ಮೆಲ್ಬರ್ನ್: ಭಾರತ (Team India) ಮತ್ತು ಆಸ್ಟ್ರೇಲಿಯಾ (Australia) ಮಧ್ಯೆ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ (Virat Kohli) ಮತ್ತು 19 ವರ್ಷದ ಸ್ಯಾಮ್ ಕಾನ್ಸ್ಟಸ್ (Sam Konstas) ನಡುವೆ ಕಿತ್ತಾಟ ನಡೆದಿದೆ.
ಇಬ್ಬರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಂತೆ ಅಂಪೈರ್‌ಗಳು ಮತ್ತು ಇತರ ಆಟಗಾರರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಇಬ್ಬರ ನಡುವಿನ ಕಿತ್ತಾಟದ ವಿಡಿಯೋ ವೈರಲ್ ಆಗಿದೆ.
Advertisement
Virat Kohli and Sam Konstas exchanged a heated moment on the MCG. #AUSvIND pic.twitter.com/QL13nZ9IGI
— cricket.com.au (@cricketcomau) December 26, 2024
Advertisement
ಆಗಿದ್ದೇನು?
ಜಸ್ಪ್ರೀತ್ ಬುಮ್ರಾ (Jasprit Bumrah) ಇನಿಂಗ್ಸ್‌ನ 11ನೇ ಓವರ್ ಎಸೆಯುತ್ತಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಕೀಪರ್ ಪಂತ್ ಕಡೆಗೆ ಬಾಲ್ ಹಿಡಿದುಕೊಂಡು ಬರುತ್ತಿದ್ದಾಗ ಇಂದು ಟೆಸ್ಟ್ ಕ್ಯಾಪ್ ಧರಿಸಿದ ಸ್ಯಾಮ್‌ಗೆ ಭುಜದಿಂದ ಡಿಕ್ಕಿ ಹೊಡೆದಿದ್ದಾರೆ. ಕೂಡಲೇ ಸಿಟ್ಟಾದ ಸ್ಯಾಮ್ ಕೊಹ್ಲಿಯನ್ನು ದಿಟ್ಟಿಸಿ ನೋಡಿದ್ದಾರೆ. ಈ ವೇಳೆ ಕೊಹ್ಲಿ ಸ್ಯಾಮ್ ಜೊತೆ ಜಗಳಕ್ಕೆ ಇಳಿದಿದ್ದಾರೆ. ಕೊನೆಗೆ ಆರಂಭಿಕ ಆಟಗಾರ ಖವಾಜ ಹಾಗೂ ಅಂಪೈರ್‌ಗಳು ಬಂದು ಇಬ್ಬರನ್ನು ಸಮಾಧಾನ ಮಾಡಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ 2025 ರ ವೇಳಾಪಟ್ಟಿ ಪ್ರಕಟ; ಫೆ.23ರ ಭಾನುವಾರ ಭಾರತ-ಪಾಕ್ ಮುಖಾಮುಖಿ
Advertisement
Advertisement
The man of the moment 👊
Sam Konstas chats with @copes9 about his first Test innings…
And everything else that happened during it as well #AUSvIND pic.twitter.com/v7hhwMWgtB
— 7Cricket (@7Cricket) December 26, 2024
ಐಸಿಸಿ ನಿಯಮ ಏನು?
ಯಾವುದೇ ಆಟಗಾರ ತನ್ನ ಸಹ ಆಟಗಾರ, ಎದುರಾಳಿ, ಆಟಗಾರನ ಸಹಾಯಕ್ಕೆ ಬರುವ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫ್ರಿ ಅಥವಾ ಮೈದಾನದಲ್ಲಿ ಯಾವುದೇ ಇತರೆ ವ್ಯಕ್ತಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡುವಂತಿಲ್ಲ. ದೈಹಿಕವಾಗಿ ಹಲ್ಲೆ ಅಥವಾ ನಿಂದಿಸಿದರೆ ಶಿಕ್ಷೆ ವಿಧಿಸಬಹುದು.
ಮೂಲಗಳ ಪ್ರಕಾರ ಪಂದ್ಯದ 20% ಶುಲ್ಕ ಕಡಿತವಾಗಿದೆ. ಅನುಚಿತ ವರ್ತನೆಗಾಗಿ ಕೊಹ್ಲಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ವರದಿಯಾಗಿದೆ.