ಗುವಾಹಟಿ: ಟೀಂ ಇಂಡಿಯಾದ (Team India) ಆರಂಭಿಕ ಆಟಗಾರ ಋತುರಾಜ್ ಗಾಯಕ್‌ವಾಡ್ (Ruturaj Gaikwad) ಆಸ್ಟ್ರೇಲಿಯಾ (Australia) ವಿರುದ್ಧ ಶತಕ (Century) ಸಿಡಿಸಿ ಭಾರತದ ಪರ ದಾಖಲೆ ಬರೆದಿದ್ದಾರೆ.
ಟಿ20 (T20) ಪಂದ್ಯದಲ್ಲಿ ಆಸೀಸ್ ವಿರುದ್ಧ ಶತಕ ಹೊಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಗಾಯಕ್‌ವಾಡ್ ಪಾತ್ರರಾಗಿದ್ದಾರೆ.
32 ಎಸೆತಗಳಲ್ಲಿ ಅರ್ಧಶತಕ ಹೊಡೆದ ಗಾಯಕ್‌ವಾಡ್ ನಂತರ 20 ಎಸೆತಗಳಲ್ಲಿ 50 ರನ್ ಸಿಡಿಸಿ ಮೊದಲ ಶತಕ ಹೊಡೆದರು. 52 ಎಸೆತಗಳಲ್ಲಿ 100 ರನ್ ಹೊಡೆದ ಗಾಯಕ್ವಾಡ್ ಮಾಕ್ಸ್‌ವೆಲ್ ಎಸೆದ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸ್ ಮತ್ತು 2 ಬೌಂಡರಿ ಸಿಡಿಸಿದರು. ಅಂತಿಮವಾಗಿ ಗಾಯಕ್‌ವಾಡ್ ಔಟಾಗದೇ 123 ರನ್ (57 ಎಸೆತ, 13 ಬೌಂಡರಿ, 7 ಸಿಕ್ಸ್) ಚಚ್ಚಿದರು. ಇದನ್ನೂ ಓದಿ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕ್‌ನಲ್ಲಿ ನಡೆಯುವುದು ಅನುಮಾನ
- Advertisement
- Advertisement
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 24 ರನ್‌ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್ ಮತ್ತು ಇಶನ್ ಕಿಶನ್ ಔಟಾಗಿದ್ದರು. ನಂತರ ಸೂರ್ಯಕುಮಾರ್ ಯಾದವ್ 39 ರನ್(29 ಎಸೆತ, 5 ಬೌಂಡರಿ, 1 ಸಿಕ್ಸರ್), ತಿಲಕ್ ವರ್ಮಾ ಔಟಾಗದೇ 31 ರನ್ ( 24 ಎಸೆತ, 4 ಬೌಂಡರಿ) ಹೊಡೆದರು.
ಇತರೇ ರೂಪದಲ್ಲಿ 23 ರನ್( ಲೆಗ್ ಬೈ 4, ನೋಬಾಲ್ 1 , ವೈಡ್ 18) ಬಂದಿದ್ದರಿಂದ ಅಂತಿಮವಾಗಿ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು.
ರನ್ ಏರಿದ್ದು ಹೇಗೆ?
50 ರನ್ – 41 ಎಸೆತ
100 ರನ್ – 72 ಎಸೆತ
150 ರನ್ – 97 ಎಸೆತ
200ರನ್ – 116 ಎಸೆತ