಂದ ಗೆದ್ದಿದ್ದ ಭಾರತ ಈಗ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಟಿ-20 ಪಂದ್ಯದಲ್ಲಿ ಮಳೆಯಿಂದಾಗಿ ಡಕ್‍ವರ್ಥ್ ಲೂಯಿಸ್ ನಿಯಮದಿಂದ ಪರಿಷ್ಕೃತ ರನ್ ನೀಡಿದ ಪರಿಣಾಮ ಭಾರತ ಗೆಲುವಿನ ಸಮೀಪ ಬಂದು ಸೋತಿತ್ತು. ಆಸ್ಟ್ರೇಲಿಯಾ 4 ರನ್ ಗಳಿಂದ ಈ ಪಂದ್ಯವನ್ನು ಗೆದ್ದುಕೊಂಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv