ವಿಶಾಖಪಟ್ಟಣ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದ ವೇಳೆ ಸಿಂಗಲ್ ರನ್ ಗಳನ್ನು ಓಡಲು ನಿರಾಕರಿಸಿದ ಧೋನಿ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ.
ಪಂದ್ಯದ ಅಂತಿಮ 3 ಓವರ್ ಗಳನ್ನು ಎದುರಿಸಿದ ಧೋನಿ 17 ರನ್ ಮಾತ್ರ ಗಳಿಸಿದ್ದರು. ಅಲ್ಲದೇ ಈ ಹಂತದಲ್ಲಿ 1 ಬೌಂಡರಿಯನ್ನು ಸಿಡಿಸಿದ್ದರು. ಅಂತಿಮವಾಗಿ 37 ಎಸೆತಗಳಿಂದ 29 ರನ್ ಗಳಿಸಿದ್ದರು. ಟೀಂ ಇಂಡಿಯಾ ಪರ ಟಿ20 ಪಂದ್ಯದಲ್ಲಿ ಅವರ ಸ್ಟ್ರೈಕ್ ರೇಟ್ 35 ಪ್ಲಸ್ ಎಸೆತಗಳಲ್ಲಿ ಗಳಿಸಿದ 2ನೇ ಅತಿ ಕಡಿಮೆ ರನ್ ಆಗಿದ್ದು, ಪಂದ್ಯದ ಅಂತಿಮ ಓವರ್ ಗಳಲ್ಲಿ ಧೋನಿ ಮತ್ತಷ್ಟು ರನ್ ಗಳಿಸಿದ್ದರೆ ಎದುರಾಳಿ ತಂಡ ಜಯಗಳಿಸುತ್ತಿರಲಿಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
Advertisement
ಅಂತಿಮ ಮೂರು ಓವರ್ ಗಳಲ್ಲಿ 8 ಬಾರಿ ಒಂಟಿ ರನ್ ಓಡಲು ಧೋನಿ ನಿರಾಕರಿಸಿದ್ದರು. ಆದರೆ 109 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಬ್ಯಾಟಿಂಗ್ ನಡೆಸಿದ ಧೋನಿ ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳಿತ್ತು. ಆದರ ಧೋನಿ ತಂಡದ ಮೊತ್ತ ಹೆಚ್ಚಿಸಲು ವಿಫಲರಾಗಿದ್ದರು. ಪರಿಣಾಮ ತಂಡ ಸಾಧಾರಣ ಮೊತ್ತ ಗಳಿಸಿತ್ತು.
Advertisement
ಇದರ ನಡುವೆಯೇ ಪಂದ್ಯದಲ್ಲಿ ಧೋನಿಯ ರಕ್ಷಣಾತ್ಮಕ ಆಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಮ್ಯಾಕ್ಸ್ ವೆಲ್ ಅರ್ಧ ಪಿಚ್‍ನಲ್ಲಿ ಬ್ಯಾಟಿಂಗ್ ನಡೆಸಲು ಕಷ್ಟಕರವಾಗಿತ್ತು. ಯಾವುದೇ ಬ್ಯಾಟ್ಸ್ ಮನ್‍ಗೆ ಆಡುವುದು ಅಷ್ಟು ಸುಲಭ ಆಗಿರಲಿಲ್ಲ ಎಂದಿದ್ದಾರೆ. ಧೋನಿ ತಮ್ಮ ಮ್ಯಾಚ್ ಫಿನಿಷಿಂಗ್ ಪ್ರದರ್ಶನಕ್ಕೆ ಖ್ಯಾತಿ ಪಡೆದವರು. ಪಂದ್ಯದ ಅಂತಿಮ ಓವರ್ ನಲ್ಲೂ ಕೂಡ ಅವರು ಸಿಕ್ಸರ್ ಸಿಡಿಸಿದ್ದರು. ಇದು ಅವರ ಬ್ಯಾಟಿಂಗ್ ಶಕ್ತಿಗೆ ಸಾಕ್ಷಿ. ಆದರೆ ಆ ಓವರ್ ನಲ್ಲಿ 7 ರನ್ ಗಳಿಸಲಷ್ಟೇ ಸಾಧ್ಯವಾಗಿದ್ದು, ಪಿಚ್ ಎಷ್ಟು ಕಠಿಣವಾಗಿತ್ತು ಎನ್ನುವುದಕ್ಕೆ ಉದಾಹಣೆ ಆಗಬಹುದು ಎಂದು ಸಮರ್ಥನೆಯನ್ನು ಮುಂದಿಟ್ಟಿದ್ದಾರೆ.
Advertisement
ಧೋನಿ ಅವರಂತಹ ಬ್ಯಾಟ್ಸ್ ಮನ್‍ರನ್ನು ಅಂತಿಮ ಓವರ್ ಗಳಲ್ಲಿ ಕೇವಲ 1 ಬೌಂಡರಿಗೆ ಸಿಮೀತಗೊಳಿಸಿದ್ದು ಕೂಡ ನಮ್ಮ ಬೌಲರ್ ಸಾಧನೆಯೇ ಸರಿ ಎಂದು ಎಂದಿದ್ದಾರೆ. ಇದೇ ವೇಳೆ ಕೆಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv