ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಅಂತಿಮ 2 ಟೆಸ್ಟ್ ಪಂದ್ಯಗಳಿಗೆ 19 ಮಂದಿ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಸಿದ್ದು, ಕನ್ನಡಿಗ ಮಯಾಂಕ್ ಅಗರ್ವಾಲ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಿಸಿಸಿಐ ಪ್ರಕಟಿಸಿರುವ ಪಟ್ಟಿಯಲ್ಲಿ ಏಷ್ಯಾಕಪ್ ಟೂರ್ನಿಯ ವೇಳೆ ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಕಮ್ ಬ್ಯಾಕ್ ಮಾಡಲು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಪೃಥ್ವಿ ಸ್ಥಾನದಲ್ಲಿ ಮಯಾಂಕ್ ಕೂಡ ಸ್ಥಾನ ಪಡೆದಿದ್ದಾರೆ.
Advertisement
ಆಸೀಸ್ ವಿರುದ್ಧ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದ ಪೃಥ್ವಿ ಶಾ ಸಂಪೂರ್ಣವಾಗಿ ಚೇತರಿಕೆ ಆಗದ ಕಾರಣ ಅವರನ್ನು ಟೆಸ್ಟ್ ಸರಣಿಯ ಉಳಿದ 2 ಪಂದ್ಯಗಳ ಆಯ್ಕೆ ವೇಳೆ ಪರಿಗಣಿಸಿಲ್ಲ. ಆದರೆ ಕೆಲ ದಿನಗಳ ಹಿಂದೆ ಕೋಚ್ ರವಿಶಾಸ್ತ್ರಿ ಮಾಹಿತಿ ನೀಡಿ ಪೃಥ್ವಿ ಶಾ ಕಮ್ ಬ್ಯಾಕ್ ಮಾಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
Advertisement
UPDATE: @hardikpandya7 and @mayankcricket added to #TeamIndia's Test squad. #AUSvIND
Details: https://t.co/rWndXYJ2eN pic.twitter.com/t20hXpwNBH
— BCCI (@BCCI) December 17, 2018
Advertisement
ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಭರಸವೆ ಮೂಡಿಸಿದ್ದ ಪೃಥ್ವಿ ಶಾ ಆಸೀಸ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇತ್ತು. ಆದರೆ ಗಾಯಗೊಂಡು ತಂಡದಿಂದ ಹೊರ ನಡೆದಿದ್ದರು. ಪೃಥ್ವಿ ಶಾ ಗೈರು ಹಾಜರಿಯಲ್ಲಿ ಕೆಎಲ್ ರಾಹುಲ್, ಮುರಳಿ ವಿಜಯ್ ತಂಡದ ಆರಂಭಿಕರ ಸ್ಥಾನ ಪಡೆದಿದದ್ದು, ಇಲ್ಲವಾದರೆ ಪೃಥ್ವಿ ಶಾರೊಂದಿಗೆ ಒಬ್ಬರು ಮಾತ್ರ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಉಳಿದಂತೆ ಆಸೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯ ಡಿಸೆಂಬರ್ 26, ಅಂತಿಮ ಪಂದ್ಯ ಜನವರಿ 3 ರಂದು ಆರಂಭವಾಗಲಿದೆ. ಇದನ್ನು ಓದಿ : 2 ತಿಂಗಳ ಬಳಿಕ ಹಾರ್ದಿಕ್ ಬೌಲಿಂಗ್ – ವಿಡಿಯೋ
Advertisement
ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಚೇತೇಶ್ವರ ಪೂಜಾರ, ರಹಾನೆ (ಉಪನಾಯಕ), ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಬ್ ಪಂತ್(ವಿಕೆಟ್ ಕೀಪರ್), ಪಾರ್ಥಿಕ್ ಪಟೇಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಬುಮ್ರಾ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv