ಪರ್ಥ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ (Test Cricket) ಕೆಎಲ್ ರಾಹುಲ್ (KL Rahul) ಅವರು ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ.
ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಭಾರತ (Team India) 32 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಪರಿಸ್ಥಿತಿ ಹೀಗಿದ್ದರೂ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ರಾಹುಲ್ ನಿಧಾನವಾಗಿ ಬ್ಯಾಟ್ ಬೀಸಿ ಇನ್ನಿಂಗ್ಸ್ ಕಟ್ಟುತ್ತಿದ್ದರು.
Advertisement
ಭಾರತ ಇನ್ನಿಂಗ್ಸ್‌ನ 23 ಓವರ್ ಅನ್ನು ಸ್ಟ್ರಾಕ್ ಎಸೆಯುತ್ತಿದ್ದರು. ಎರಡನೇ ಎಸೆತದ ವೇಳೆ ಸ್ಟೈಕ್‌ನಲ್ಲಿ ರಾಹುಲ್ ಬಾಲನ್ನು ತಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟ್‌ನ ಎಡ್ಜ್ ಬಳಿ ಸಾಗಿ ವಿಕೆಟ್ ಕೀಪರ್ ಕೈ ಸೇರಿತು.
Advertisement
Advertisement
“His pad and bat are not together at that point in time as the ball passes.
“It’s (bat hitting pad) after, in fact, the ball passes the edge. Does Snicko pick up the sound of the bat hitting the pad?
“We’re assuming (Snicko) may be the outside edge of the bat but that may not… pic.twitter.com/hvG0AF9rdo
— 7Cricket (@7Cricket) November 22, 2024
Advertisement
ಆಸ್ಟ್ರೇಲಿಯಾದ (Australia) ಆಟಗಾರರು ಔಟ್ ಮನವಿ ಸಲ್ಲಿಸಿದರೂ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಹೀಗಾಗಿ ಆಸೀಸ್ ಆಟಗಾರರು ಡಿಆರ್‌ಎಸ್ (DRS) ಮನವಿ ಮಾಡಿದರು.
ರಿಪ್ಲೈ ವೇಳೆ ಚೆಂಡು ಬ್ಯಾಟ್‌ಗೆ ತಾಗಿದೆಯೇ ಅಥವಾ ಪ್ಯಾಡ್‌ಗೆ ತಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲವಾದರೂ, ಸ್ನಿಕ್ಕೋಮೀಟರ್ ಏರಿಳಿತವನ್ನು ಆಧರಿಸಿ ರಾಹುಲ್ ಔಟ್ ಎಂದು ತೀರ್ಪು ಪ್ರಕಟಿಸಲಾಯಿತು. ಹೀಗಾಗಿ ಫೀಲ್ಡ್ ಅಂಪೈರ್ ಕೂಡ ತಮ್ಮ ನಿರ್ಧಾರ ಬದಲಿಸಿ ಔಟ್ ತೀರ್ಪು ನೀಡಿದರು. 26 ರನ್ ಗಳಿಸಿದ ಕೆಎಲ್ ರಾಹುಲ್ ಅಸಮಾಧಾನದಿಂದಲೇ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಇದನ್ನೂ ಓದಿ: ಮುಂದಿನ 3 ಐಪಿಎಲ್ ಸೀಸನ್‌ಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
#IndvAus Now that KL Rahul is back in the pavilion..
They are showing the front angle..
Absolutely! Shameful from FOX sports..
There is a gap between bat & ball pic.twitter.com/1ADPz3MG9X
— Anurag Sinha (@anuragsinha1992) November 22, 2024
ನಂತರ ರಿಪ್ಲೈ ನೋಡಿದಾಗ ಪ್ಯಾಡಿಗೆ ಬ್ಯಾಟ್ ಬಡಿದಿರುವುದು ಗೊತ್ತಾಗಿದೆ. ಮೂರನೇ ಅಂಪೈರ್ ಸ್ವಲ್ಪ ಪರಿಶೀಲನೆ ಮಾಡಿ ಇನ್ನೊಂದು ಕೋನದಿಂದ ನೋಡಿದ್ದರೆ ತೀರ್ಪು ಬದಲಾಗುವ ಸಾಧ್ಯತೆ ಇತ್ತು. ಈಗ ಈ ವಿಚಾರವನ್ನು ಅಭಿಮಾನಿಗಳು ಪ್ರಸ್ತಾಪಿಸಿ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.