ಬೆಂಗಳೂರು: ಭಾರತದ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಎಂಎಸ್ ಧೋನಿ ಅವರನ್ನು ಕಳಹಿಸಿದ್ದಕ್ಕೆ ನಾಯಕ ಕೊಹ್ಲಿ ಹಾಗೂ ಟೀಮ್ ಮ್ಯಾನೆಜ್‍ಮೆಂಟ್ ತೀರ್ಮಾನದ ವಿರುದ್ಧ ಅಭಿಮಾನಿಗಳು ಟ್ವಿಟ್ಟರ್‍ನಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Advertisement
ಪಂದ್ಯದ ನಂತರ ಮಾತನಾಡಿದ ಕೊಹ್ಲಿ ಬ್ಯಾಟಿಂಗ್ ವೈಫಲ್ಯವೇ ನಮ್ಮ ಸೋಲಿಗೆ ಕಾರಣ ಎಂದು ತಿಳಿಸಿದ್ದರು. ಆದರೆ ಟೀಂ ಇಂಡಿಯಾ ಅಭಿಮಾನಿಗಳು ಭಾರತದ ಸೋಲನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿದ್ದು, ನಾಯಕ ಕೊಹ್ಲಿ ಹಾಗೂ ಟೀಮ್ ಮ್ಯಾನೆಜ್‍ಮೆಂಟ್ ತಪ್ಪು ನಿರ್ಧಾರಗಳಿಂದಲೇ ಭಾರತ ಸೋತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
Advertisement
ಬೆಸ್ಟ್ ಫಿನಿಷರ್ ಎಂದು ಕರೆಯುವ ಧೋನಿಯನ್ನು 7 ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಕಳುಹಿಸಲಾಯಿತು. ಅದು ಕೇವಲ 26 ಬಾಲ್‍ಗಳಷ್ಟೇ ಉಳಿದಿತ್ತು. ಇದರಿಂದ ಮ್ಯಾಚ್ ಗೆಲ್ಲಿಸಿಕೊಡಲು ಧೋನಿಯವರಿಂದ ಸಾಧ್ಯವಾಗಲಿಲ್ಲ.
Advertisement
ಜನ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ:
ಧೋನಿ ನಂ.11 ನಲ್ಲಿ ಬ್ಯಾಟ್ ಮಾಡಲು ಅವಕಾಶವನ್ನು ನೀಡಬೇಕು. ಏಕೆಂದರೆ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಲಭಿಸುತ್ತದೆ. ಉದಾಹರಣೆಗೆ ಉಮೇಶ್ ಯಾದವ್ 2039ರ ವಿಶ್ವ ಕಪ್‍ಗೆ ಸಿದ್ಧರಾಗಬೇಕಿದೆ ಎಂದು ಅಭಿಮಾನಿಯೊಬ್ಬರು ವ್ಯಂಗ್ಯವಾಡಿದ್ದಾರೆ.
Dhoni should come in to bat at number 11, we need to groom youngsters like Umesh Yadav for 2039 world cup. #INDvAUS
— Rofl Gandhi 2.0 ???? (@RoflGandhi_) September 28, 2017
ಕೊಹ್ಲಿ ನಂ.1 ಸ್ವಾರ್ಥಿ. ಧೋನಿಯವರಿಗೆ ಕೊನೆಯಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಿ ಮಾಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವಿರುದ್ಧ ಆರೋಪ ಮಾಡುವುದು ಸರಿಯಲ್ಲ.
https://twitter.com/Ashwin_Gour/status/913434798152024067?ref_src=twsrc%5Etfw
ಭಾರತದ ಸೋಲಿಗೆ ತಪ್ಪು ನಿರ್ಧಾರಗಳೇ ಕಾರಣ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹಾರ್ದಿಕ್ ಪಾಂಡ್ಯ ಹಾಗೂ ಮನೀಶ್ ಪಾಂಡೆ ನಡುವೆ ಪೈಪೋಟಿ ನಡೆಯುತ್ತಿದೆ.
https://twitter.com/crazyCancer_ian/status/913635524648169472?ref_src=twsrc%5Etfw
Kohli Sends MS Dhoni At no7 !! Jealous Hmm? !! Sad To Say You Are Selfish No 1.
— Alwind Khujliwal (@IAmAlwind) September 28, 2017
ಸತತ 9 ಪಂದ್ಯಗಳನ್ನು ಗೆಲ್ಲುವ ಮೂಲಕ ಅತೀ ಆತ್ಮ ವಿಶ್ವಾಸದಲ್ಲಿ ಕಣಕ್ಕೆ ಇಳಿದ ಟೀಂ ಇಂಡಿಯಾ ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ಮೊದಲ ವಿಕೆಟ್‍ಗೆ 106ರ ರನ್‍ಗಳ ಜೊತೆಯಾಟ ನೀಡಿದ ನಂತರವು 21 ರನ್ ಗಳಿಂದ ಸೋಲನ್ನು ಅನುಭವಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಹಾಗೂ ಐದನೇ ಪಂದ್ಯವು ಭಾನುವಾರ ವಿದರ್ಭ ಕ್ರೀಡಾಂಗಣದಲ್ಲಿ ನಡೆಯಲಿದೆ.