ಅಹಮದಾಬಾದ್: ಬ್ಯಾಟಿಂಗ್, ಬೌಲಿಂಗ್ ಕೈಕೊಟ್ಟ ಪರಿಣಾಮ ಅಜೇಯವಾಗಿ ಫೈನಲ್ ತಲುಪಿದ್ದ ಭಾರತ (Team India) ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ (World Cup Cricket) ಸೋಲನ್ನು ಅನುಭವಿಸಿದೆ. ಸೋಲನ್ನು ಅನುಭವಿಸಿದ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ (Rohit Sharma) ಕಣ್ಣೀರಿಟ್ಟಿದ್ದಾರೆ.
ರೋಹಿತ್ ಶರ್ಮಾ ಹಲವು ಸಂದರ್ಭದಲ್ಲಿ ವಿಶ್ವಕಪ್ ಗೆಲ್ಲುವ ಬಗ್ಗೆ ಮಾತನಾಡಿದ್ದರು. ಒಬ್ಬ ಆಟಗಾರನ ಜೀವನದಲ್ಲಿ ವಿಶ್ವಕಪ್ ಗೆಲ್ಲುವುದು ದೊಡ್ಡದು ಎಂದಿದ್ದರು. ಏಷ್ಯಾ ಕಪ್ ಫೈನಲ್ ಗೆದ್ದ ಬಳಿಕ ಪಟಾಕಿ ಹೊಡೆಯಲಾಗಿತ್ತು. ಈ ವೇಳೆ ವಿಶ್ವಕಪ್ ಗೆದ್ದ ಬಳಿಕ ಪಟಾಕಿ ಹೊಡೆಯುವರಂತೆ ಎಂದು ಸುದ್ದಿಗೋಷ್ಠಿಯಲ್ಲೇ ಹೇಳಿದ್ದರು. ಇದನ್ನೂ ಓದಿ: ಕೋಚ್ ದ್ರಾವಿಡ್ ದಾಖಲೆ ಮುರಿದ ‘ರಾಹುಲ್’
Advertisement
Rohit Sharma and Virat Kohli crying is the last thing i expected from this world cup, anyone please go and give them a tight hug ????❤#INDvsAUS pic.twitter.com/qF9O4VzJ0W
— ????. (@whenvsayshii) November 19, 2023
Advertisement
ಫೈನಲ್‌ನಲ್ಲಿ ರೋಹಿತ್ ಶರ್ಮಾ 31 ಎಸೆತಗಳಲ್ಲಿ 47 ರನ್( 3 ಸಿಕ್ಸರ್, 4 ಬೌಂಡರಿ) ಸಿಡಿಸಿದ್ದರು. ಮ್ಯಾಕ್ಸ್‌ವೆಲ್ ಎಸೆತದಲ್ಲಿ ಸಿಕ್ಸ್ ಸಿಡಿಸಲು ಹೋಗಿ ರೋಹಿತ್ ಶರ್ಮಾ ಕ್ಯಾಚ್ ನೀಡಿ ಔಟಾದರು. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ
Advertisement
ಈ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ 11 ಪಂದ್ಯಗಳಿಂದ 597 ರನ್ ಸಿಡಿಸಿ ಇತಿಹಾಸ ಸೃಷ್ಟಿದ್ದಾರೆ. ಈ ಮೂಲಕ ತಂಡ ಒಂದರ ನಾಯಕನಾಗಿ ಅತಿ ಹೆಚ್ಚು ರನ್ ಸಿಡಿಸಿದ ಬ್ಯಾಟರ್ ಆಗಿ ರೋಹಿತ್ ಹೊರಹೊಮ್ಮಿದ್ದಾರೆ.
Advertisement
ಈ ಹಿಂದೆ 2019ರಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 578 ರನ್, 2007ರಲ್ಲಿ ಶ್ರೀಲಂಕಾದ ಜಯವರ್ಧನೆ 548 ರನ್, 2007 ರಲ್ಲಿ ಆಸ್ಟ್ರೇಲಿಯಾ ರಿಕ್ಕಿ ಪಾಂಟಿಂಗ್ 539 ರನ್, 2019 ರಲ್ಲಿ ಆಸ್ಟ್ರೇಲಿಯಾದ ಆರನ್ ಫಿಂಚ್ 507 ರನ್ ಹೊಡೆದಿದ್ದರು.
ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.
ನಾನು ದಾಖಲೆಗಾಗಿ ಆಡುವುದಿಲ್ಲ. ನಾನು ಬ್ಯಾಟ್ ಮಾಡಲು ಬರುವಾಗ ತಂಡದ ಸ್ಕೋರ್ ಸೊನ್ನೆ ಆಗಿರುತ್ತದೆ. ಆರಂಭಿಕ ಆಟಗಾರನಾಗಿರುವ ಕಾರಣ ನನಗೆ ತಂಡದ ಖಾತೆಯನ್ನು ತೆರೆಯಲು ಅವಕಾಶ ಸಿಗುತ್ತದೆ. ನಾನು ವೇಗವಾಗಿ ರನ್ ಗಳಿಸಿದಷ್ಟು ನಂತರ ಬರುವ ಆಟಗಾರರಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದರು.
125.94 ಸ್ಟ್ರೇಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ 1 ಶತಕ, 3 ಅರ್ಧಶತಕ, 66 ಬೌಂಡರಿ, 31 ಸಿಕ್ಸರ್ ಸಿಡಿಸಿದ್ದಾರೆ.