– ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಟೆಸ್ಟ್ ಶತಕ
– ಆಸೀಸ್ ವಿರುದ್ಧ ಅತಿಹೆಚ್ಚು ಸಿಕ್ಸರ್ ದಾಖಲೆ
ಮೆಲ್ಬೋರ್ನ್: ಬಾರ್ಡರ್ – ಗವಾಸ್ಕರ್ ಟ್ರೋಫಿ ಸರಣಿಯ 4ನೇ ಟೆಸ್ಟ್‌ನ 3ನೇ ದಿನದ ಅಂತ್ಯಕ್ಕೆ ಭಾರತ (Team India), 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿದೆ. ಇದರಿಂದ ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಇನ್ನೂ 116 ರನ್ ಗಳಿಸಬೇಕಿದೆ. 8ನೇ ವಿಕೆಟ್‌ಗೆ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy), ವಾಷಿಂಗ್ಟನ್ ಸುಂದರ್ ಅವರ ಶತಕದ ಜೊತೆಯಾಟದಿಂದ ಭಾರತ, ಫಾಲೋ ಆನ್‌ನಿಂದ ಬಚಾವ್ ಆಗಿದೆ.
Advertisement
2ನೇ ದಿನ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಮತ್ತು ವಿರಾಟ್ ಕೊಹ್ಲಿ (Virat Kohli) ನಡುವೆ 3ನೇ ವಿಕೆಟಿಗೆ 102 ರನ್ನುಗಳ ಉತ್ತಮ ಜೊತೆಯಾಟ ಬಂದಿತ್ತು. ಆದರೆ, ಜೈಸ್ವಾಲ್ ರನೌಟ್ ಆದ ಬೆನ್ನಲ್ಲೇ, ವಿರಾಟ್ ಕೊಹ್ಲಿ ಮತ್ತು ಆಕಾಶ್ ದೀಪ್ ಔಟ್ ಆಗುವ ಮೂಲಕ, ಭಾರತ ಹಿನ್ನಡೆ ಅನುಭವಿಸಿತ್ತು. ಎರಡನೇ ದಿನದ ಆಟದ ಅಂತದ ವೇಳೆ ಕೊನೇ 11 ರನ್‌ಗಳಿಗೆ 3 ವಿಕೆಟ್ ಪತನಗೊಂಡ ಪರಿಣಾಮ 164 ರನ್‌ಗಳಿಗೆ 5 ವಿಕೆಟ್ ಅನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಇದನ್ನೂ ಓದಿ: ಬೂಮ್ರಾಗೆ ಒಂದೇ ಓವರ್‌ನಲ್ಲಿ 18 ರನ್ ಚಚ್ಚಿದ 19ರ ಯುವಕ – ರೋಹಿತ್ ಪಡೆ ತಬ್ಬಿಬ್ಬು
Advertisement
Advertisement
3ನೇ ದಿನದ ಆಟ ಆರಂಭಿಸಿದ ಭಾರತ 30 ರನ್ ಗಳಿಸುವಷ್ಟರಲ್ಲೇ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ವಿಕೆಟ್ ಕಳೆದುಕೊಂಡಿತು. ನಂತರ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ (Washington Sundar) ಜೊತೆಯಾಟ ಆರಂಭವಾಯಿತು. ಆಸೀಸ್ ವೇಗ ಮತ್ತು ಸ್ಪಿನ್ ಎಸೆತಗಳನ್ನು ಸಮರ್ಥವಾಗಿ ನಿಭಾಯಿಸಿದ ರೆಡ್ಡಿ ಮತ್ತು ಸುಂದರ್, 8ನೇ ವಿಕೆಟಿಗೆ 127 ರನ್ (285 ಎಸೆತ) ಸೇರಿಸುವ ಮೂಲಕ, ಟೀಂ ಇಂಡಿಯಾವನ್ನು ಫಾಲೋ ಆನ್ ನಿಂದ ತಪ್ಪಿಸಿದರು. ಇವರಿಬ್ಬರ ತಾಳ್ಮೆಯ ಮತ್ತು ಹೊಂದಾಣಿಕೆಯ ಆಟ ಭಾರೀ ಪ್ರಶಂಸೆ ವ್ಯಕ್ತವಾಯಿತು. ಇದನ್ನೂ ಓದಿ: ಪಾಕ್ ಪ್ರಧಾನಿ ಜೊತೆ ವಿಶ್ವಕಪ್ ವೀಕ್ಷಣೆ – ಇಂಡೋ -ಪಾಕ್ ಕ್ರಿಕೆಟ್‌ಗೆ ಮತ್ತೆ ಚಾಲನೆ ನೀಡಿದ್ದ ಸಿಂಗ್!
