ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧದ 5 ಏಕದಿನ ಸರಣಿಯ ಕೊನೆಯ ಪಂದ್ಯ ಇಂದು ನಾಗ್ಪುರದ ವಿದರ್ಭ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ಆದರೆ ಇಂದಿನ ಪಂದ್ಯವನ್ನು ಗೆದ್ದರೆ ಭಾರತ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಇದೇ ಮೊದಲ ಬಾರಿಗೆ ಗೆದ್ದಂತಾಗುತ್ತದೆ.
ಈ ಸರಣಿಗೂ ಮುನ್ನ ಒಟ್ಟು 7 ಬಾರಿ ಭಾರತ-ಆಸೀಸ್ 5 ಅಥವಾ 5ಕ್ಕೂ ಹೆಚ್ಚು ಪಂದ್ಯಗಳ ಅಟವಾಡಿದ್ದು, ಇದರಲ್ಲಿ 2 ಬಾರಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು 2 ಬಾರಿ 3-2 ಅಂತರದಿಂದ ಸೋಲಿಸಿದೆ. ಎರಡು ಬಾರಿಯೂ ಭಾರತದಲ್ಲೇ ಸರಣಿ ಗೆದ್ದಿದೆ ಎನ್ನುವುದೇ ವಿಶೇಷ. 1986ರಲ್ಲಿ ಮೊದಲ ಬಾರಿ ಹಾಗೂ 2013ರಲ್ಲಿ 2ನೇ ಬಾರಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.
Advertisement
ಮತ್ತೆ ನಂಬರ್ 1 ಪಟ್ಟ: ಮತ್ತೊಂದು ಪ್ರಮುಖ ವಿಚಾರವೆಂದರೆ ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮತ್ತೆ ಐಸಿಸಿ ಶ್ರೇಯಾಂಕದಲ್ಲಿ ನಂ.1 ಪಟ್ಟಕ್ಕೇರಲಿದೆ. ಸೆಪ್ಟೆಂಬರ್ 24ರಂದು ಇಂದೋರ್ ನಲ್ಲಿ ನಡೆದ ಪಂದ್ಯದ ಬಳಿಕ ಟೀಂ ಇಂಡಿಯಾ ನಂಬರ್ 1 ಪಟ್ಟಕ್ಕೇರಿತ್ತು. ಆದರೆ 4ನೇ ಪಂದ್ಯವನ್ನು ಸೋತ ಹಿನ್ನೆಲೆಯಲ್ಲಿ ನಂ.2ಕ್ಕೆ ಇಳಿದಿದೆ. ಸದ್ಯ ದಕ್ಷಿಣ ಆಫ್ರಿಕಾ 119 ಅಂಕಗಳ ಜೊತೆ ನಂ.1 ಸ್ಥಾನದಲ್ಲಿದೆ. ಸಮಾನವಾದ 119 ಅಂಕಗಳೊಂದಿಗೆ ಟೀಂ ಇಂಡಿಯಾ 2ನೇ ಸ್ಥಾನದಲ್ಲಿದೆ. ಇಂದು ಭಾರತ ಪಂದ್ಯ ಗೆದ್ದರೆ ಭಾರತದ ಅಂಕ 120ಕ್ಕೆ ಏರಿಕೆಯಾಗಲಿದೆ. ಈ ಮೂಲಕ ಮತ್ತೆ ನಂಬರ್ 1 ಪಟ್ಟಕ್ಕೇರುವ ಆಸೆ ಜೀವಂತವಾಗಿದೆ.
Advertisement
Advertisement
ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಭಾರತದಲ್ಲಿ 55 ಪಂದ್ಯಗಳನ್ನಾಡಿದೆ. ಇದರಲ್ಲಿ 24 ಪಂದ್ಯಗಳಲ್ಲಿ ಟೀಂ ಇಂಡಿಯಾ ಹಾಗೂ 26 ಪಂದ್ಯಗಳಲ್ಲಿ ಆಸೀಸ್ ಗೆದ್ದಿದೆ. ಬಾಕಿ 5 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ಒಂದು ವೇಳೆ ಭಾರತ ಗೆದ್ದರೆ ಇಂಡಿಯಾದಲ್ಲಿ ಆಡಿದ ಒಟ್ಟು ಪಂದ್ಯಗಳ ಫಲಿತಾಂಶ 26-25ರ ಅಂತರಕ್ಕೆ ತಲುಪಲಿದೆ. ಆಸೀಸ್ ಹಾಗೂ ಟೀಂ ಇಂಡಿಯಾ ಇದುವರೆಗೆ ಒಟ್ಟಾರೆಯಾಗಿ 127 ಏಕದಿನ ಪಂದ್ಯಗಳನ್ನಾಡಿದ್ದು ಇದರಲ್ಲಿ ಭಾರತ 44 ಹಾಗೂ ಆಸೀಸ್ 73 ಪಂದ್ಯಗಳನ್ನು ಗೆದ್ದಿವೆ. ಒಟ್ಟು 10 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.
Advertisement
ವಿದರ್ಭ ಮೈದಾನದಲ್ಲಿ: ಇಲ್ಲಿ ಭಾರತ ಒಟ್ಟು 4 ಪಂದ್ಯಗಳನ್ನಾಡಿದ್ದು ಇದರಲ್ಲಿ 2ನ್ನು ಗೆದ್ದು 2 ಪಂದ್ಯದಲ್ಲಿ ಸೋತಿದೆ. ಆಸೀಸ್ ವಿರುದ್ಧ 2 ಪಂದ್ಯವನ್ನಾಡಿದ್ದು ಅದರಲ್ಲಿ 2 ಪಂದ್ಯದಲ್ಲಿಯೂ ಗೆದ್ದಿರುವುದು ವಿಶೇಷ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಈ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯವನ್ನಾಡಿತ್ತು. ಅಕ್ಟೋಬರ್ ತಿಂಗಳಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಗೆಲುವು ಸಾಧಿಸಿತ್ತು.
Australia win the toss and elect to bat first in the fifth and final @Paytm ODI #INDvAUS pic.twitter.com/5bhctFOpBF
— BCCI (@BCCI) October 1, 2017
IND XI: A Rahane, RG Sharma, V Kohli, K Jadhav, M Pandey, MS Dhoni, H Pandya, A Patel, B Kumar, K Yadav, J Bumrah
— BCCI (@BCCI) October 1, 2017
???? @Paytm ODI Series #INDvAUS
???? Oct 1 | ⌚ 1:30 PM IST |???? VCA Stadium
???????????????????? https://t.co/CPALMGgLOj
???? @StarSportsIndia pic.twitter.com/4gDe67vR3w
— BCCI (@BCCI) October 1, 2017
That's how the boys trained in Nagpur ahead of the fifth #INDvAUS ODI. #TeamIndia pic.twitter.com/XIPrLc79mV
— BCCI (@BCCI) September 30, 2017
Ahead of the fifth & final #INDvAUS ODI, #TeamIndia went through a rigorous training session at Vidarbha Cricket Association Stadium, Nagpur pic.twitter.com/tnGbv18TeN
— BCCI (@BCCI) September 30, 2017