Advertisement
ನಿತೀಶ್ ಚೊಚ್ಚಲ ಶತಕ:
ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಶತಕವನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದು ಒಂದು ಕಡೆ. ಇನ್ನೊಂದು ಕಡೆ, ಒಂದೇ ಸರಣಿಯಲ್ಲಿ ಆಸ್ಟ್ರೇಲಿಯಾದ ವಿರುದ್ದ ಅತಿಹೆಚ್ಚು ಸಿಕ್ಸರ್ (8) ಸಿಡಿಸಿದ ದಾಖಲೆಯನ್ನೂ ಬರೆದರು. ಮಗನ ಚೊಚ್ಚಲ ಶತಕಕ್ಕೆ ಪೆವಲಿಯನ್ ನಲ್ಲಿದ್ದ ನಿತೀಶ್ ಕುಮಾರ್ ತಂದೆ ಖುಷಿಯಿಂದ ಕಣ್ಣೀರಿಟ್ಟರು. ದೇವರಿಗೆ ಅಲ್ಲಿಂದಲೇ ಕೈಮುಗಿದರು, ಕುಟುಂಬದ ಇತರ ಸದಸ್ಯರನ್ನು ತಬ್ಬಿಕೊಂಡರು.
ಇನ್ನೊಂದು ಕಡೆ, ವಾಷಿಂಗ್ಟನ್ ಸುಂದರ್ ಅರ್ಧ ಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ತಾಳ್ಮೆಯಿಂದ 162 ಎಸೆತವನ್ನು ಎದುರಿಸಿ ಸುಂದರ್ 50 ರನ್ ಗಳಿಸಿ ನಾಥನ್ ಲಿಯಾನ್ ಗೆ ವಿಕೆಟ್ ಒಪ್ಪಿಸಿದರು. 3ನೇ ದಿನದ ಅಂತಕ್ಕೆ 105 ರನ್ ಗಳಿಸಿರುವ ನಿತೀಶ್ ರೆಡ್ಡಿ ಮತ್ತು 2 ರನ್ ಗಳಿಸಿರುವ ಮೊಹಮ್ಮದ್ ಸಿರಾಜ್ ಕ್ರೀಸ್‌ನಲ್ಲಿದ್ದಾರೆ. ಇದನ್ನೂ ಓದಿ: ಕೊನೆಯ 30 ನಿಮಿಷ ಆಟ| 11 ರನ್ ಅಂತರದಲ್ಲಿ 3 ವಿಕೆಟ್ ಪತನ – ಸಂಕಷ್ಟದಲ್ಲಿ ಭಾರತ
2ನೇ ದಿನದ ಆಟದ ವೇಳೆ, ಆಸೀಸ್ ಬೃಹತ್ ರನ್ ಪೇರಿಸಿದಾಗ, ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಮಾಜಿ ನಾಯಕ ಸುನೀಲ್ ಗವಾಸ್ಕರ್ ಮತ್ತು ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಕಟುವಾದ ಪದದಿಂದ ಟೀಕಿಸಿದ್ದರು. ಅದಕ್ಕೆ ಕಾರಣ, ಶುಭಮನ್ ಗಿಲ್ ಅವರ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಆಯ್ಕೆ ಮಾಡಿದ್ದು. ಆದ್ರೆ ಬೌಲಿಂಗ್ ಬ್ಯಾಟಿಂಗ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಿದ ವಾಷಿಂಗ್ಟನ್ ಸುಂದರ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.